ನವದೆಹಲಿ: ಬಾಲಿವುಡ್‌ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಸಾಕಷ್ಟು ಹೆಸರು ಗಳಿಸುತ್ತಿದ್ದಾರೆ. ಹಾಲಿವುಡ್ ಚಿತ್ರಗಳಲ್ಲಿಯೂ ಸಹ ಪ್ರಿಯಾಂಕಾ ತನ್ನ ಬಲವಾದ ನಟನಾ ಕೌಶಲ್ಯವನ್ನು ಮೆರೆದಿದ್ದಾರೆ.  ಮಿಸ್ ವರ್ಡ್ ಎಂದು ಹೆಸರಿಸಿರುವ ಪ್ರಿಯಾಂಕಾ ಚೋಪ್ರಾ ಅವರ ದಿಟ್ಟ ಶೈಲಿಯ ಬಗ್ಗೆಯೂ ತುಂಬಾ ಚರ್ಚಿಸಲಾಗಿದೆ. 


ಸನ್ನಿ ಲಿಯೋನ್‌ರನ್ನು ಹಿಂದಿಕ್ಕಿದ ಪ್ರಿಯಾಂಕ ಚೋಪ್ರಾ


COMMERCIAL BREAK
SCROLL TO CONTINUE READING

ಸಂದರ್ಶನವೊಂದರಲ್ಲಿ ಪ್ರಿಯಾಂಕ ತಮ್ಮ ಬಗ್ಗೆ ಹಲವಾರು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಪ್ರಿಯಾಂಕ ತಮ್ಮ ಕುಟುಂಬದ ಸದಸ್ಯರು ಬಣ್ಣದ ಬಗ್ಗೆ ಹೇಗೆ ಕಾಳಜಿ ವಹಿಸುತ್ತಿದ್ದರು ಎಂಬ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.


ನಮ್ಮ ಪಾಲುದಾರ ಸೈಟ್ bollywoodlife.com ನಲ್ಲಿ ಪ್ರಕಟವಾದ ಸುದ್ದಿಯೊಂದರ ಪ್ರಕಾರ, ಪ್ರಿಯಾಂಕಾ ಚೋಪ್ರಾ ತನ್ನ ಹಳೆಯ ಸಂದರ್ಶನವೊಂದರಲ್ಲಿ ತನ್ನ ಸೋದರಸಂಬಂಧಿ ತನ್ನ ಬಣ್ಣದಿಂದಾಗಿ ನನ್ನನ್ನು ಕಪ್ಪು ಸುಂದರಿ ಎಂದು ಕರೆಯುತ್ತಿದ್ದಳು. ಕಾರಣ ನನ್ನ ಸೋದರಸಂಬಂಧಿಗಳೆಲ್ಲರೂ ಬೆಳ್ಳಗಿದ್ದರು. ಮನೆಯಲ್ಲಿ ನನ್ನ ಬಣ್ಣವಷ್ಟೇ ಗಾಢವಾಗಿತ್ತು. ನನ್ನ ಬಣ್ಣ ನನ್ನ ತಂದೆ ಬಣ್ಣಕ್ಕೆ ಹೋಲುತ್ತಿತ್ತು. ನನ್ನ ಪಂಜಾಬಿ ಕುಟುಂಬದಲ್ಲಿ ಎಲ್ಲರೂ ನನ್ನನ್ನು 'ಕಪ್ಪು' ಎಂದು ಕರೆಯುತ್ತಿದ್ದರು. ಹೀಗಾಗಿ ನಾನೂ 13 ವರ್ಷದವಳಿದ್ದಾಗ ಫೇರ್‌ನೆಸ್ ಕ್ರೀಮ್‌ನಿಂದ ನನ್ನ ಮೈ ಬಣ್ಣವನ್ನು ಬದಲಿಸಲು ಪ್ರಯತ್ನಿಸಿದ್ದರಂತೆ. ಫೇರ್‌ನೆಸ್ ಕ್ರೀಮ್‌ನಿಂದಾಗಿ ಪ್ರಿಯಾಂಕ ಅವರ ಬಣ್ಣ ಬದಲಾಯಿತಂತೆ. ಆ ವಯಸ್ಸಿನಲ್ಲಿ ಜಾಗರೂಕತೆಯಿಂದ ಪ್ರಿಯಾಂಕ ಇಟ್ಟ ಹೆಜ್ಜೆ ಇಂದು ಅವರನ್ನು ಖ್ಯಾತ ನಟಿಯರ ಸಾಲಿನಲ್ಲಿ ನಿಲ್ಲಿಸಿದೆ.


ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಸಹಾಯ ನೆನೆದು ಭಾವುಕರಾದ ಪ್ರಧಾನಿ ನರೇಂದ್ರ ಮೋದಿ


ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಿಯಾಂಕ ಚೋಪ್ರಾ ನಾನು ಉದ್ಯಮಕ್ಕೆ ಕಾಲಿಟ್ಟಾಗ, ನಾನು ಸುಂದರವಾಗಿದ್ದೇನೆ ಎಂದು ನನಗೆ ತಿಳಿದಿತ್ತು, ಆದರೆ ಫೇರ್‌ನೆಸ್ ಕ್ರೀಮ್ ಅನ್ನು ಜಾಹೀರಾತು ಮಾಡಲು ನನಗೆ ಇಷ್ಟವಿರಲಿಲ್ಲ. ನಂತರ ನನಗೆ ನಾನು ಮಾಡುತ್ತಿರುವುದು ತಪ್ಪು ಎಂದು ಭಾಸವಾಯಿತು ಎಂದು ತಿಳಿಸಿದ್ದಾರೆ.


ಸದ್ಯ ಪತಿಯೊಂದಿಗೆ ವಿದೇಶದಲ್ಲಿರುವ ಪ್ರಿಯಾಂಕ ಚೋಪ್ರಾ 2019 ರಲ್ಲಿ 'ದಿ ಸ್ಕೈ ಈಸ್ ಪಿಂಕ್' ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡರು. ಪ್ರಸ್ತುತ ಪ್ರಿಯಾಂಕಾ  ಯಾವುದೇ ಬಾಲಿವುಡ್ ಚಿತ್ರಕ್ಕೆ ಸಹಿ ಹಾಕಿಲ್ಲ. ಈ ದಿನಗಳಲ್ಲಿ ಪ್ರಿಯಾಂಕಾ ಹಾಲಿವುಡ್ ಪ್ರಾಜೆಕ್ಟ್ ಬಗ್ಗೆ ಮಾತ್ರ ಗಮನ ಹರಿಸಿದ್ದಾರೆ. ಹಾಲಿವುಡ್ ಚಿತ್ರಗಳಲ್ಲಿ 'ಬೇವಾಚ್', 'ದಿ ಕಿಡ್ ಲೈಕ್ ಜ್ಯಾಕ್' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೆ ಪ್ರಿಯಾಂಕಾ ಕ್ವಾಂಟಿಕೋ ಟಿವಿ ಕಾರ್ಯಕ್ರಮದಲ್ಲೂ ಕಾಣಿಸಿಕೊಂಡಿದ್ದಾರೆ.