ಉತ್ತರ ಪ್ರದೇಶ : PUBG ವ್ಯಸನಿಯಾಗಿದ್ದ ಯುವಕನೊಬ್ಬ ತನ್ನ ಪೋಷಕರನ್ನು ಹೊಡೆದು ಕೊಂದಿರುವ ಭೀಕರ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಝಾನ್ಸಿಯ ನವಾಬಾದ್ ಪ್ರದೇಶದಲ್ಲಿ ಈ ದಾರುಣ ಘಟನೆ ಜರುಗಿದೆ. 


COMMERCIAL BREAK
SCROLL TO CONTINUE READING

ಮೃತರನ್ನು ಲಕ್ಷ್ಮಿ ಪ್ರಸಾದ್ (60) ಮತ್ತು ವಿಮಲಾ (55) ಎಂದು ಗುರುತಿಸಲಾಗಿದೆ. ಮಗ ಅಂಕಿತ್ (28) ಆರೋಪಿ. ಮನೆಗೆ ಬಂದ ಹಾಲಿನ ವ್ಯಾಪಾರಿಯೇ ಈ ದಾರುಣ ಘಟನೆಯನ್ನು ಮೊದಲು ನೋಡಿದ್ದು. ನಿನ್ನೆ (ಆಗಸ್ಟ್ 5) ಬೆಳಗ್ಗೆ ಹಾಲು ವ್ಯಾಪಾರಿ ಎಂದಿನಂತೆ ಬಾಗಿಲು ಬಡಿದರೂ ಯಾರೂ ಮನೆಯಿಂದ ಹೊರಗೆ ಬಂದಿರಲಿಲ್ಲ.


ಇದನ್ನೂ ಓದಿ: ಗ್ರಾಮ ಪಂಚಾಯ್ತಿ ರಾಜಕೀಯದಲ್ಲಿ ಹೊಸ ಪರ್ವ..ಮಂಗಳಮುಖಿಗೆ ಪಂಚಾಯ್ತಿ ಅಧ್ಯಕ್ಷ ಪಟ್ಟ


ಅನುಮಾನಗೊಂಡು ಬಹಳ ಹೊತ್ತಿನವರೆಗೆ ಬಾಗಿಲು ತಟ್ಟಿದರೂ ಯಾರೂ ಹೊರಗೆ ಬಾರದೇ ಇದ್ದಾಗ ಮನೆಯೊಳಗೆ ಹೋಗಿ ನೋಡಿದಾಗ ಲಕ್ಷ್ಮಿಪ್ರಸಾದ್ ಹಾಗೂ ವಿಮಲಾ ಅವರ ಮೃತದೇಹಗಳು ರಕ್ತದಲ್ಲಿ ಸ್ನಾನವಾಗಿ ನೆಲದ ಮೇಲೆ ಬಿದ್ದಿದ್ದವು. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


ನಿನ್ನೆ ರಾತ್ರಿ ಅಂಕಿತ್ ಅವರ ಮೇಲೆ ಹಲ್ಲೆ ನಡೆಸಿರಬೇಕು ಎಂದು ಪೊಲೀಸರು ತೀರ್ಮಾನಿಸಿದ್ದಾರೆ. ಇಂದಿನ ಯುವಜನತೆಯಲ್ಲಿ ಜನಪ್ರಿಯವಾಗಿರುವ ಆನ್‌ಲೈನ್ ಗೇಮ್ PUBG ಗೀಳು ಕಳೆದ ಎರಡು ವರ್ಷಗಳಿಂದ ಯುವಕನ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತದೆ. ಮಾಹಿತಿ ಪಡೆದ ಪೊಲೀಸರು ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಲಕ್ಷ್ಮಿ ಪ್ರಸಾದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರ ಪತ್ನಿ ವಿಮಲಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.


ಇದನ್ನೂ ಓದಿ: ಆರೋಗ್ಯ ಸಂಜೀವಿನಿ ಗಂಜಿ ಕುಡಿದರೆ ಸಿಗುವುದು ಅದ್ಭುತ ಪ್ರಯೋಜನ


ಮರಣೋತ್ತರ ಪರೀಕ್ಷೆ ನಡೆಸಿದ ಪೊಲೀಸರು ಅಂಕಿತ್‌ನನ್ನು ಬಂಧಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಪೊಲೀಸರು ಅಂಕಿತ್‌ನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಅಂಕಿತ್ ತನ್ನ ಪೋಷಕರನ್ನು ಲಾಠಿ ರೀತಿಯ ಮರದ ಕೋಲಿನಿಂದ ಥಳಿಸಿ ಬರ್ಬರವಾಗಿ ಹತ್ಯೆಗೈದಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.