ನವದೆಹಲಿ: ಪ್ರಿಯಾ ವಾರಿಯರ್  ತಮ್ಮ ಹುಬ್ಬು ಕುಣಿಸುವಿಕೆಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಮಾಡಿದ್ದರು. ಇದರಿಂದಲೆ ಅವರಿಗೆ ಟ್ವಿಟ್ಟರ್ ಮತ್ತು ಇನ್ಸ್ತಾಗ್ರಾಂ ನಲ್ಲಿ ಕೇವಲ ಒಂದೇ ದಿನದಲ್ಲಿ ಲಕ್ಷಾಂತರ ಫ್ಯಾನ್ ಫಾಲೋವರ್ಸ್ ಗಳನ್ನೂ ಅವರು ಹೊಂದಿದ್ದರು. ಇದಾದ  ನಂತರ ಅವರಿಗೆ ಆನ್ ಲೈನ್ ವೇದಿಕೆಗಳಲ್ಲಿ ಹಲವಾರು ಫ್ಯಾನ್ ಕ್ಲಬ್ ಗಳು ಕೂಡಾ ಪ್ರಾರಂಭವಾಗಿದ್ದವು. 



COMMERCIAL BREAK
SCROLL TO CONTINUE READING

ಈಗ ಅವರು ಮತ್ತೆ ಸುದ್ದಿಯಲ್ಲಿದಾರೆ. ಹಾಗಾದರೆ ಏನಂತೀರಾ? ಆ ಸುದ್ದಿ. ಹೌದು ಅವರು ಈ ಬಾರಿ ಸುದ್ದಿಯಾಗಿರುವುದು ಹುಬ್ಬು ಕುನಿಸುವುದಕ್ಕೆ ಅಲ್ಲ, ಬದಲಾಗಿ ಅವರ ಮೇಕಪ್ ರೂಂ ನ ವಿಡಿಯೋ ವೈರಲ್ ಗೆ.ಈ ವೈರಲ್ ಆದ ವಿಡಿಯೋದಲ್ಲಿ ಅವರು ಎಂದಿನಂತೆ  ಕೊನೆಯಲ್ಲಿ ಒದು ಅದಾರ್ ಲವ್ ನಲ್ಲಿ ಮಾಡಿದ್ದ ಕಣ್ಸನ್ನೆಯನ್ನು ಮತ್ತೆ ಮಾಡಿ ಪಡ್ಡೆ ಹುಡುಗರಿಗೆ ಲವ್ ಗನ್ನ ಇಕ್ಕಿದ್ದಾಳೆ ಎಂದು ಹೇಳಬಹುದು. ಆ ಮೂಲಕ  ಕಣ್ಸನ್ನೆ ಕುವರಿ ತನ್ನ ಈ ವಿಂಕ್ ನಿಂದ ಯುವಕರ ಹೃದಯ ಕದ್ದಿರುವುದಂತು ಸುಳ್ಳಲ್ಲ ಎಂದು ಹೇಳಬಹುದು.