ಎಲ್ಲೆಲ್ಲೂ 'ಜೇಮ್ಸ್‌' (James) ಜಪ ಶುರುವಾಗಿದೆ. ದೇಶಾದ್ಯಂತ ಜೇಮ್ಸ್‌ ಟೀಸರ್‌ ಸಂಭ್ರಮ ಮುಗಿಲುಮುಟ್ಟಿದೆ. ಕನ್ನಡಿಗರ ಪಾಲಿನ ಪ್ರೀತಿಯ ಅಪ್ಪು ಅಭಿನಯದ ಕೊನೆಯ ಚಿತ್ರ ಎಲ್ಲೆಲ್ಲೂ ಸಂಚಲನ ಸೃಷ್ಟಿಸುತ್ತಿದೆ. ಟೀಸರ್‌ ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ಮಿಲಿಯನ್‌ ವೀವ್ಸ್‌ ಪಡೆದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: #JamesTeaser: ದೊಡ್ಮನೆ ಅಭಿಮಾನಿಗಳಿಗೆ ಬಿಗ್ ಗಿಫ್ಟ್; ಬಹುನಿರೀಕ್ಷಿತ 'ಜೇಮ್ಸ್' ಚಿತ್ರದ ಟೀಸರ್ ರಿಲೀಸ್


ಅಪ್ಪು ಅಂದ್ರೆ ಸ್ಟೈಲ್‌, ಅಪ್ಪು ಅಂದ್ರೆ ಸ್ಮೈಲ್‌, ಅಪ್ಪು ಅಂದ್ರೆ ಎಲ್ಲವೂ.. ಹೀಗೆ ಸ್ಯಾಂಡಲ್‌ವುಡ್‌ನ ಮಿಸ್ಟರ್‌ ಪರ್ಫೆಕ್ಟ್‌ ಇಂದು ನಮ್ಮೊಂದಿಗಿಲ್ಲ. ಆದರೆ ಸದ್ಯಕ್ಕೆ ಅವರ ಕೊನೆಯ ಚಿತ್ರ ಮಾತ್ರ ನಮ್ಮೊಂದಿಗೆ ಉಳಿದುಕೊಂಡಿದೆ. ಹೀಗೆ ಪವರ್‌ ಸ್ಟಾರ್‌ ಪುನೀತ್ ರಾಜ್ ಕುಮಾರ್ (Puneeth Rajkumar) ಅಭಿನಯದ ಕೊನೇ ಚಿತ್ರ ಜೇಮ್ಸ್ ಬೆಂಕಿ ಚೆಂಡಿನಂತೆ ಸಿನಿ‌ ಮಂದಿರಗಳಿಗೆ ಅಪ್ಪಳಿಸಲು ಸಜ್ಜಾಗಿದೆ. ಇದರ ಸಣ್ಣ ಸ್ಯಾಂಪಲ್‌ ಎಂಬಂತೆ ಟೀಸರ್‌ ಇವತ್ತು ದೇಶಾದ್ಯಂತ ಸಂಚಲನ ಸೃಷ್ಟಿಸಿದೆ.


ಎಲ್ಲೆಡೆ 'ಜೇಮ್ಸ್' ಅಬ್ಬರ: 


ಟೀಸರ್‌ ರಿಲೀಸ್‌ ಆಗ್ತಿದ್ದಂತೆ ಕರುನಾಡಲ್ಲಿ ಸಂಭ್ರಮವೋ ಸಂಭ್ರಮ. ಫೆಬ್ರವರಿ 11ರ ಬೆಳಗ್ಗೆ 11 ಗಂಟೆ 11 ನಿಮಿಷಕ್ಕೆ 'ಜೇಮ್ಸ್‌' ಟೀಸರ್ (James Teaser) ರಿಲೀಸ್‌ ಆಗಿದ್ದೇ ತಡ, ಮಿಲಿಯನ್‌ ಮಿಲಿಯನ್‌ ವೀವ್ಸ್‌, ಲೈಕ್ಸ್‌ ಸಾಗರದಂತೆ ಹರಿದು ಬಂದವು. ಅಪ್ಪು ಅಭಿನಯಕ್ಕೆ ಇಡೀ ದೇಶವೇ ಫಿದಾ ಆಗಿದೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಹಿಂದಿಯಲ್ಲೂ ಟೀಸರ್‌ಗೆ ಸಖತ್‌ ರೆಸ್ಪಾನ್ಸ್‌ ಬಂತು.


ಅಭಿಮಾನವೇ ದೊಡ್ಡದು: 


ಇನ್ನು ಅಭಿಮಾನಿಗಳ ಅಭಿಮಾನವೇ ದೊಡ್ಡದು, ಅಭಿಮಾನಿಗಳೇ ನಮ್ಮನೆ ದೇವ್ರು ಅನ್ನೋದು ದೊಡ್ಮನೆಯ ಮಾತು. ವರನಟ ಡಾ. ರಾಜ್‌ಕುಮಾರ್‌ (Rajkumar) ಅವರಿಂದ ಹಿಡಿದು ದೊಡ್ಮನೆಯ ಪ್ರತಿಯೊಬ್ಬ ನಾಯಕ ನಟರೂ ಅಭಿಮಾನಿಗಳನ್ನ ಅಭಿಮಾನದಿಂದ ಕಾಣ್ತಾರೆ. ಇದೇ ರೀತಿ ಅಪ್ಪುಗೆ ಇರುವ ಫ್ಯಾನ್ಸ್‌ ಕೌಂಟ್ ಅಂಕಿ-ಸಂಖ್ಯೆಯ ಗಡಿಯನ್ನೇ ಮೀರಿದೆ. ಇವತ್ತು ಟೀಸರ್‌ ರಿಲೀಸ್‌ ಆಗ್ತಿದ್ದಂತೆ ಅಭಿಮಾನಿಗಳು ಟೀಸರ್‌ನ ಸಖತ್‌ ಎಂಜಾಯ್‌ ಮಾ‌ಡಿದ್ರು.


ಇದನ್ನೂ ಓದಿ: ಬಾಲಿವುಡ್ ನಿರ್ದೇಶಕ ರವಿ ಟಂಡನ್ ಇನ್ನಿಲ್ಲ


ಒಟ್ಟಾರೆ ಹೇಳೋದಾದ್ರೆ 'ಜೇಮ್ಸ್‌' ಚಿತ್ರ ಕನ್ನಡಿಗರ ಪಾಲಿಗೆ ಅವಿಸ್ಮರಣೀಯ. ಅಪ್ಪು ಬಿಟ್ಟು ಹೋದ ಕೊನೆಯ ಚಿತ್ರ. ಹೀಗಾಗಿ ಇಡೀ ದೇಶವೇ ಜೇಮ್ಸ್‌ ಚಿತ್ರಕ್ಕಾಗಿ ಕಾದು ಕುಳಿತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ 'ಜೇಮ್ಸ್‌' ರಿಲೀಸ್‌ ಆಗಲಿದೆ. ಹೀಗಾಗಿ ಕರುನಾಡಲ್ಲಿ ಈ ಬಾರಿ ದೀಪಾವಳಿ ಹಬ್ಬ ಮಾರ್ಚ್‌ ತಿಂಗಳಲ್ಲೇ ಬರೋದು ಗ್ಯಾರಂಟಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.