Miss World 2021: ಕೊರೊನಾ ಹಿನ್ನೆಲೆ ಮಿಸ್ ವರ್ಲ್ಡ್ 2021 ಸ್ಪರ್ಧೆ ಮುಂದೂಡಿಕೆ, ಭಾರತದ Manasa Varanasi ಸೇರಿದಂತೆ 17 ಸ್ಪರ್ಧಿಗಳಿಗೆ ಸೋಂಕು ದೃಢ

Miss World 2021 Cancelled: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಸುಂದರಿ 2021 ಸ್ಪರ್ಧೆಯನ್ನು ಮುಂದೂಡಲಾಗಿದೆ. ಭಾರತದ ಮಾನಸಾ ವಾರಣಾಸಿ (Manasa Varanasi) ಸೇರಿದಂತೆ 17 ಸ್ಪರ್ಧಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

Written by - Nitin Tabib | Last Updated : Dec 17, 2021, 02:03 PM IST
  • ಕೊರೊನಾ ಆತಂಕದ ಹಿನ್ನೆಲೆ
  • ಮಿಸ್ ವರ್ಲ್ಡ್ 2021 ಮುಂದೂಡಿಕೆ.
  • ಭಾರತದ ಮಾನಸ ಸೇರಿದಂತೆ ಒಟ್ಟು 17 ಸ್ಪರ್ಧಿಗಳಿಗೆ ಕೊರೊನಾ ಸೋಂಕು ದೃಢ.
Miss World 2021: ಕೊರೊನಾ ಹಿನ್ನೆಲೆ ಮಿಸ್ ವರ್ಲ್ಡ್ 2021 ಸ್ಪರ್ಧೆ ಮುಂದೂಡಿಕೆ, ಭಾರತದ Manasa Varanasi ಸೇರಿದಂತೆ 17 ಸ್ಪರ್ಧಿಗಳಿಗೆ ಸೋಂಕು ದೃಢ title=
Miss World 2021 Cancelled (File Photo)

Miss World 2021 Cancelled Due To Corona Concerns:ವಿಶ್ವಾದ್ಯಂತ ಇದೀಗ ಕೊರೊನಾ (Covid-19) ಆತಂಕ ಮತ್ತೊಮ್ಮೆ ಹೆಚ್ಚಾಗತೊಡಗಿದೆ. ಅನೇಕ ದೇಶಗಳಲ್ಲಿ ಸೋಂಕಿನ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಈ ಸಾಂಕ್ರಾಮಿಕದ ಪರಿಣಾಮವು ಇದೀಗ ವಿಶ್ವ ಸುಂದರಿ 2021ರ ಸ್ಪರ್ಧೆಯ ಮೇಲೂ  ಕಂಡುಬಂದಿದೆ. ಮಾಧ್ಯಮ ವರದಿಗಳ ಪ್ರಕಾರ, ಸ್ಪರ್ಧೆಯಲ್ಲಿ ಭಾಗವಹಿಸಿದ್ದ 17 ಸ್ಪರ್ಧಿಗಳು ಕರೋನಾ ಸೋಂಕಿಗೆ ಒಳಗಾಗಿದ್ದಾರೆ, ಇದರಲ್ಲಿ ಭಾರತದ ಮಾನಸಾ ವಾರಣಾಸಿ ಕೂಡ ಶಾಮೀಲಾಗಿದ್ದಾರೆ. ಕರೋನಾ ಪ್ರಕರಣಗಳು ಮುನ್ನೆಲೆಗೆ ಬಂದ ತಕ್ಷಣ ವಿಶ್ವ ಸುಂದರಿ 2021 ಸ್ಪರ್ಧೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ. ಮಿಸ್ ವರ್ಲ್ಡ್ ಬ್ಯೂಟಿ ಪೆಜೆಂಟ್‌ನ ಅಧಿಕೃತ ಸಾಮಾಜಿಕ ಮಾಧ್ಯಮ ಪುಟದಿಂದ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಎಲ್ಲ ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಅದರಲ್ಲಿ ಹೇಳಲಾಗಿದೆ.

ಇದನ್ನೂ ಓದಿ-Miss Universe 2021: ಸ್ಪರ್ಧೆಯಲ್ಲಿ ಹರ್ನಾಜ್ ಸಂಧು ತೊಟ್ಟ ಗೌನ್ ವಿನ್ಯಾಸಗೊಳಿಸಿದ್ದು ಒಬ್ಬ ತೃತೀಯ ಲಿಂಗಿ!

ಇಂದು ಮುಂಜಾನೆ 4.30ಕ್ಕೆ ಮಿಸ್ ವರ್ಲ್ಡ್ ಗ್ರ್ಯಾಂಡ್ ಫಿನಾಲೆ (Miss World 2021)ನಡೆಯಬೇಕಿತ್ತು. ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಸಂಘಟಕರು ಹೇಳಿದ್ದಾರೆ. 90 ದಿನಗಳ ಒಳಗೆ ಮತ್ತೊಮ್ಮೆ ಪೋರ್ಟೊ ರಿಕೊದಲ್ಲಿ  (Pureto Rico) ಸ್ಪರ್ಧೆಯನ್ನು ಮರುಆಯೋಜಿಸಲಾಗುವುದು ಎನ್ನಲಾಗಿದೆ. ಮಿಸ್ ವರ್ಲ್ಡ್ 2021 ಈವೆಂಟ್‌ನಲ್ಲಿ (Entertainment News In Kannada) ಹಾಜರಿದ್ದ ವೈದ್ಯಕೀಯ ತಜ್ಞರು ಮತ್ತು ಪೋರ್ಟೊ ರಿಕೊ ಆರೋಗ್ಯ ಇಲಾಖೆಯ ಸಭೆಯ ನಂತರವೇ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದಲ್ಲದೇ ಹೆಚ್ಚಿನ ಭದ್ರತಾ ವ್ಯವಸ್ಥೆಯನ್ನೂ ಸಹ ಕೈಗೊಳ್ಳಲಾಗಿದೆ. ಎಲ್ಲಾ ಸೋಂಕಿತ ಸ್ಪರ್ಧಿಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ. 

ಇದನ್ನೂ ಓದಿ-ಭಾರತದ ಚೆಲುವೆಗೆ 'ಭುವನ ಸುಂದರಿ' ಪಟ್ಟ: ಯಾರು ಹರ್ನಾಜ್ ಸಂಧು? ಜಡ್ಜ್ ಗಳ ಮನಗೆದ್ದ ಈ ಉತ್ತರ!

ಅಲ್ಲಿನ ಆರೋಗ್ಯ ಅಧಿಕಾರಿಗಳಿಂದ ಅಧಿಕೃತ ಅನುಮತಿ ಪಡೆದ ಬಳಿಕವಷ್ಟೇ  ಸ್ಪರ್ಧಿಗಳು ಸ್ವದೇಶಕ್ಕೆ ತೆರಳಬಹುದು ಎಂದು ಈ ಕುರಿತು ಹೊರಡಿಸಲಾಗಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಕುರಿತು ಮಾತನಾಡಿರುವ ಮಿಸ್ ವರ್ಲ್ಡ್ ಲಿಮಿಟೆಡ್‌ನ CEO ಜೂಲಿಯಾ ಮೋರ್ಲಿ (Julia Morley), ವಿಶ್ವ ಸುಂದರಿ ಕಿರೀಟಕ್ಕಾಗಿ ನಮ್ಮ ಸ್ಪರ್ಧಿಗಳ ಮರಳುವಿಕೆಗೆ ನಾವು ಕಾತುರದಿಂದ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ-Miss Universe 2021: ಭಾರತದ ಹರ್ನಾಜ್ ಸಂಧುಗೆ ಒಲಿದ 'ಭುವನ ಸುಂದರಿ 2021' ಪಟ್ಟ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News