ಇಂದು ಪುನೀತ್​ ರಾಜ್​ಕುಮಾರ್ (Puneeth Rajkumar)​ ಇಲ್ಲದೇ ಮೊದಲ ಬಾರಿಗೆ ಅವರ ಹುಟ್ಟುಹಬ್ಬ ಆಚರಣೆ ಮಾಡುವ ಪರಿಸ್ಥಿತಿ ಬಂದಿದೆ.


COMMERCIAL BREAK
SCROLL TO CONTINUE READING

ಕಳೆದ ವರ್ಷ ಅ.29ರಂದು ಹೃದಯಾಘಾತದಿಂದ ನಿಧನರಾದ ಅಪ್ಪು ಅವರನ್ನು ಎಲ್ಲರೂ ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಮಾ.17 ಎಂದರೆ ಜಗ್ಗೇಶ್​ ಅಭಿಮಾನಿಗಳಿಗೂ ವಿಶೇಷ. ಯಾಕೆಂದರೆ, ಇಂದು ಜಗ್ಗೇಶ್​ ಜನ್ಮದಿನ (Jaggesh Birthday) ಕೂಡ ಹೌದು. 


ಇದನ್ನೂ ಓದಿ: ಸೇನಾ ಸಮವಸ್ತ್ರದಲ್ಲೇ ಜೇಮ್ಸ್ ಚಿತ್ರ ನೋಡಲು ಬಂದ ನಿವೃತ್ತ ಯೋಧ


ಅಪ್ಪು ಬದುಕಿದ್ದಾಗ ಜಗ್ಗೇಶ್  ಅವರ ಜನ್ಮದಿನಕ್ಕೂ ವಿಶ್​ ಮಾಡುತ್ತಿದ್ದರು. 'ನಾನು ಜಗ್ಗೇಶ್​ (Jaggesh) ಅವರ ಅಭಿಮಾನಿ' ಎಂದು ಹಲವು ಬಾರಿ ಪುನೀತ್​ ಹೇಳಿಕೊಂಡಿದ್ದೂ ಇದೆ.


 


James: ದೊಡ್ಮನೆ ಕುಟುಂಬದಿಂದ ಹಲವು ಕಾರ್ಯ: "ಜೇಮ್ಸ್" ಸಿನಿಮಾ ಅಲ್ಲ, ಎಮೋಷನ್‌ ಎಂದ ರಾಘಣ್ಣ


ಪ್ರತಿ ವರ್ಷ ಹುಟ್ಟುಹಬ್ಬಕ್ಕೆ ಪುನೀತ್​ (Appu) ಕಡೆಯಿಂದ ಜಗ್ಗೇಶ್​ ಅವರಿಗೆ ಶುಭಾಶಯ ಬರುತ್ತಿತ್ತು. "ಜಗ್ಗೇಶ್​ ಅವರಿಗೆ ಒಬ್ಬ ಅಭಿಮಾನಿಯಾಗಿ ನನ್ನ ಕಡೆಯಿಂದ ಶುಭಾಶಯಗಳು. ಹ್ಯಾಪಿ ಬರ್ತ್​ಡೇ ಜಗ್ಗೇಶ್​ ಸರ್​. ಯಾಕೆಂದರೆ ನಾನು ಅವರ ದೊಡ್ಡ ಫ್ಯಾನ್" ಎಂದು ಪುನೀತ್​ ಹೇಳಿದ್ದ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ.


ಅಳುವ ಎಮೋಜಿಗಳ ಮೂಲಕ ಅನೇಕ ಜನರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.