9 ನವಜಾತ ಗಂಡು ಮಕ್ಕಳಿಗೆ ಪುನೀತ್ ಹೆಸರು ನಾಮಕರಣ!

ಇಂದು 9  ಗಂಡು ಮಕ್ಕಳಿಗೆ (Newborn Babies) ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜಕುಮಾರ್  ಹೆಸರು ನಾಮಕರಣ ಮಾಡುವ ಮೂಲಕ ಪುನೀತ್ ರಾಜಕುಮಾರ್ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.

Written by - YASHODHA POOJARI | Edited by - Chetana Devarmani | Last Updated : Mar 16, 2022, 04:07 PM IST
  • ಮಾರ್ಚ್‌ 17 ಕರುನಾಡಿನ ಹೆಮ್ಮೆ ಡಾ.ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬ
  • ಅವರಿಲ್ಲದ ಹುಟ್ಟುಹಬ್ಬ ಯಾಕೋ ಖಾಲಿ ಖಾಲಿ ಎಂದೆನಿಸಿದೆ
  • ಅಪ್ಪು ನೆನಪು ಶಾಶ್ವತವಾಗಿರಲೆಂದು ನವಜಾತ 9 ಗಂಡು ಮಕ್ಕಳಿಗೆ ಪುನೀತ್ ಅಂತ ಹೆಸರು ನಾಮಕರಣ ಮಾಡಲಾಯಿತು
9 ನವಜಾತ ಗಂಡು ಮಕ್ಕಳಿಗೆ ಪುನೀತ್ ಹೆಸರು ನಾಮಕರಣ! title=
ಪುನೀತ್‌ ರಾಜ್‌ಕುಮಾರ್‌

ಮಾರ್ಚ್‌ 17 ಕರುನಾಡಿನ ಹೆಮ್ಮೆ ಡಾ.ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅವರ ಹುಟ್ಟುಹಬ್ಬ. ಅವರಿಲ್ಲದ ಹುಟ್ಟುಹಬ್ಬ ಯಾಕೋ ಖಾಲಿ ಖಾಲಿ ಎಂದೆನಿಸಿದೆ. ಅಪ್ಪು (Appu) ನೆನಪು ಶಾಶ್ವತವಾಗಿರಲೆಂದು ನವಜಾತ 9 ಗಂಡು ಮಕ್ಕಳಿಗೆ ಪುನೀತ್ ಅಂತ ಹೆಸರು ನಾಮಕರಣ ಮಾಡಲಾಯಿತು.

ಇದನ್ನೂ ಓದಿ: Dr. Puneeth Rajkumar Book Launch: ಡಾ.ಪುನೀತ್ ರಾಜ್‌ಕುಮಾರ್ ಪುಸ್ತಕ ಬಿಡುಗಡೆ ಮಾಡಿದ ಕಿಚ್ಚ ಸುದೀಪ್

ಪುನೀತ್ ರಾಜಕುಮಾರ್ ಸಹೋದರಿ ಪೂರ್ಣಿಮಾ ರಾಜಕುಮಾರ್ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಹಿರಿಯ ನಟಿ ತಾರಾ ಅನುರಾಧ (Tara Anuradha) ಹಾಗೂ ಎನ್.ಎಸ್.ರವಿ ಅವರು‌ ಇಂದು 9  ಗಂಡು ಮಕ್ಕಳಿಗೆ (Newborn Babies) ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜಕುಮಾರ್  ಹೆಸರು ನಾಮಕರಣ ಮಾಡುವ ಮೂಲಕ ಪುನೀತ್ ರಾಜಕುಮಾರ್ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.

ಭಾರತಿನಗರ ನಾಗರಿಕರ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಕ್ಸ್ ಟೌನ್ ಹೆರಿಗೆ ಆಸ್ಪತ್ರೆಯಲ್ಲಿ ತಾಯಿ ಮತ್ತು ನವಜಾತ ಶಿಶುಗಳಿಗೆ ಹಾಲು, ಹಣ್ಣು, ಬ್ರೆಡ್‌ ಸಹಿತ ಅಗತ್ಯ ವಸ್ತುಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪೂರ್ಣಿಮಾ, ಅಪ್ಪು ಎಲ್ಲೂ ಹೋಗಿಲ್ಲ. ಹದಿನೇಳರಂದು ಬಂದೇ ಬರುತ್ತಾನೆ. ಜೇಮ್ಸ್‌ಗೆ (James) ನಿಮ್ಮ ಆಶೀರ್ವಾದ ಸದಾ ಇರಲಿ ಎಂದು ಹೇಳುತ್ತಲೇ ಭಾವುಕರಾದ್ರು.

ಇದನ್ನೂ ಓದಿ: James To Release Tomorrow: ಶಿವಣ್ಣ ಮಾಡಬೇಕಿದ್ದ ಸಿನಿಮಾ ಪವರ್‌ ಸ್ಟಾರ್‌ ಮಾಡಿದ್ದು ಏಕೆ ಗೊತ್ತಾ..?

ಇನ್ನು ನಟಿ ತಾರಾ ಮಾತನಾಡಿ, ಅಪ್ಪು ಇಲ್ಲ ಅನ್ನೋದು ಸುಳ್ಳು. ಇಲ್ಲೇ ಇದ್ದಾನೆ. ಇವತ್ತು ನಾಮಕರಣ ಮಾಡಿದ ಎಲ್ಲಾ ಮಕ್ಕಳು ತಂದೆ-ತಾಯಿಗೆ ಒಳ್ಳೆಯ ಮಕ್ಕಳಾಗಿ,  ಉತ್ತಮ ಪ್ರಜೆಗಳಾಗಲಿ ಎಂದು ಹಾರೈಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News