ಮುಂಬೈ: ಅಮಿತಾಬ್ ಬಚ್ಚನ್ ಅವರ "ಖುದ್ದಾರ್ ಮತ್ತು ರಿಷಿ ಕಪೂರ್-ನೀತು ಕಪೂರ್ ಅವರ ಖೇಲ್ ಖೇಲ್ ಮೇ ಚಿತ್ರಗಳನ್ನು ನಿರ್ದೇಶಿಸಿದ ಖ್ಯಾತಿಯ ಚಲನಚಿತ್ರ ನಿರ್ದೇಶಕ-ನಿರ್ಮಾಪಕ ರವಿ ಟಂಡನ್ ಶುಕ್ರವಾರದ ನಸುಕಿನಲ್ಲಿ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.
ಇದನ್ನೂ ಓದಿ- 'ಬೈಟ್ ಟು ಲವ್' ಇದು ಚಂದನವನದ ಕ್ಯೂಟ್ ಲವ್ ಸ್ಟೋರಿ..!
ಬಾಲಿವುಡ್ ನಟಿ ರವೀನಾ ಟಂಡನ್ ಮತ್ತು ರಾಜೀವ್ ಟಂಡನ್ ಅವರ ತಂದೆ ರವಿ ಟಂಡನ್ ಅವರು ಉಸಿರಾಟದ ವೈಫಲ್ಯದಿಂದ ನಿಧನರಾದರು.ಅವರು ಕಳೆದ ಕೆಲವು ವರ್ಷಗಳಿಂದ ಶ್ವಾಸಕೋಶದ ಫೈಬ್ರೋಸಿಸ್‌ನಿಂದ ಬಳಲುತ್ತಿದ್ದರು.ಇಂದು ಮುಂಜಾನೆ 3.30ಕ್ಕೆ ಉಸಿರಾಟದ ವೈಫಲ್ಯದಿಂದ ಅವರು ಕೊನೆಯುಸಿರೆಳೆದಿದ್ದಾರೆ' ಎಂದು ಕುಟುಂಬದ ಸದಸ್ಯರು ಪಿಟಿಐಗೆ ತಿಳಿಸಿದ್ದಾರೆ.
47 ವರ್ಷದ ರವೀನಾ ಅವರು ತಮ್ಮ ತಂದೆಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ.'ನೀವು ಯಾವಾಗಲೂ ನನ್ನೊಂದಿಗೆ ನಡೆಯುತ್ತೀರಿ, ನಾನು ಯಾವಾಗಲೂ ನೀನಾಗಿರುತ್ತೇನೆ, ನಾನು ಎಂದಿಗೂ ಹೋಗಲು ಬಿಡುವುದಿಲ್ಲ,ಲವ್ ಯು ಅಪ್ಪಾ,' ಎಂದು ತನ್ನ ತಂದೆಯೊಂದಿಗಿನ ಚಿತ್ರಗಳ ಸರಣಿಯ ಜೊತೆಗೆ ಬರೆದುಕೊಂಡಿದ್ದಾರೆ.
ಇದನ್ನೂ ಓದಿ- Love Mocktail-2 : ಮತ್ತೆ ಕಳೆಗಟ್ಟಿದ ಕನ್ನಡ ಚಿತ್ರರಂಗ : ಇದು ಸ್ಯಾಂಡಲ್‌ವುಡ್ ಸಂಭ್ರಮ!
ಹಲವಾರು ಹಿಂದಿ ಚಿತ್ರರಂಗದ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿದ್ದಾರೆ.
ನಟಿ ಜೂಹಿ ಚಾವ್ಲಾ, 'ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹೃತ್ಪೂರ್ವಕ ಸಂತಾಪಗಳು ರವೀನಾ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಓಂ ಶಾಂತಿ' ಎಂದು ಬರೆದಿದ್ದಾರೆ.ನಟರಾದ ಚಂಕಿ ಪಾಂಡೆ, ನೀಲಂ ಕೊಠಾರಿ, ಯುವಿಕಾ ಚೌಧರಿ, ನಮ್ರತಾ ಶಿರ್ಡೋಕರ್ ಕೂಡ ಸಂತಾಪ ಸೂಚಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.