ಯುಟ್ಯೂಬ್ ನಲ್ಲಿ ಸೌಂಡ್ ಮಾಡುತ್ತಿದೆ ಯುವರತ್ನನ `ಪವರ್ ಆಫ್ ಯೂತ್` ಸಾಂಗ್..!
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾದ ಲಿರಿಕಲ್ ಸಾಂಗ್ ಈಗ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಿದೆ.ವಿಶೇಷವೆಂದರೆ ಪುನೀತ್ ರಾಜಕುಮಾರ್ ಅವರ ಚಿತ್ರ ಎರಡನೇ ಬಾರಿಗೆ ತೆಲುಗಿಗೆ ಲಗ್ಗೆ ಇಡುತ್ತಿದೆ, ಇದಕ್ಕೂ ಮೊದಲು ಅವರ ಜಾಕಿ ಸಿನಿಮಾ ತೆಲುಗಿನಲ್ಲಿ ಬಿಡುಗಡೆಯಾಗಿತ್ತು.
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾದ ಲಿರಿಕಲ್ ಸಾಂಗ್ ಈಗ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಿದೆ.ವಿಶೇಷವೆಂದರೆ ಪುನೀತ್ ರಾಜಕುಮಾರ್ ಅವರ ಚಿತ್ರ ಎರಡನೇ ಬಾರಿಗೆ ತೆಲುಗಿಗೆ ಲಗ್ಗೆ ಇಡುತ್ತಿದೆ, ಇದಕ್ಕೂ ಮೊದಲು ಅವರ ಜಾಕಿ ಸಿನಿಮಾ ತೆಲುಗಿನಲ್ಲಿ ಬಿಡುಗಡೆಯಾಗಿತ್ತು.
ಇದನ್ನೂ ಓದಿ: ಪವರ್ ಸ್ಟಾರ್ ಫ್ಯಾನ್ಸ್ ಗೆ ' ಗುಡ್ ನ್ಯೂಸ್': ಆರಂಭವಾಯ್ತು 'ಯುವರತ್ನ'ನ ಆರ್ಭಟ!
ಪವರ್ ಆಫ್ ಯೂತ್ ಎನ್ನುವ ಸಾಂಗ್ ಗೆ ಅಭಿಮಾನಿ ದೇವರು ಫುಲ್ ಫಿಧಾ ಆಗಿದ್ದಾನೆ.ಈ ಸಾಂಗ್ ಯುಟ್ಯೂಬ್ ನಲ್ಲಿ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ 1 ಲಕ್ಷ 25 ಸಾವಿರ ವಿಕ್ಷಣೆಯನ್ನು ಕಂಡಿದೆ.ಸೂಪರ್ ಹಿಟ್ ಚಿತ್ರ ರಾಜಕುಮಾರ ನಂತರ ಎರಡನೇ ಬಾರಿಗೆ ನಿರ್ದೇಶಕ, ನಟ ಮತ್ತು ನಿರ್ಮಾಪಕರನ್ನು ಈ ಚಿತ್ರ ಮತ್ತೆ ಒಗ್ಗೂಡಿಸಿದೆ. ಈ ಹಿಂದೆ ಕೆಜಿಎಫ್ ಅನ್ನು ಪ್ಯಾನ್-ಇಂಡಿಯಾ ಮಟ್ಟಕ್ಕೆ ಕೊಂಡೊಯ್ದ ವಿಜಯ್ ಕಿರಗಂದೂರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.ಈ ಚಿತ್ರವು ಪ್ರಸ್ತುತ ನಿರ್ಮಾಣದ ನಂತರದ ಹಂತದಲ್ಲಿದೆ.
ಸ್ಯಾಂಡಲ್ ವುಡ್ ನಲ್ಲಿ ನೂತನ ದಾಖಲೆ ಸೃಷ್ಟಿಸಿದ ಪುನೀತ್ ರಾಜ್ ಕುಮಾರ್ ಬ್ಯಾನರ್ ನ ಈ ಸಿನಿಮಾ
ಈ ಚಿತ್ರದಲ್ಲಿ ಖಳನಾಯಕನಾಗಿ ಧನಂಜಯ್ ಎದುರಾಳಿಯಾಗಿ ಕಾಣಿಸಿಕೊಂಡಿದ್ದು, ದಿಗಂತ್, ಸೋನು ಗೌಡ ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಮುಂದಿನ ವರ್ಷದ ಆರಂಭದಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ಆದರೆ, ಇದುವರೆಗೂ ಯಾವುದೇ ಅಧಿಕೃತ ಧೃಡಿಕರಣ ಬಂದಿಲ್ಲ.