Radhika Apte airport : ಕೆಲವು ವಿಮಾನ ನಿಲ್ದಾಣಗಳಲ್ಲಿ ಭದ್ರತಾ ತಪಾಸಣೆ, ಸಿಬ್ಬಂದಿ ಪ್ರಯಾಣಿಕರ ಕಷ್ಟಕ್ಕೆ ತಕ್ಷಣವೇ ಪ್ರತಿಕ್ರಿಯಿಸುತ್ತಾರೆ. ಅಲ್ಲದೆ, ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ಆಡಳಿತ ಮಂಡಳಿಯಿಂದಲೂ ತಪ್ಪುಗಳಾಗುತ್ತವೆ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಇತ್ತೀಚೆಗಷ್ಟೇ ನಟಿ ರಾಧಿಕಾ ಆಪ್ಟೆ ಕೂಡ ವಿಮಾನ ನಿಲ್ದಾಣದಲ್ಲಿ ಇಂತಹದ್ದೇ ಸಮಸ್ಯೆ ಎದುರಿಸಿದ್ದರು. ಈ ಕುರಿತ ಫೋಟೋ ಮತ್ತು ವೀಡಿಯೊಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

'ಇಂದು ಬೆಳಿಗ್ಗೆ 8.30 ಕ್ಕೆ ನಾನು ವಿಮಾನದಲ್ಲಿ ಪ್ರಯಾಣಿಸಬೇಕಿತ್ತು, 10.50 ಆದರೂ ವಿಮಾನ ಏರಿಲ್ಲ. ಪ್ರಯಾಣಿಕರು ವಿಮಾನ ಹತ್ತುತ್ತಿದ್ದಾರೆ ಎಂದು ಘೋಷಿಸಲಾಯಿತು. ವಾಸ್ತವವಾಗಿ, ಎಲ್ಲಾ ಪ್ರಯಾಣಿಕರು ಏರೋಬ್ರಿಡ್ಜ್ನಲ್ಲಿ ಲಾಕ್ ಆಗಿದ್ದರು. ಚಿಕ್ಕ ಮಕ್ಕಳು ಮತ್ತು ವೃದ್ಧರೊಂದಿಗೆ ಪ್ರಯಾಣಿಕರು ಸುಮಾರು ಒಂದು ಗಂಟೆಗಳ ಕಾಲ ಲಾಕ್ ಆಗಿದ್ದರು. ಭದ್ರತೆ ಬಾಗಿಲು ತೆರೆಯುವುದಿಲ್ಲ. ಅಲ್ಲದೆ, ವಿಮಾನ ಸಿಬ್ಬಂದಿಗೆ ಇಲ್ಲಿ ಏನು ನಡೆಯುತ್ತಿದೆ ಎಂದು ತಿಳಿದಿರಲಿಲ್ಲ ಎಂದು ನಟಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೊಸ್ಟ್‌ ಮಾಡಿದ್ದಾರೆ.


ಸಂಕ್ರಾಂತಿಗೆ ಶಿವಣ್ಣ ಸ್ಪೆಷಲ್ ಗಿಫ್ಟ್‌: ಕಿರುತೆರೆಯಲ್ಲಿ ಘೋಸ್ಟ್ ವರ್ಲ್ಡ್ ಪ್ರಿಮಿಯರ್!


ಅಲ್ಲದೆ, ನಾನು ಹೇಗೆ ನುಸುಳಿಕೊಂಡು ಹೊರಗೆ ಹೋಗಿ ಒಬ್ಬ ಮೂರ್ಖ ಸಿಬ್ಬಂದಿ ಮಹಿಳೆಯೊಂದಿಗೆ ಮಾತನಾಡಿದೆ. ನನ್ನಿಂದ ತೊಂದರೆಯಾಗಿಲ್ಲ ಅಂತ ಹೇಳಿ ಜಾರಿಕೊಂಡಳು. ಸಧ್ಯ ನಾವು ಒಳಗೆ ಲಾಕ್‌ ಆಗಿದ್ದೇವೆ. ಮಧ್ಯಾಹ್ನ 12 ಗಂಟೆಯಾದರೂ ಇಲ್ಲಿಯೇ ಇರಬೇಕಾಗುತ್ತದೆ ಎನ್ನುತ್ತಿದ್ದಾರೆ. ನೀರಿಲ್ಲ, ಸ್ನಾನಗೃಹಕ್ಕೆ ಪ್ರವೇಶವಿಲ್ಲ, ಮೋಜಿನ ಸವಾರಿಗಾಗಿ ಧನ್ಯವಾದಗಳು' ಅಂತ ರಾಧಿಕಾ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ಗೆ ಸಾಕಷ್ಟು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.