ಮೆಗಾಸ್ಟಾರ್‌ ಫ್ಯಾನ್ಸ್‌ಗೆ ದೀಪಾವಳಿ ಗಿಫ್ಟ್‌ : ಚಿರಂಜೀವಿ 154ನೇ ಸಿನಿಮಾ ಟೀಸರ್‌ ರಿಲೀಸ್‌

ದೀಪಾವಳಿ ಹಬ್ಬದ ಪ್ರಯುಕ್ತ ಮೆಗಾಸ್ಟಾರ್‌ ಫ್ಯಾನ್ಸ್‌ಗೆ ಗುಡ್‌ ಸ್ಯೂಡ್‌. ಚಿರಂಜೀವಿ ಅಭಿನಯದ 154ನೇ ಸಿನಿಮಾ ʼವಾಲ್ಟೇರ್ ವೀರಯ್ಯʼ ಟೀಸರ್‌ ಬಿಡುಗಡೆಯಾಗಿದೆ. ಟೀಸರ್‌ನಲ್ಲಿ ಚಿರು ರಗಡ್‌ ಲುಕ್‌ನಲ್ಲಿ ಮಿಂಚಿದ್ದು ಫ್ಯಾನ್ಸ್‌ ಫಿದಾ ಆಗಿದ್ದಾರೆ.

Written by - Krishna N K | Last Updated : Oct 24, 2022, 01:51 PM IST
  • ದೀಪಾವಳಿ ಹಬ್ಬದ ಪ್ರಯುಕ್ತ ಮೆಗಾಸ್ಟಾರ್‌ ಫ್ಯಾನ್ಸ್‌ಗೆ ಗುಡ್‌ ಸ್ಯೂಡ್‌
  • ಚಿರಂಜೀವಿ ಅಭಿನಯದ 154ನೇ ಸಿನಿಮಾ ʼವಾಲ್ಟೇರ್ ವೀರಯ್ಯʼ ಟೀಸರ್‌ ಬಿಡುಗಡೆ
  • ಅಣ್ಣಯ್ಯ ರಗಡ್‌ ಲುಕ್‌, ಮಾಸ್‌ ಎಂಟ್ರೀ, ಸೂಪರ್‌ ಡೈಲಾಗ್‌ಗೆ ಫ್ಯಾನ್ಸ್‌ ಫಿದಾ
ಮೆಗಾಸ್ಟಾರ್‌ ಫ್ಯಾನ್ಸ್‌ಗೆ ದೀಪಾವಳಿ ಗಿಫ್ಟ್‌ : ಚಿರಂಜೀವಿ 154ನೇ ಸಿನಿಮಾ ಟೀಸರ್‌ ರಿಲೀಸ್‌ title=

ಬೆಂಗಳೂರು : ದೀಪಾವಳಿ ಹಬ್ಬದ ಪ್ರಯುಕ್ತ ಮೆಗಾಸ್ಟಾರ್‌ ಫ್ಯಾನ್ಸ್‌ಗೆ ಗುಡ್‌ ಸ್ಯೂಡ್‌. ಚಿರಂಜೀವಿ ಅಭಿನಯದ 154ನೇ ಸಿನಿಮಾ ʼವಾಲ್ಟೇರ್ ವೀರಯ್ಯʼ ಟೀಸರ್‌ ಬಿಡುಗಡೆಯಾಗಿದೆ. ಟೀಸರ್‌ನಲ್ಲಿ ಚಿರು ರಗಡ್‌ ಲುಕ್‌ನಲ್ಲಿ ಮಿಂಚಿದ್ದು ಫ್ಯಾನ್ಸ್‌ ಫಿದಾ ಆಗಿದ್ದಾರೆ.

ಹೌದು.. ಚಿರಂಜೀವಿಯವರ 154 ನೇ ಸಿನಿಮಾ ವಾಲ್ಟೇರ್‌ ವೀರಯ್ಯ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಟೀಸರ್‌ನಲ್ಲಿ ಚಿರು ನವಯುವಕನಂತೆ ಕಾಣುತ್ತಿದ್ದಾರೆ. ಅದೇ ಮಾಸ್‌ ಅದೇ ಕ್ಲಾಸ್‌ನಲ್ಲಿ ಚಿರಂಜೀವಿ ಫುಲ್‌ ಶೈನಿಂಗ್‌. ವಾಲ್ಟೇರ್‌ ವೀರಯ್ಯ ಬಾಬಿ ನಿರ್ದೇಶನದ ಚಿತ್ರ. ಹಲಾವಾರು ಹೆಸರುಗಳ ನಂತರ ಕೊನೆಗೆ ಚಿತ್ರತಂಡ ವಾಲ್ಟೇರ್‌ ವೀರಯ್ಯ ಎಂಬ ಹೆಸರನ್ನು ಫಿಕ್ಸ್‌ ಮಾಡಿದೆ.

ಇದನ್ನೂ ಓದಿ:  ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ನಡೆದ ಬನಾರಸ್ ಫಿಲ್ಮ್ ಪ್ರೀರಿಲೀಸ್ ಸಮಾರಂಭ

 

ಎನ್ರೋ.. ಅವನು ಬಂದ್ರೆ ಶಾಕ್‌, ಕಾಲಿಟ್ರೆ ಧ್ವಂಸ ಅಂದ್ರಿ, ಆದ್ರೆ ಸೌಂಡ್‌ ನೇ ಇಲ್ಲ ಎಂಬ ವಿಲನ್ ಡೈಲಾಗ್ ಕೇಳುತ್ತಿದ್ದಂತೆ ಬ್ಲಾಸ್ಟ್‌.... ನಂತರ ಅಣ್ಣಯ್ಯ ಸಖತ್‌ ಎಂಟ್ರೀ.. ದೇವಿ ಶ್ರೀ ಪ್ರಸಾದ್ ಬ್ಯಾಕ್ ಗ್ರೌಂಡ್ ಸ್ಕೋರ್ ಅದ್ಭುತವಾಗಿದೆ. ಚಿರಂಜೀವಿ ಮ್ಯಾನರಿಜಂ, ಯಾಟಿಟ್ಯೂಡ್ ಎಲ್ಲವೂ ಕೂಡ ಸೂಪರ್‌. ಅಲ್ಲದೆ, ಲೈಕ್, ಶೇರ್, ಸಬ್ ಸ್ಕ್ರೈಬ್ ಮಾಡಿ ಎನ್ನುವ ಚಿರು ಡೈಲಾಗ್ ಅಭಿಮಾನಿಗಳ ಬಾಯಿಂದ ಸಿಳ್ಳೆ ಹೊಡೆಸಿಕೊಳ್ಳುವಂತಿದೆ. ಚಿರು ನಡಿಗೆ, ಬೀಡಿ ಸೇದುವುದು, ಎಲ್ಲವೂ ಕೂಡ ಮಾಸ್‌. ಕೊನೆಯಲ್ಲಿ ಹ್ಯಾಪಿ ದಿವಾಳಿ.. ಶೀಘ್ರದಲ್ಲಿ ಭೇಟಿಯಾಗುವ ಎನ್ನುವ ರವಿತೇಜ ಧ್ವನಿ ಇದೆ.

ಒಟ್ಟಿನಲ್ಲಿ ಇಷ್ಟು ದಿನ ಅಣ್ಣಯ್ಯನನ್ನು ತೆರೆ ಮೇಲೆ ನೋಡಲು ಮೆಗಾ ಫ್ಯಾನ್ಸ್ ಪರಿತಪ್ಪಿಸುತ್ತಿದ್ದರು. ಅದರಲ್ಲಿ ಮೊದಲ ಬಾರಿಗೆ ಮಾಸ್‌ ಮಹಾರಾಜ್‌ ರವಿತೇಜ ಜೊತೆ ಅಣ್ಣಯ್ಯ ಸ್ಕ್ರೀನ್‌ ಮೇಲೆ ಅಬ್ಬರಿಸಲಿದ್ದು, ಅಭಿಮಾನಿಗಳಿಗೆ ದೀಪಾವಳಿ ಡಬಲ್‌ ಧಮಾಕಾ ನೀಡಿದಂತಾಗಿದೆ. ಸಿನಿಮಾದಲ್ಲಿ ಶೃತಿ ಹಾಸನ್ ಕೂಡಾ ಇದ್ದಾರೆ. ಸಿನಿಮಾಗೆ ದೇವಿ ಶ್ರೀ ಪ್ರಸಾದ್ ಸಂಗೀತವಿದೆ. ಸಂಕ್ರಾಂತಿಗೆ ಹಬ್ಬಕ್ಕೆ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News