ಸಂಕ್ರಾಂತಿಗೆ ಶಿವಣ್ಣ ಸ್ಪೆಷಲ್ ಗಿಫ್ಟ್‌: ಕಿರುತೆರೆಯಲ್ಲಿ ಘೋಸ್ಟ್ ವರ್ಲ್ಡ್ ಪ್ರಿಮಿಯರ್!

Ghost: ಚಂದನವನದ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಅಭಿನಯ ಘೋಸ್ಟ್‌ ಚಿತ್ರ ಕಳೆದ ವರ್ಷ ತೆರೆಕಂಡಿದ್ದು, ಇದೇ ಮೊಟ್ಟ ಮೊದಲ ಬಾರಿಗೆ ಸಂಕ್ರಾಂತಿ ವಿಶೇಷವಾಗಿ ಮೆನೆಮನೆಗೂ ಹಬ್ಬದ ಸಡಗರವನ್ನು ಹೆಚ್ಚಿಸಲು ಬರುತ್ತಿದೆ. ಹಾಗಾದ್ರೆ ಫೋಸ್ಟ್‌ ಟಿವಿಯಲ್ಲಿ ಯಾವಾಗ ಪ್ರಸಾರವಾಗಲಿದೆ? ಇಲ್ಲಿದೆ ಫುಲ್‌ ಡಿಟೇಲ್ಸ್.‌  

Last Updated : Jan 14, 2024, 11:06 AM IST
  • ಘೋಸ್ಟ್ ಸಿನಿಮಾವನ್ನು ನಿರ್ಮಾಪಕ ಸಂದೇಶ್ ನಾಗರಾಜ್ ನಿರ್ಮಾಣ ಮಾಡಿದ್ದು,ಇದು ಅತಿ ಹೆಚ್ಚುಗಳಿಕೆ ಮಾಡಿದ ಚಿತ್ರವೂ ಇದಾಗಿತ್ತು.
  • ಸಂಕ್ರಾಂತಿ ಹಬ್ಬಕ್ಕೆ ಮೊದಲ ಬಾರಿಗೆ ಘೋಸ್ಟ್ ಚಿತ್ರ ಟಿವಿಯಲ್ಲಿ ಪ್ರಸಾರ ಆಗುತ್ತಿದ್ದು, ಜೀ ಕನ್ನಡಲ್ಲಿಯೇ ಇದೀಗ ಘೋಸ್ಟ್ ಸಿನಿಮಾ ಪ್ರಸಾರದ ಪ್ಲಾನ್ ಆಗಿದೆ.
  • ಕಳೆದ ವರ್ಷ ಅಕ್ಟೋಬರ್-19 ರಂದು ಘೋಸ್ಟ್ ಸಿನಿಮಾ ಎಲ್ಲೆರೆ ರಿಲೀಸ್ ಆಗಿದ್ದು, ಮತ್ತೆ ಹಿಂದಿ ಭಾಷೆಯಲ್ಲೂ ಈ ಚಿತ್ರ ರಿಲೀಸ್ ಆಗಿತ್ತು.
ಸಂಕ್ರಾಂತಿಗೆ ಶಿವಣ್ಣ ಸ್ಪೆಷಲ್ ಗಿಫ್ಟ್‌: ಕಿರುತೆರೆಯಲ್ಲಿ ಘೋಸ್ಟ್ ವರ್ಲ್ಡ್ ಪ್ರಿಮಿಯರ್! title=

Sankranthi Ghost Special: ಸ್ಯಾಂಡಲ್‌ವುಡ್‌ ಸಿನಿ ಅಂಗಳದಲ್ಲಿ ಕಳೆದ ವರ್ಷ ಘೋಸ್ಟ್ ಸಿನಿಮಾ ತೆರೆಕಂಡು, ಅತಿ ಹೆಚ್ಚು ಗಮನ ಸೆಳೆದ ಚಿತ್ರವೂ ಇದಾಗಿತ್ತು. ಈ ಸಿನಿಮಾವನ್ನು ನಿರ್ಮಾಪಕ ಸಂದೇಶ್ ನಾಗರಾಜ್ ನಿರ್ಮಾಣ ಮಾಡಿದ್ದು,ಇದು ಅತಿ ಹೆಚ್ಚುಗಳಿಕೆ ಮಾಡಿದ ಚಿತ್ರವೂ ಇದಾಗಿತ್ತು.  ಕ್ರೇಜ್ ಹುಟ್ಟುಹಾಕಿದ್ದ ಈ ಸಿನಿಮಾ ಮೊದಲ ಬಾರಿಗೆ ಟಿವಿಯಲ್ಲಿ ಪ್ರಸಾರ  ಆಗುತ್ತಿದೆ. ವಿಶೇಷವಾಗಿ ಅದು ಸಂಕ್ರಾಂತಿ ಹಬ್ಬಕ್ಕೇನೆ ಪ್ರಸಾರ ಆಗುತ್ತಿದೆ. 

ಸಂಕ್ರಾಂತಿ ಹಬ್ಬಕ್ಕೆ ಮೊದಲ ಬಾರಿಗೆ ಘೋಸ್ಟ್ ಚಿತ್ರ ಟಿವಿಯಲ್ಲಿ ಪ್ರಸಾರ ಆಗುತ್ತಿದ್ದು, ಜೀ ಕನ್ನಡಲ್ಲಿಯೇ ಇದೀಗ ಘೋಸ್ಟ್ ಸಿನಿಮಾ ಪ್ರಸಾರದ ಪ್ಲಾನ್ ಆಗಿದೆ. ಅಧಿಕೃತವಾಗಿಯೇ ಈ ಒಂದು ಮಾಹಿತಿ ಕೂಡ ಹೊರ ಬಂದಿದ್ದು, ಈ ಮೂಲಕ ಶಿವಣ್ಣನ ಫ್ಯಾನ್ಸ್‌ಗೆ ಹಬ್ಬ ಸಂಭ್ರಮ ಮತ್ತು ಸಡಗರ ಎರಡೂ ಇರುತ್ತದೆ ಅಂತಲೇ ಹೇಳಬಹುದು.

 
 
 
 

 
 
 
 
 
 
 
 
 
 
 

A post shared by Zee Kannada (@zeekannada)

ಇದನ್ನೂ ಓದಿ: 'ಉಪಾಧ್ಯಕ್ಷ' ಟ್ರೇಲರ್‌ ರಿಲೀಸ್! ಅಧ್ಯಕ್ಷ ಮ್ಯಾಜಿಕ್‌ ಇದರಲ್ಲಿಯೂ ಇದೆಯಾ?

ಕರುನಾಡ ಚಕ್ರವತಿ ಶಿವರಾಜ್‌ಕುಮಾರ್‌ ನಟನೆಯ ಘೋಸ್ಟ್ ಸಿನಿಮಾ ಇದೇ ಜನವರಿ 15 ರಂದು ಹಬ್ಬಕ್ಕೆ ಟಿವಿಯಲ್ಲಿ ಪ್ರಸಾರವಾಗಲಿದ್ದು, ಸೋಮವಾರ ಸಂಜೆ-4 ಗಂಟೆಗೆ ಹಬ್ಬದ ಸಡಗರದಲ್ಲಿರೋರಿಗೆ ಈ ಚಿತ್ರ ಎಂಟರಟೈನ್ ಮಾಡಲಿದೆ. ಈ ಮೂಲಕ ಸಂಕ್ರಾಂತಿ ಹಬ್ಬಕ್ಕೆ ಶಿವಣ್ಣ ಎಲ್ಲರ ಮನ-ಮನೆಯಲ್ಲೂ ಬರ್ತಿದ್ದು, ಹಬ್ಬದ ಖುಷಿಯನ್ನು ದುಪ್ಪಟ್ಟಯ ಮಾಡಲಿದೆ.

ಕಳೆದ ವರ್ಷ ಅಕ್ಟೋಬರ್-19 ರಂದು ಘೋಸ್ಟ್ ಸಿನಿಮಾ ಎಲ್ಲೆರೆ ರಿಲೀಸ್ ಆಗಿದ್ದು, ಮತ್ತೆ ಹಿಂದಿ ಭಾಷೆಯಲ್ಲೂ ಈ ಚಿತ್ರ ರಿಲೀಸ್ ಆಗಿತ್ತು. ಬಹು ಭಾಷೆಯಲ್ಲಿ ತೆರೆಗೆ ಅಪ್ಪಳಿಸಿದ ಈ  ಚಿತ್ರವನ್ನ ಜನ ತುಂಬಾನೆ ಮೆಚ್ಚಿಕೊಂಡು, ಹಾಗೆಯೇ  ಒಳ್ಳೆ ಕಲೆಕ್ಷನ್ ಕೂಡ ಮಾಡಿ, ಗೆಲುವಿನ ನಗೆಯನ್ನೂ ಬೀರಿತ್ತು. ಇದೀಗ ಘೋಸ್ಟ್ ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ಧಮಾಕಾ ಮಾಡಲು ಬರ್ತಿದೆ ಅಂತಲೇ ಹೇಳಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News