Nick Jonas : ನಟಿ ಪ್ರಿಯಾಂಕಾ ಚೋಪ್ರಾ ಅವರ ಪತಿ ಮತ್ತು ಪಾಪ್ ಸ್ಟಾರ್ ನಿಕ್ ಜೋನಾಸ್ ವೀಡಿಯೊ ಒಂದು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ನಿಕ್ ತನ್ನ ಅಂಗರಕ್ಷಕರಿಗೆ ಸೊನ್ನೆ ಮಾಡುತ್ತಾ ವೇದಿಕೆಯಿಂದ ಓಡಿಹೋಗುವುದನ್ನು ಕಾಣಬಹುದು... ಅಸಲಿಗೆ ಏನಾಯ್ತು..? ಸಂಪೂರ್ಣ ವಿವರ ಇಲ್ಲಿದೆ ನೋಡಿ..


COMMERCIAL BREAK
SCROLL TO CONTINUE READING

ನಿಕ್ ಜೋನಾಸ್ ತಮ್ಮ ಡೇಸ್ ವರ್ಲ್ಡ್ ಟೂರ್‌ನ ಭಾಗವಾಗಿ ಮಂಗಳವಾರ ಪ್ರೇಗ್‌ನಲ್ಲಿ ಸಹೋದರರಾದ ಕೆವಿನ್ ಮತ್ತು ಜೋ ಜೋನಾಸ್ ಅವರೊಂದಿಗೆ ಪ್ರದರ್ಶನ ನೀಡುತ್ತಿದ್ದರು. ಈ ವೇಳೆ ಅವರ ಹಣೆಗೆ ಲೇಸರ್‌ ಲೈಟ್‌ ಬಿತ್ತು.. ಅದು ಯಾರೋ ಗುರಿ ಇಟ್ಟು ಬಿಟ್ಟಂತಿತ್ತು.. ಇದರಿಂದ ಜೀವ ಉಳಿಸಿಕೊಳ್ಳಲು ನಿಕ್‌ ವೇದಿಕೆ ಮೇಲಿಂದ ಇಳಿದ ಹೋದರು.. 


ಇದನ್ನೂ ಓದಿ:60 ವರ್ಷದ ಹೀರೋ ಜೊತೆ ಹೋಟೆಲ್‌ ರೂಮ್‌ನಲ್ಲಿ ಸಿಕ್ಕಿಬಿದ್ದಿದ್ದ ಸ್ಟಾರ್‌ ಹೀರೋಯಿನ್‌! ಇಂಡಸ್ಟ್ರಿಯಲ್ಲಿ ಬಿರುಗಾಳಿ ಎಬ್ಬಿಸಿತ್ತು ಶಾಕಿಂಗ್‌ ಸುದ್ದಿ


ಈ ಕರಿತು ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.. ಭಯದಿಂದ ನಿಕ್ ಪ್ರದರ್ಶನವನ್ನು ಅರ್ಧಕ್ಕೆ ಕೈಬಿಟ್ಟು ಓಡಿ ಹೋಗುತ್ತಿರುವ ದೃಶ್ಯ ವೀಡಿಯೊದಲ್ಲಿದೆ.. ಇನ್ನು ಶಾರ್ಪ್‌ ಶೂಟರ್‌ ನಿಗ್‌ ಹಣೆಗೆ ಟಾರ್ಗೆಟ್‌ ಮಾಡಿದ್ದು, ಅದಕ್ಕಾಗಿ ಜೀವ ಉಳಿಸಿಕೊಳ್ಳಲು ವೇದಿಕೆಯಿಂದ ಇಳಿದು ಹೋಗಿದ್ದಾಗಿ ಸುದ್ದಿಯಾಗಿದೆ.. 



ಇನ್ನು ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.. ಶಾರ್ಪ್‌ ಶೂಟರ್‌ ಟಾರ್ಗೆಟ್‌ ಮಾಡಿದ್ನಾ ಅಥವಾ ಯಾರೋ ಕಿಡಿಗೇಡಿಗಳು ಲೇಸರ್‌ ಲೈಟ್‌ ಬಿಟ್ಟಿದ್ದಾರಾ ಎನ್ನುವ ಕುರಿತು ತನಿಖೆ ನಡೆಯುತ್ತಿದೆ.. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಕಳವಳ ವ್ಯಕ್ತಪಡಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.