ಬೆಂಗಳೂರು: ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್​ ಅವರ ಡ್ರೀಮ್ ಪ್ರಾಜೆಕ್ಟ್ ‘ಗಂಧದ ಗುಡಿ’(Puneeth Rajkumar's Dream Project) ಟೀಸರ್ ಬಿಡುಗಡೆಯಾಗಿದೆ. ಪುನೀತ್ ಅವರ ‘ಪಿಆರ್​ಕೆ ಆಡಿಯೋ’ (PRK Audio) ಯೂಟ್ಯೂಬ್ ಚಾನೆಲ್ ನಲ್ಲಿ ಸೋಮವಾರ ಟೈಟಲ್​ ಟೀಸರ್​ ರಿಲೀಸ್​ ಮಾಡಲಾಗಿದೆ. 1.20 ನಿಮಿಷಗಳ ಟೀಸರ್ ಅದ್ಭುತವಾಗಿ ಮೂಡಿಬಂದಿದ್ದು ಪಕೃತಿ ಸೌಂದರ್ಯವನ್ನು ಬೆರಗು ಮೂಡಿಸುವಂತೆ ಸೆರೆಹಿಡಿಯಲಾಗಿದೆ.


COMMERCIAL BREAK
SCROLL TO CONTINUE READING

ಈ ವಿಶೇಷ ದಿನಕ್ಕಾಗಿ ‘ಅಪ್ಪು’ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಇದೀ​ ಟೀಸರ್(Gandhada Gudi Teaser)​ ಕಣ್ತುಂಬಿಕೊಂಡು ಪ್ರತಿಯೊಬ್ಬರೂ ಖುಷಿಪಟ್ಟಿದ್ದಾರೆ. ಬಿಡುಗಡೆಯಾದ ಕೆಲ ನಿಮಿಷಗಳಲ್ಲಿಯೇ ಸಾವಿರಾರು ಜನರು ವೀಕ್ಷಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಕೂಡ ಟೀಸರ್ ಸಖತ್ ವೈರಲ್​ ಆಗುತ್ತಿದೆ. ಈ ವೇಳೆ ‘ಯುವರತ್ನ’ ನಮ್ಮೊಂದಿಗೆ ಇರಬೇಕಿತ್ತೆಂದು ಅಭಿಮಾನಿಗಳು ಭಾವುಕರಾಗಿದ್ದಾರೆ.


ಇದನ್ನೂ ಓದಿ: ದೇಶ ತೊರೆಯದಂತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಗೆ ತಡೆ


ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಅಮೂಲ್ಯ.. Baby bump ಪೋಟೋ ಹಂಚಿಕೊಂಡ ತಾರೆ


ಕರುನಾಡಿನ ಕಾಡು-ಮೇಡು ಅಲೆದು ಅದ್ಭುತ ‘ಗಂಧದ ಗುಡಿ’ಯನ್ನು ಪುನೀತ್( Puneeth Rajkumar) ರೂಪಿಸಿದ್ದಾರೆ.​ ಬಹುದೊಡ್ಡ ಕನಸಿನೊಂದಿಗೆ ‘ಅಪ್ಪು’ ರೂಪಿಸಿರುವ ಈ ವೈಲ್ಡ್ ಲೈಫ್ ಜಗತ್ತಿನ ಕಥೆಯ ಟೀಸರ್ ಅನ್ನು ಕರುನಾಡಿನ ಜನರು ಮೆಚ್ಚಿಕೊಂಡಿದ್ದಾರೆ. ಈ ಡಾಕ್ಯುಮೆಂಟ್​ ಚಿತ್ರವನ್ನು ಖ್ಯಾತ ವೈಲ್ಡ್ ಲೈಫ್ ಛಾಯಾಗ್ರಾಹಕ ಅಮೋಘ ವರ್ಷ ನಿರ್ದೇಶಿಸಿದ್ದಾರೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.