ಬೆಂಗಳೂರು : ಕನ್ನಡ ಕಂದ, ಕರುನಾಡಿನ ಮಗ ಪುನೀತ್‌ ರಾಜಕುಮಾರ್‌ ಶಾರೀರಿಕವಾಗಿ ನಮ್ಮ ಮಧ್ಯ ಇಲ್ಲ ಅಂದರೂ, ಕರ್ನಾಟಕದಲ್ಲಿ ಬಿಸುವ ಕನ್ನಡದ ಗಾಳಿಯಲ್ಲಿ ಸದಾ ಅಮರ. ಕನ್ನಡಾಭಿಮಾನಿಗಳ ನೆಚ್ಚಿನ ದೊರೆಯ ಬಗ್ಗೆ ದಿನವೂ ಮಾತನಾಡಲಿಲ್ಲ ಅಂದ್ರೆ ಆ ದಿನ ಸಂಪೂರ್ಣವಾಗುವುದಿಲ್ಲ. ಇವತ್ತು ನಿಮಗೊಂದು ಇಂಟ್ರಸ್ಟಿಂಗ್‌ ವಿಚಾರ ಹೇಳಲೇ ಬೇಕು.


COMMERCIAL BREAK
SCROLL TO CONTINUE READING

ಹೌದು... ತುಂಬಾ ಇಂಟ್ರೆಸ್ಟಿಂಗ್‌ ವಿಚಾರ. ಯುವರತ್ನ, ದೊಡ್ಮನೆ ಮುದ್ದಿನ ಕಂದ, ಬರೀ ರಾಜ್‌ ಕುಟುಂಬಕ್ಕೆ ಮಗನಾಗಿರದೆ ಕನ್ನಡದ ಕುಲಬಾಂಧವರ ಮನೆ ಮಗ. ಅಪ್ಪು ಜನನ ಒಂದು ರೋಚಕ ಕಥೆ ಅಂದ್ರೆ ತಪ್ಪಾಗಲ್ಲ. ನಿಜಕ್ಕೂ ಪುನೀತ್‌ ರಾಜ್‌ಕುಮಾರ್‌ ಅವರು ಹುಟ್ಟಿದ ಘಳಿಗೆ ʼಮೂಯರʼ ಉದಯದ ಸಮಯ. ಮಯೂರ ಅಂದ್ರೆ ನಿಮಗೆಲ್ಲ ಗೊತ್ತಿರಲೇಬೇಕು. ಹೌದು ನಟಸಾರ್ವಭೌಮ ಡಾ. ರಾಜ್‌ಕುಮಾರ್‌ ಅವರು ಅಭಿನಯದ ಅದ್ಭುತ ಕನ್ನಡ ಸಿನಾಮ ʼಮಯೂರʼ.


ಇದನ್ನೂ ಓದಿ: ತಪ್ಪುಗಳನ್ನು ತಿದ್ದಿ, ಸರಿ ದಾರಿ ತೋರುವ ನೀವಿಲ್ಲದೆ ಬಿಗ್‌ಬಾಸ್‌ ಬೋರ್‌..!


ಮಯೂರ ಸಿನಿಮಾಗೂ ಅಪ್ಪು ಹುಟ್ಟಿಗೂ ಕಾರಣ ಏನು ಅಂತ ಜಾಸ್ತಿ ಚಿಂತಿಸಬೇಡಿ. ಅಣ್ಣಾವ್ರು ಮಯೂರ ಸಿನಿಮಾದಲ್ಲಿ ಬರುವ ಕುಸ್ತಿ ದೃಶ್ಯದ ಸಮಯದಲ್ಲಿ ಅಪ್ಪು ಅವರ ಜನನವಾಗಿತ್ತು. ಯಸ್‌ ಇದು ನಿಜ. ಅಂದು ಶೂಟಿಂಗ್‌ನಲ್ಲಿದ್ದ ರಾಜ್‌ಕುಮಾರ್‌ ಅವರಿಗೆ ಇತ್ತ ಪಾರ್ವತಿ ಅಮ್ಮನವರ ಹೆರಿಗೆ ಚಿಂತೆ ಅದ್ರೆ ಅತ್ತ ಶೂಟಿಂಗ್‌ ಚಿಂತೆ. ಇವರೇರಡನ್ನು ನಿಭಾಯಿಸಿದ ಅವರು ಅಂದು ಕನ್ನಡಿಗರಿಗೆ ಎರಡು ಅದ್ಭುತಗಳನ್ನು ನೀಡಿದ್ರು. ಒಂದು ಮಯೂರ ಸಿನಿಮಾ ಇನ್ನೊಂದು ಲೋಹಿತ್‌.


ದೇವರು, ಅಪ್ಪು ಹುಟ್ಟುವ ಮತ್ತು ಅಮರರಾಗುವ ಘಳಿಗೆಯನ್ನು ಮೊದಲೇ ಬರೆದಿಟ್ಟಿದ್ದನೇನೋ ಎಸಿಸುತ್ತದೆ. ಏಕೆಂದರೆ ಮಯೂರ ದಂತಹ ಕನ್ನಡಿಗರ ಸ್ವಾಭಿಮಾನದ ಸಿನಿಮಾ ಚಿತ್ರಿಕರಣವಾಗುವ ಸಮಯದಲ್ಲಿ ಜನಿಸಿದರು. ಅಲ್ಲದೆ, ಸದಾ ವೀರಕನ್ನಡಿಗನಾಗಿ ಕನ್ನಡಾಂಬೆಯ ಸೇವೆಗೈದರು. ಎಲ್ಲಿಯೂ ಕನ್ನಡಕ್ಕಾಗಲಿ ಕನ್ನಡಿಗರಿಗಾಗಲಿ ಕನಸು ಮನಸ್ಸಿನಲ್ಲೂ ಅಪ್ಪು ಅವಮಾನ ಮಾಡಿಲ್ಲ. ಅಪ್ಪುಗೆ ಅಷ್ಟೋಂದು ಪ್ರೀತಿ ಕರುನಾಡು ಕಂಡ್ರೆ. ಇನ್ನು ಅಪ್ಪು ಅಂತಿಮ ಸಿನಿಮಾ ಲಕ್ಕಿ ಮ್ಯಾನ್‌ನಲ್ಲಿ ಅಪ್ಪು ವಿಷ್ಣುವಿನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ನಿಜವಾಗ್ಲೂ ದೈವಾಂತ ಸಂಭೂತರಾ.. ತಮ್ಮ ಕೆಲಸ ಮುಗಿಸಿ ಸ್ವಸ್ಥಾನಕ್ಕೆ ಮರುಳಿದಾ ಎನ್ನುವಂತಿತ್ತು ತೆರೆ ಮೇಲೆ ಅಪ್ಪುವಿನ ಅವತಾರ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ