ನವದೆಹಲಿ: ನಟಿ ಪ್ರಿಯಾ ವಾರಿಯರ್ ತಮ್ಮ ಕಣ್ಸನ್ನೆ ಮೂಲಕವೇ ದಿನ ಬೆಳಗಾಗುವುದರೊಳಗೆ ಲಕ್ಷಾಂತರ ಅಭಿಮಾನಿಗಳನ್ನು ಸೃಷ್ಟಿಸಿದ್ದರು. ಹೌದು ಈ ವೈರಲ್ ಜಮಾನದಲ್ಲಿ ಖ್ಯಾತಿ ಎನ್ನುವುದು ಹೇಗೂ ಬಂದೂ ಬಿಡಬಹುದು ಎನ್ನುವುದಕ್ಕೆ ಕೇವಲ ಈಕೆಯ ನಿದರ್ಶನವಷ್ಟೇ ಸಾಕು.


COMMERCIAL BREAK
SCROLL TO CONTINUE READING

ಆದರೆ ಈಗ ಈ ನಟಿ ಮತ್ತೊಂದು ಕಾರಣಕ್ಕಾಗಿ ಸುದ್ದಿ ಮಾಡಿದ್ದಾರೆ. ಅಷ್ಟಕ್ಕೋ ಅವರು ಈಗ ಸುದ್ದಿಯಾಗಿರುವುದು ಯಾವುದಕ್ಕೆ ಅಂತೀರಾ? ಅದು ಅವರು ಲಿಪ್ ಮಾಡುವ ದೃಶ್ಯದಲ್ಲಿ ಮೈಚಳಿ ಬಿಟ್ಟು ಅಭಿನಯಿಸಿರುವುದನ್ನು ನೋಡಿರುವ ಚಿತ್ರ ರಸಿಕರು ಈಗ ಬೆಕ್ಕಸ ಬೆರಗಾಗಿದ್ದಾರೆ. ಹೌದು,ಈ ದೃಶ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಆ ಮೂಲಕ ಈಗ ಮತ್ತೊಮ್ಮೆ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಒರು ಆಡಾರ್ ಲವ್ ಸಿನಿಮಾದಲ್ಲಿ ಬರುವ ಈ ದೃಶ್ಯವಂತೂ ಈಗ ಎಲ್ಲ ಪಡ್ಡೆ ಹುಡುಗರ ನಿದ್ದೆಗೆಡಿಸುವ ಹಾಗಿದೆ.


ಬರುವ ಫೆ.14 ರಂದು ಪ್ರೇಮಿಗಳ ದಿನಾಚರಣೆ ನಿಮಿತ್ತ ನಾಲ್ಕು ಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರದ ವಿಶೇಷವೇನೆಂದರೆ ಈ ಚಿತ್ರ ಬಿಡುಗಡೆಗೂ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿದೆ. ಕೇವಲ ಒಂದೇ ಕಣ್ಸನ್ನೆಗೆ ಲಕ್ಷಾಂತರ ಫ್ಯಾನ್ ಗಳನ್ನು ಹೊಂದುವುದೆಂದರೆ ಅದು ಸಾಮಾನ್ಯ ಮಾತಲ್ಲ ಬಿಡಿ. ಆದ್ದರಿಂದ ಸಕ್ಸಸ್ ಎಂದರೆ ಅದು ಪ್ರಿಯಾ ಪಡೆದ ಸಕ್ಸಸ್ ಹಾಗೆ ಇರಬೇಕು ಅಂತಾರೆ ಎಲ್ಲಾ ಫ್ಯಾನ್ಸ್.