ಬೆಂಗಳೂರು: 2020ರ ಸೂಪರ್ ಹಿಟ್ ಚಿತ್ರಗಳಾದ ‘ದಿಯಾ’ ಹಾಗೂ ‘ಲವ್ ಮಾಕ್ಟೇಲ್’ ಚಿತ್ರಗಳ ಮೂಲಕ ಮನೆಮಾತಾಗಿರುವ ಪೃಥ್ವಿ ಅಂಬರ್(Pruthvi Ambaar) ಹಾಗೂ ಮಿಲನಾ ನಾಗರಾಜ್ ಅಭಿನಯದಲ್ಲಿ ಮೂಡಿಬರುತ್ತಿರುವ ಮತ್ತೊಂದು ಸದಭಿರುಚಿಯ ಚಿತ್ರ "F0R REGN" (ಫಾರ್ ರಿಜಿಸ್ಟರೇಷನ್).


COMMERCIAL BREAK
SCROLL TO CONTINUE READING

ಇದನ್ನೂ ಓದಿ: KGF 2 Booking: 'ಕೆಜಿಎಫ್ 2' ಸಿನಿಮಾಗೆ ಬುಕ್ಕಿಂಗ್ ಆರಂಭ.. ದಾಖಲೆ ಬರೆದ ಯಶ್ ಸಿನಿಮಾ


ವರ್ಷದ ಮೊದಲ ಹಬ್ಬ ಯುಗಾದಿಗೆ ಈ ಚಿತ್ರದ ಫಸ್ಟ್‌ಲುಕ್ ಬಿಡುಗಡೆಯಾಗಿದೆ. ಚಿತ್ರದ ಫಸ್ಟ್‌ಲುಕ್(For Regn Movie)ಗೆ ನಿರೀಕ್ಷೆಗೂ ಮೀರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಒಂದು ಮಿಲಿಯನ್ ಗೂ ಅಧಿಕ ಲೈಕ್ಸ್ ದೊರಕಿದೆ. ಬಹುತೇಕ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಈ ಚಿತ್ರದಲ್ಲಿ ಪೃಥ್ವಿ ‘ಆಶು’ ಪಾತ್ರದಲ್ಲಿ ಹಾಗೂ ಮಿಲನಾ(Milana Nagaraj) ಅವರು ‘ಅನ್ವಿ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.


Drug Case: ಮತ್ತೆ ಸದ್ದು ಮಾಡಿದ ಡ್ರಗ್‌ ಕೇಸ್‌: ನಟಿ ಸೇರಿ ಬಿಗ್‌ಬಾಸ್‌ ವಿನ್ನರ್‌ ಪೊಲೀಸ್‌ ವಶಕ್ಕೆ..!


ನಿಶ್ಚಲ್ ಫಿಲಂಸ್ ಮೂಲಕ ಎನ್.ನವೀನ್ ರಾವ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ನವೀನ್ ದ್ವಾರಕನಾಥ್(Naveen Dwarakanath) ನಿರ್ದೇಶಿಸುತ್ತಿದ್ದಾರೆ. ಕಥೆ-ಚಿತ್ರಕಥೆಯನ್ನು ನಿರ್ದೇಶಕರೇ ಬರೆದಿದ್ದಾರೆ. ಆರ್.ಕೆ.ಹರೀಶ್ ಸಂಗೀತ ನಿರ್ದೇಶನ, ಅಭಿಷೇಕ್ ಕಳತ್ತಿ ಛಾಯಾಗ್ರಹಣ ಹಾಗೂ ಮನು ಶೆಡ್ಗಾರ್ ಅವರ ಸಂಕಲನವಿರುವ ಈ ಚಿತ್ರದ ಕಾರ್ಯಕಾರ ನಿರ್ಮಾಪಕರಾಗಿ ನಿರಂಜನ್ ರಾಧಾಕೃಷ್ಣ ಇದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.