ನವದೆಹಲಿ: ಕಣ್ಸನ್ನೆ ಕುವರಿ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಈಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾತ್ ಟಬ್ ಅಲ್ಲಿ ಕುಳಿತು ಫೋಟೊಶೂಟ್ ಮಾಡಿಸಿರುವ ಪ್ರಿಯಾ ಹಾಟ್ ಫೋಟೋಗಳೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 


COMMERCIAL BREAK
SCROLL TO CONTINUE READING

ಹೌದು, ಪ್ರಿಯಾ ವಾರಿಯರ್ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಬಾತ್ ಟಬ್ ನಲಿ ವಿಭಿನ್ನ ಭಂಗಿಗಳಲ್ಲಿ ಕುಳಿತು ಫೋಟೋ ತೆಗೆಸಿಕೊಂಡಿದ್ದು, ನೂತನ ವರ್ಷದ ಆಗಮನದ ಹಿನ್ನೆಲೆಯಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಈ ಹಿಂದಿನ ಚಿತ್ರಗಳಲ್ಲಿ ಅವರ ಕಣ್ಣಲ್ಲಿ ಕಾಣಿಸುತ್ತಿದ್ದ ಮುಗ್ಧತೆ ಮಾಯವಾಗಿ ಈ ಹೊಸ ಫೋಟೋದಲ್ಲಿ ಪ್ರೌಢತೆ ಎದ್ದು ಕಾಣುತ್ತಿದೆ. 


ಸೋಶಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಪ್ರಿಯಾ ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ ಹೊಸ ಫೋಟೋಗಳು, ವೀಡಿಯೋಗಳನ್ನು ಹಾಕುತ್ತಾ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ.  



ಒರು ಅಡಾರ್ ಲವ್ ಚಿತ್ರದ ಒಂದೇ ಒಂದು ಕಣ್ ಸನ್ನೆ ದೃಶ್ಯದಿಂದ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದ್ದ ಮಲೆಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಪತಿ ನಿಕ್ ಜೋನಸ್ ಅವರನ್ನೂ ಹಿಂದಿಕ್ಕಿ 2018ರಲ್ಲಿ ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚಾದ ಸೆಲೆಬ್ರಿಟಿ ಎಂಬ ಗೌರವಕ್ಕೆ ಇತ್ತೀಚೆಗಷ್ಟೇ ಪಾತ್ರರಾಗಿದ್ದರು.