ನವದೆಹಲಿ: ಪ್ರಿಯಾಂಕಾ ಚೋಪ್ರಾ (Priyanka Chipra Nick Jonas) ನಿತ್ಯ ತನ್ನ ಕೆಲ ಹೇಳಿಕೆಗಳಿಂದ ಚರ್ಚೆಯಲ್ಲಿರುತ್ತಾಳೆ. ಪ್ರಿಯಾಂಕಾ ಅದ್ಭುತ ನಟಿಯಾಗಿರುವುದರ ಜೊತೆಗೆ ಸಾಮಾಜಿಕ ಜಾಲತಾಣಗಳ (Priyanka Chipra Instagram) ಕ್ವೀನ್ ಕೂಡ ಆಗಿದ್ದಾಳೆ. ಆದರೆ ಈ ಕ್ವೀನ್ ತನ್ನ ಹೆಸರಿನಿಂದ Jonas ಉಪನಾಮವನ್ನು ತೆಗೆದುಹಾಕಿದಾಗ ಅಭಿಮಾನಿಗಳೂ ಕೂಡ ಬೆಚ್ಚಿಬಿದ್ದಿದ್ದರು. ಆದೆ, ಇದೀಗ ಮತ್ತೊಮ್ಮೆ ಪ್ರಿಯಾಂಕಾ ಇಂತಹುದೇ ಒಂದು ಕಾರಣಕ್ಕಾಗಿ ಮತ್ತೆ ಸುದ್ದಿ ಮಾಡಿದ್ದಾಳೆ.  ಇದರಲ್ಲಿ 'ನಿಕ್ ಜೋನಾಸ್ (Priyanka Chorpa Husband) ಹೆಂಡತಿ' ಎಂದು ಆಕೆಯನ್ನು ಸಂಬೋಧಿಸುವುದು ಆಕೆಗೆ ಇಷ್ಟವಿಲ್ಲ ಎಂಬಂತೆ ತೋರುತ್ತಿದೆ. 


COMMERCIAL BREAK
SCROLL TO CONTINUE READING

'ನಿಕ್ ಜೋನಾಸ್ ಅವರ ಹೆಂಡತಿ' ಎಂದು ಕರೆಯುವುದು ನನಗೆ ಇಷ್ಟವಿಲ್ಲ
ಸಾಮಾಜಿಕ ಮಾಧ್ಯಮ ಖಾತೆಯ ತನ್ನ ಹೆಸರಿನಿಂದ ತಮ್ಮ ಪತಿ ನಿಕ್ ಜೋನಾಸ್ ಅವರ ಉಪನಾಮವನ್ನು ಕೈಬಿಟ್ಟಿರುವ  ಪ್ರಿಯಾಂಕಾ ಚೋಪ್ರಾ, ಇದೀಗ 'ನಿಕ್ ಜೋನಾಸ್' ಪತ್ನಿ ಎಂದು ಕರೆದಿದ್ದಕ್ಕೆ ಕುಪಿತಗೊಂಡಿದ್ದಾಳೆ. ಅವಳು Instagram ನಲ್ಲಿ ಕೆಲವು ಸುದ್ದಿಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದು, ಅವುಗಳಲ್ಲಿ  ಅವರನ್ನು 'ನಿಕ್ ಜೋನಾಸ್' ಪತ್ನಿ ಎಂದು ಸಂಬೋಧಿಸಲಾಗಿದೆ. ನಟಿ ಕೆಲವು ಸುದ್ದಿಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ ಮತ್ತು ಅವರ ಬಯೋಗೆ ತನ್ನ IDMB ಲಿಂಕ್ ಅನ್ನು ಸೇರಿಸಬೇಕೇ ಎಂದು ಕೇಳಿದ್ದಾರೆ. ಅಷ್ಟೇ ಅಲ್ಲ ಮಹಿಳೆಯರ ಜೊತೆಗೆಯೇ ಈ ರೀತಿಯ ವ್ಯವಹಾರ ಹೇಗೆ ನಡೆಯಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. 


ಸ್ಕ್ರೀನ್‌ಶಾಟ್ ಹಂಚಿಕೊಳ್ಳುವ ಮೂಲಕ ಈ ವಿಷಯ ಪ್ರಸ್ತಾಪಿಸಿದ ಪ್ರಿಯಾಂಕಾ
ಪ್ರಿಯಾಂಕಾ ಚೋಪ್ರಾ ಹಂಚಿಕೊಂಡಿರುವ ಸ್ಕ್ರೀನ್‌ಶಾಟ್ ಅನ್ನು ಓದಬಹುದಾಗಿದೆ. 'ನಿಕ್ ಜೋನಾಸ್' ಪತ್ನಿ ಗುಡ್ ಮಾರ್ನಿಂಗ್ ಅಮೇರಿಕಾ ಶೋನಲ್ಲಿ ಮ್ಯಾಟ್ರಿಕ್ಸ್ ಚಿತ್ರದ ಸಹ-ನಟ ಕೀನು ರೀವ್ಸ್ ಬಗ್ಗೆ ಮಾತನಾಡಿದ್ದಾರೆ' ಈ ಸುದ್ದಿಯನ್ನು ಓದಿದ ಪ್ರಿಯಾಂಕಾ, 'ನಾನು ಸಾರ್ವಕಾಲಿಕ ಅಪ್ರತಿಮ ಚಲನಚಿತ್ರ ಫ್ರಾಂಚೈಸಿಗಳಲ್ಲಿ ಒಂದನ್ನು ಪ್ರಚಾರ ಮಾಡುತ್ತಿದ್ದೇನೆ ಮತ್ತು ನನ್ನನ್ನು ಇನ್ನೂ 'ನಿಕ್ ಜೋನಾಸ್' ಪತ್ನಿ ಎಂದು ಕರೆಯುತ್ತಿರುವುದು ತುಂಬಾ ಆಸಕ್ತಿದಾಯಕವಾಗಿದೆ' ಎಂದು ಬರೆದಿದ್ದಾರೆ.
Viral Video: ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ 'ಗದರ್' ಸೃಷ್ಟಿಸಿದ 63 ವಯಸ್ಸಿನ ಅಜ್ಜಿಯ ಡಾನ್ಸ್ ವಿಡಿಯೋ


ಮೋಸ್ಟ ಅಡ್ಮೈರಡ್ ವುಮೆನ್ ಪಟ್ಟಿಯಲ್ಲಿ ಪ್ರಿಯಾಂಕಾ ಹೆಸರು
ಭಾರತೀಯ ನಟಿ ಪ್ರಿಯಾಂಕಾ ಚೋಪ್ರಾ ಪ್ರಸ್ತುತ ಮೋಸ್ಟ ಅಡ್ಮೈರಡ್ ವೊಮೆನ್ 2021ರ ಪಟ್ಟಿಯಲ್ಲಿ ಸ್ಥಾನ ಪಡೆದ ನಟಿಯಾಗಿದ್ದಾಳೆ.  ಈ ವರ್ಷದ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ನಟಿ ಪ್ರಿಯಾಂಕಾ ಚೋಪ್ರಾ. ಮಾಹಿತಿಯ ಪ್ರಕಾರ, ಕಳೆದ ವರ್ಷ ನಟಿ ಈ ಪಟ್ಟಿಯಲ್ಲಿ 15 ನೇ ಸ್ಥಾನದಲ್ಲಿದ್ದರು. ಆದರೆ ಈ ವರ್ಷ ತನ್ನ ಶ್ರೇಯಾಂಕವನ್ನು ಹೆಚ್ಚಿಸಿ 10 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ವರದಿಗಳ ಪ್ರಕಾರ, 38 ದೇಶಗಳ ಒಟ್ಟು 42,000 ಜನರನ್ನು ಈ ಸಮೀಕ್ಷೆಯಲ್ಲಿ ಸೇರಿಸಲಾಗಿದೆ.


ಇದನ್ನೂ ಓದಿ-Miss World 2021: ಕೊರೊನಾ ಹಿನ್ನೆಲೆ ಮಿಸ್ ವರ್ಲ್ಡ್ 2021 ಸ್ಪರ್ಧೆ ಮುಂದೂಡಿಕೆ, ಭಾರತದ Manasa Varanasi ಸೇರಿದಂತೆ 17 ಸ್ಪರ್ಧಿಗಳಿಗೆ ಸೋಂಕು ದೃಢ


ಪ್ರಿಯಾಂಕಾ ವರ್ಕ್ ಫ್ರಂಟ್ ಹೇಗಿದೆ
ಪ್ರಿಯಾಂಕಾ ಚೋಪ್ರಾ ತಮ್ಮ ವೃತ್ತಿಪರ ಕಮಿಟ್‌ಮೆಂಟ್‌ಗಳಿಂದಾಗಿ ಮನೆಯಿಂದ ದೂರ ಉಳಿದಿದ್ದಾರೆ. ಆಕೆಯ ಪತಿ ನಿಕ್ ಜೋನಾಸ್ ಅವರ ಹುಟ್ಟುಹಬ್ಬದ ಆಚರಣೆಗೆ ಹಾಜರಾಗಲು ಸಹ ಆಕೆಗೆ ಸಾಧ್ಯವಾಗಿಲ್ಲ. ಪ್ರಿಯಾಂಕಾ ವರ್ಕ್ ಫ್ರಂಟ್ ಕುರಿತು ಮಾತನಾಡುವುದಾದರೆ, ಪ್ರಸ್ತುತ ನಟಿ ಹಲವು ಯೋಜನೆಗಳ ಮೇಲೆ ಏಕಕಾಲಕ್ಕೆ ಕಾರ್ಯನಿರ್ವಹಿಸುತ್ತಿದ್ದಾಳೆ. ಅವರು ಹಾಲಿವುಡ್ ತಾರೆ ಕೀನು ರೀವ್ಸ್ ಅವರೊಂದಿಗೆ ಮ್ಯಾಟ್ರಿಕ್ಸ್ 4, ಮಿಂಡಿ ಕೆಲ್ಲಿಂಗ್, ವೆಡ್ಡಿಂಗ್ ಥೀಮ್‌ ರಿಯಾಲಿಟಿ ಶೋ, ಮಾ  ಆನಂದ್ ಶೀಲಾ ಅವರ ಜೀವನಚರಿತ್ರೆ ಮತ್ತು ಫರ್ಹಾನ್ ಅಖ್ತರ್ ಅವರ ಬಾಲಿವುಡ್ ಚಲನಚಿತ್ರ ಜೀ ಲೆ ಜರಾ ನಲ್ಲಿ ಕಾರ್ಯನಿರತಳಾಗಿದ್ದಾಳೆ.


ಇದನ್ನೂ ಓದಿ-ಚಿತ್ರ ರಸಿಕರಿಗೆ ರಸದೌತಣ , 2022 ರಲ್ಲಿ ತೆರೆ ಕಾಣಲಿದೆ ಹತ್ತು ಅಮೋಘ ಚಿತ್ರಗಳು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.