ಬೆಂಗಳೂರು : ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಡಿಫ್ರೆಂಟ್ ಸಿನಿಮಾಗಳು ಸಾಲು ಸಾಲಾಗಿ ತೆರೆ ಮೇಲೆ ಬರುತ್ತಿದ್ದು, ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗುತ್ತಿವೆ. ಸದ್ಯ ವಿ.ಮತ್ತಿಯಳಗನ್ ನಿರ್ಮಾಣದ, ಗೌತಮ್ ವಿಮಲ್ ನಿರ್ದೇಶನದಲ್ಲಿ ʼಕೈಮರʼ ಎಂಬ ವಿಭಿನ್ನ ಟೈಟಲ್‌ನೊಂದಿಗೆ ಪ್ರಿಯಾಂಕ ಉಪೇಂದ್ರ, ಪ್ರಿಯಾಮಣಿ, ಛಾಯಾಸಿಂಗ್ ತೆರೆ ಮೇಲೆ ಬರಲು ಸಿದ್ಧತೆ ನಡೆಸಿದ್ದಾರೆ. ವಿಜಯ ದಶಮಿ ದಿನದಂದು ʼಕೈಮರʼ ಚಿತ್ರದ ಮುಹೂರ್ತ ಸಮಾರಂಭ ರಾಜರಾಜೇಶ್ವರಿ ನಗರದಲ್ಲಿ ನೆರವೇರಿತು. 


COMMERCIAL BREAK
SCROLL TO CONTINUE READING

ಖ್ಯಾತ ನಿರ್ದೇಶಕ ಪಿ.ವಾಸು ಅವರ ತಮ್ಮನ ಮಗ ಗೌತಮ್ ವಿಮಲ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮತ್ತಿಯಳಗನ್ ಅವರು ನಿರ್ಮಾಣದೊಂದಿಗೆ ನಟನೆಯನ್ನು ಮಾಡುತ್ತಿದ್ದಾರೆ. ಸಿನಿಮಾ ಕುರಿತು ಮಾತನಾಡಿದ ನಟಿ ಪ್ರಿಯಾಂಕ, ನಾನು ಈ ಹಿಂದೆ ಸಾಕಷ್ಟು ಹಾರಾರ್ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ʼಕೈಮರʼ ಚಿತ್ರದಲ್ಲಿ‌ ನಾನು ಈ ತನಕ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಪ್ರಿಯಾಮಣಿ, ಛಾಯಾಸಿಂಗ್ ಅವರೊಟ್ಟಿಗೆ ಅಭಿನಯಿಸುತ್ತಿರುವುದು ಖುಷಿಯಾಗಿದೆ. ಕನ್ನಡದಲ್ಲಿ ʼಕೆ.ಜಿ.ಎಫ್ʼ, ʼಕಾಂತಾರʼ ದಂತಹ ಡಿಫರೆಂಟ್ ಜಾನರ್‌ನ ಚಿತ್ರಗಳು ಜನರ ಮೆಚ್ಚುಗೆ ಪಡೆಯುತ್ತಿದೆ. ನಮ್ಮ ʼಕೈಮರʼ ಚಿತ್ರದ ಕಥೆ ಸಹ ಡಿಫರೆಂಟ್ ಆಗಿದ್ದು, ನೋಡುಗರ ಮನ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದರು.


ಇದನ್ನೂ ಓದಿ:ತೆರೆಮೇಲೆ ಬರಲಿದೆ ಅರವಿಂದ್‌-ದಿವ್ಯಾ ʼಅರ್ಧಂಬರ್ಧ ಪ್ರೇಮಕಥೆʼ..!


ಇದೊಂದು ಹಾರಾರ್ ಸೈಕಲಾಜಿಕಲ್ ಕಥಾಹಂದರ ಹೊಂದಿರುವ ಚಿತ್ರ. ನನ್ನ ನಿರ್ದೇಶನದ ಮೊದಲ ಚಿತ್ರ ಸಹ. ಕಳೆದ ಮೂರುವರ್ಷಗಳಿಂದ ʼಕೈಮರʼ ಕುರಿತಾದ ಕೆಲಸಗಳು ನಡೆಯುತ್ತಿದ್ದವು. ಕೊರೊನಾ ಕಾರಣದಿಂದ ಚಿತ್ರೀಕರಣ ಆರಂಭವಾಗುವುದು ಸ್ವಲ್ಪ ತಡವಾಯಿತು. ಈಗ ದಸರಾದ ಶುಭದಿನದಲ್ಲಿ ಮುಹೂರ್ತ ನಡೆದಿದೆ. ಅಕ್ಟೋಬರ್ ಹತ್ತರಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ ಎಂದರು ನಿರ್ದೇಶನ ಗೌತಮ್ ವಿಮಲ್.


ಪಿ. ವಿಮಲ್ ಕಥೆ ಬರೆದಿದ್ದಾರೆ. ಗುರುಕಿರಣ್ ಸಂಗೀತ ನಿರ್ದೇಶನ, ಮಣಿಕಂಠನ್ ಛಾಯಾಗ್ರಹಣ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಹಾಗೂ ವಿನೋದ್ ಅವರ ಸಾಹಸ ನಿರ್ದೇಶನ ʼಕೈಮರʼದಲ್ಲಿರಲಿದೆ.‌ 2023 ರ ಉತ್ತಮ ಚಿತ್ರವಾಗಿ ʼಕೈಮರʼ  ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಲಿದೆ ಎಂದು ನಿರ್ಮಾಪಕ ಹಾಗೂ ನಟ ವಿ.ಮತ್ತಿಯಳಗನ್ ತಿಳಿಸಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.