Pushpa 2: ಭಾರತೀಯ ಪ್ರೇಕ್ಷಕರು ಕಾಯುತ್ತಿರುವ ಸಿನಿಮಾಗಳಲ್ಲಿ `ಪುಷ್ಪ 2' ಕೂಡ ಒಂದು. ಪುಷ್ಪರಾಜ್ ಎರಡನೇ ಭಾರೀ ಆಳ್ವಿಕೆ ಮಾಡ್ತಾರಾ ಎನ್ನುವುದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.. ಈ ಚಿತ್ರ ಸ್ವಾತಂತ್ರ್ಯ ದಿನದಂದು ಬಿಡುಗಡೆಯಾಗಲಿದ್ದು.. ಈ ವಿಚಾರವಾಗಿ ಹಲವು ಕುತೂಹಲಕಾರಿ ಅಪ್‌ಡೇಟ್‌ಗಳು ಹರಿದಾಡುತ್ತಿವೆ. 


COMMERCIAL BREAK
SCROLL TO CONTINUE READING

ಇನ್ನು ‘ಪುಷ್ಪ’ ಸಿನಿಮಾ ಅಲ್ಲು ಅರ್ಜುನ್ ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಾಡಿತ್ತು. ಆರಂಭದಲ್ಲಿ ಸುಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಆರಂಭದಲ್ಲಿ ಡಿವೈಡ್ ಟಾಕ್ ಸಿಕ್ಕಿತು ನಂತರ ಸಿನಿಮಾ ಭರ್ಜರಿ ಯಶಸ್ಸನ್ನು ಗಳಿಸಿತು.. ಈ ಚಿತ್ರದಲ್ಲಿ ಸಮಂತಾ ಜೊತೆಗಿನ ಐಟಂ ಸಾಂಗ್ ವಿಶೇಷ ಆಕರ್ಷಣೆಯಾಗಿತ್ತು.. 


ಇದನ್ನೂ ಓದಿ-ಸೌರವ್ ಗಂಗೂಲಿ ಬಯೋಪಿಕ್ ನಲ್ಲಿ ನಟಿಸಲಿರುವ ಬಾಲಿವುಡ್‌ ನಟ ಯಾರು ಗೊತ್ತಾ?


ಊ ಅಂಟವಾ ಮಾವ.. ಎಂದು ಸೌತ್‌ ಸುಂದರಿ ಸ್ಯಾಮ್‌ ಸೊಂಟ ಬಳುಕಿಸಿದ್ದರು.. ಈ ಹಾಡಿಗೆ ಮಾಸ್ ಪ್ರೇಕ್ಷಕರು ಕುಣಿದು ಕುಪ್ಪಳಿಸಿದ್ದರು.. ಹೀಗಾಗಿ ಈ ಹಾಡು ಸಿನಿಮಾದ ಯಶಸ್ಸಿನ ಭಾಗವಾಗಿತ್ತು.. ಇದೇ ರೀತಿ ಎರಡನೇ ಭಾಗದಲ್ಲಿ ಐಟಂ ಸಾಂಗ್  ಕುರಿತು ನಿರೀಕ್ಷೆಗಳು ಹೆಚ್ಚಾಗುತ್ತಿವೆ.. ``ಪುಷ್ಪಾ 2~ ಚಿತ್ರದಲ್ಲಿನ ಐಟಂ ಹಾಡಿಗೆ ಹಲವು ನಾಯಕಿಯರ ಹೆಸರು ಹರಿದಾಡುತ್ತಿವೆ... ಆದರೆ ಅಂತಿಮವಾಗಿ ಇಬ್ಬರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ.


ಇಬ್ಬರು ಪ್ರಭಾಸ್ ಚಿತ್ರದ ನಾಯಕಿಯರೊಂದಿಗೆ ಈ ವಿಶೇಷ ಹಾಡುಗಳನ್ನು ಪ್ಲಾನ್ ಮಾಡಲಾಗಿದ್ದು.. ಆದಿಪುರುಷ~ ಬ್ಯೂಟಿ ಕೃತಿ ಸನೋನ್ ಮತ್ತು ``ಕಲ್ಕಿ~ ಬ್ಯೂಟಿ ದಿಶಾ ಪಟಾನಿ ಪುಷ್ಪಾ ಐಟಂ ಸಾಂಗ್‌ಗೆ ಹೆಜ್ಜೆ ಹಾಕಲಿದ್ದಾರೆ..  ಈಗ ಈ ಇಬ್ಬರೊಂದಿಗೆ ಸೌಂದರ್ಯದ ಡಬಲ್ ಡೋಸ್ ಅನ್ನು ಪ್ರೇಕ್ಷಕರಿಗೆ ನೀಡಲು ಚಿತ್ರತಂಡ ಬಯಸಿದೆ.. ಈ ನಿಟ್ಟಿನಲ್ಲಿ ಅವರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.. ಆದರೆ ಈ ಸುದ್ದಿಯಲ್ಲಿ ಎಷ್ಟು ಸತ್ಯಾಂಶವಿದೆ ಎನ್ನುವುದನ್ನು ಕಾದುನೋಡಬೇಕು.. 


ಇದನ್ನೂ ಓದಿ-‘ಆರಾಮ್ ಅರವಿಂದ ಸ್ವಾಮಿ’ ಟೈಟಲ್‌ ಟ್ರ್ಯಾಕ್‌ ಔಟ್!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ