ನವದೆಹಲಿ: ನಟ ಅಲ್ಲು ಅರ್ಜುನ್ (Allu Arjun) ಜೊತೆಗಿನ 'ಪುಷ್ಪಾ ದಿ ರೈಸ್' ಚಿತ್ರದ ಯಶಿಸ್ಸಿನ ಬಳಿಕ ನಟಿ ರಶ್ಮಿಕಾ ಮಂದಣ್ಣ 'ಪುಷ್ಪಾ ದಿ ರೂಲ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಅವರ ವೈಯಕ್ತಿಕ ಜೀವನದ ಬಗ್ಗೆ ಹಲವಾರು ಕುತೂಹಲ ಉಂಟಾಗಿವೆ. ಈ ಹಿಂದೆ ಕನ್ನಡ ನಟ ರಕ್ಷಿತ್ ಶೆಟ್ಟಿ (Rakshit Shetty) ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ನ್ಯಾಷನಲ್ ಕ್ರಶ್ 'ಅರ್ಜುನ್ ರೆಡ್ಡಿ' ಖ್ಯಾತಿಯ ನಟ ವಿಜಯ್ ದೇವರಕೊಂಡ (Vijay Devarakonda) ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ. ಆದರೆ ರಶ್ಮಿಕಾ ಅವರು ತಮ್ಮ 'ಬೆಸ್ಟ್ ಫ್ರೆಂಡ್' ಎಂದು ಕರೆದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 'ಅಥರ್ವ' ರಗಡ್ ಲುಕ್ ನಲ್ಲಿ ಕೂಲ್ ಕ್ಯಾಪ್ಟನ್.. ಧೋನಿ ಮೊದಲ ಪೋಸ್ಟರ್ ಬಿಡುಗಡೆ


ತನಗೆ ಪ್ರೀತಿ ಎಂದರೆ ಏನು ಮತ್ತು ತನ್ನ ಆದರ್ಶ ಸಂಗಾತಿಯಿಂದ ಅವಳು ಏನನ್ನು ನಿರೀಕ್ಷಿಸುತ್ತಾರೆ ಎಂಬುದರ ಕುರಿತು ಬಹಿರಂಗಪಡಿಸಿದ್ದಾರೆ. "ನನಗೆ, ಪ್ರೀತಿ ಎಂದರೆ ಪರಸ್ಪರ ಗೌರವ, ಸಮಯ. ಪ್ರೀತಿಯನ್ನು ವಿವರಿಸುವುದು ಕಷ್ಟ, ಏಕೆಂದರೆ ಅದು ಭಾವನೆಗಳಿಗೆ ಸಂಬಂಧಿಸಿದೆ. ಪ್ರೀತಿಯು ಒಂದೇ ಮಾರ್ಗವಲ್ಲ, ಎರಡೂ ಮಾರ್ಗಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ" ಎಂದು ರಶ್ಮಿಕಾ (Rashmika Mandanna) ಹೇಳಿದ್ದಾರೆ.


ಇದನ್ನೂ ಓದಿ: 'ಮೇಡ್ ಇನ್ ಚೈನಾ'.. ಇದು ಪ್ರಾಡಕ್ಟ್‌ ಅಲ್ಲ, ಕನ್ನಡದ ಡಿಫರೆಂಟ್‌ ಸಿನಿಮಾ


ಮದುವೆಯ ಬಗ್ಗೆ ಕೇಳಿದಾಗ ರಶ್ಮಿಕಾ, "ಅದರ ಬಗ್ಗೆ ಏನು ಯೋಚಿಸಬೇಕೆಂದು ನನಗೆ ತಿಳಿದಿಲ್ಲ. ಏಕೆಂದರೆ ಮದುವೆಯಾಗಲು ನಾನಿನ್ನೂ ಚಿಕ್ಕವಳು. ನಾನು ಅದನ್ನು ಆಲೋಚನೆ ಮಾಡಿಲ್ಲ" ಎಂದಿದ್ದಾರೆ. 


ನಟಿ ರಶ್ಮಿಕಾ ಬಾಲಿವುಡ್‌ನಲ್ಲಿ (Bollywood) ಸಹ ನಟಿಸುತ್ತಿದ್ದು, ಶಂತನು ಬಾಗ್ಚಿಯವರ 'ಮಿಷನ್ ಮಜ್ನು' ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಕಾಣಿಸಿಕೊಳ್ಳಲಿದ್ದಾರೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.