ಪವರ್ ಸ್ಟಾರ್ ಫ್ಯಾನ್ಸ್ ಗೆ ' ಗುಡ್ ನ್ಯೂಸ್': ಆರಂಭವಾಯ್ತು 'ಯುವರತ್ನ'ನ ಆರ್ಭಟ!

'ಯುವರತ್ನ' ಚಿತ್ರದ ಬಗ್ಗೆ ಭರ್ಜರಿ ಗುಡ್ ನ್ಯೂಸ್!

Last Updated : Nov 23, 2020, 01:03 PM IST
  • 'ಯುವರತ್ನ' ಚಿತ್ರದ ಬಗ್ಗೆ ಭರ್ಜರಿ ಗುಡ್ ನ್ಯೂಸ್!
  • ಚಿತ್ರದ ಸಾಂಗ್ 'ಪವರ್ ಆಫ್ ಯೂಥ್' ರಿಲೀಸ್ ದಿನಾಂಕ ಹೊರಬೀದಿದ್ದೆ
  • .ಡಿಸೆಂಬರ್ 2ರಂದು ಬಿಡುಗಡೆಯಾಗಲಿದೆ- ನಿರ್ದೇಶಕ ಸಂತೋಷ್ ಆನಂದರಾಮ್
ಪವರ್ ಸ್ಟಾರ್ ಫ್ಯಾನ್ಸ್ ಗೆ ' ಗುಡ್ ನ್ಯೂಸ್': ಆರಂಭವಾಯ್ತು 'ಯುವರತ್ನ'ನ ಆರ್ಭಟ! title=

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಯುವರತ್ನ' ಚಿತ್ರದ ಬಗ್ಗೆ ಭರ್ಜರಿ ಗುಡ್ ನ್ಯೂಸ್ ಹೊರಬಿದ್ದಿದೆ. ಈ ಕುರಿತು ಚಿತ್ರ ತಂಡ ಮಾಹಿತಿ ನೀಡಿದೆ.

ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಸಯೇಷಾ, ಪುನೀತ್ ರಾಜ್ ಕುಮಾರ್(Puneeth Rajkumar) ಅವರಿಗೆ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಬೇರೆ ಭಾಷೆಯ ಸಿನಿಮಾಗಳು ಕನ್ನಡಕ್ಕೆ ಡಬ್​ ಆಗುತ್ತಿರುವುದನ್ನು ನೋಡುತ್ತಿದ್ದೇವೆ. ಅಂತೆಯೇ  ಈಗ ಕನ್ನಡ ಸಿನಿಮಾ ಸಹ ತೆಲುಗಿನಲ್ಲಿ ರಿಲೀಸ್​ ಆಗಲು ತಯಾರಾಗಿದೆ. ಪುನೀತ್​ ಅವರ ಸಿನಿಮಾ ಇದೇ ಮೊದಲ ಬಾರಿಗೆ ತೆಲುಗಿನಲ್ಲಿ ತೆರೆ ಕಾಣಲಿದೆ.

ಶೂಟಿಂಗ್ ಗೆ ಮೊದಲು ಕೊರೊನಾ ಪರೀಕ್ಷೆಗೆ ಒಳಗಾದ ಬಾಲಿವುಡ್ ನಟಿ ಕತ್ರಿನಾ ಕೈಫ್

ಹೌದು, ಪುನೀತ್​ ಟಾಲಿವುಡ್​ನಲ್ಲಿ ಯುವರತ್ನ ಸಿನಿಮಾ ಮೂಲಕ ಡೆಬ್ಯೂ ಮಾಡಲಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್​ ನಲ್ಲಿ ವಿಜಯ್ ಕಿರಗಂದೂರು ನಿರ್ಮಾಣದ ಸಿನಿಮಾ ಯುವರತ್ನ ಟಾಲಿವುಡ್​ನಲ್ಲೂ ತೆರೆಕಾಣಲಿದೆ. ಈ ವಿಷಯವನ್ನು ಪುನೀತ್​ ರಾಜ್​ಕುಮಾರ್​ ತಮ್ಮ ಟ್ವೀಟ್​ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.

Drugs Case: ಭಾರತಿ ಹಾಗೂ ಹರ್ಷ್ ಗೆ ಭಾರಿ ಹಿನ್ನಡೆ, 14 ದಿನಗಳ ನ್ಯಾಯಾಂಗ ವಶಕ್ಕೆ

ಯುವರತ್ನ ಚಿತ್ರದ ಸಾಂಗ್ 'ಪವರ್ ಆಫ್ ಯೂಥ್' ರಿಲೀಸ್ ದಿನಾಂಕ ಹೊರಬೀದಿದ್ದೆ. ಡಿಸೆಂಬರ್ 2ರಂದು ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಸಂತೋಷ್ ಆನಂದರಾಮ್ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಚಿತ್ರತಂಡ ಮತ್ತೊಂದು ಗುಡ್ ನ್ಯೂಸ್ ನೀಡಿದ್ದು ಡಿಸೆಂಬರ್ 2ರಂದು ತೆಲುಗಿನಲ್ಲೂ ಬಿಡುಗಡೆಯಾಗಲಿದೆ ಎಂದು ಹೇಳಿದೆ.

Twitterನಲ್ಲಿ ಭಾರಿ ಟ್ರೆಂಡ್ ಸೃಷ್ಟಿಸಿದ #BoycottNetflix! ಕಾರಣ ಇಲ್ಲಿದೆ

Trending News