Sandalwood Actress Radhika Pandith: ಚಂದನವನದ ನಟಿ ರಾಧಿಕಾ ಪಂಡಿತ್‌ ಹಲವಾರು ವರ್ಷಗಳಿಂದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೇ, ತಮ್ಮ ಫ್ಯಾಮಿಲಿ ಜೊತೆ ತಮ್ಮ ಸಮಯ ಕಳೆಯುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ನಟಿ ಆಗಾಗ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.  


COMMERCIAL BREAK
SCROLL TO CONTINUE READING

ರಾಧಿಕಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದು, ಸದಾ  ವಿಡಿಯೋ, ಫೊಟೋ ಕಂಟೆಂಟ್‌ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ಶೇರ್ ಮಾಡುತ್ತಾರೆ. ಅದರಲ್ಲೂ ಹಬ್ಬಗಳಿದ್ದಾಗ ಅಥವಾ ಇತರ ಸಮಾರಭಗಳಲ್ಲಿ ಈ ನಟಿ ಪೋಸ್ಟ್‌ಗಳನ್ನು ಫ್ಯಾನ್ಸ್ ಹಾಗೂ ಫಾಲೊವರ್ಸ್ ಜೊತೆ ಶೇರ್ ಮಾಡುತ್ತಾರೆ. ಇತ್ತೀಚೆಗೆ ಈ ನಟಿ ವಿಶೇಷವಾದ  ವಿಡಿಯೋ ಕ್ಲಿಪ್ ಶೇರ್ ಮಾಡಿದ್ದಾರೆ.



ಇದನ್ನು ಓದಿ: ವಿಜಯ್ ದೇವರಕೊಂಡ ಚಿತ್ರದಿಂದ ಹೊರನಡೆದ ಶ್ರೀಲೀಲಾ: ಕಾರಣವೇನು?


ರಾಧಿಕಾ ಪಂಡಿತ್ ಶೇರ್ ಮಾಡಿದ ವಿಡಿಯೋದಲ್ಲಿ ಯಥರ್ವ್ ಈ ನಟಿಗೆ ಮಲ್ಲಿಗೆ ಹೂವು ಮುಡಿಸಿದ್ದು, ಅಮ್ಮನ ಮುಡಿಗೆ ಮಲ್ಲಿಗೆ ಮುಡಿಸಿದ ಯಥರ್ವ್ ಯಶ್ ತುಂಬಾ ಕ್ಯೂಟ್ ಆಗಿ ಕಾಣಿಸಿದ್ದಾರೆ. ರಾಧಿಕಾ ಪಂಡಿತ್ ತುಂಬಾ ಖುಷಿಯಾಗಿದ್ದು, "ನನ್ನ ಬೇಬಿ ಬಾಯ್ ನಾನು ಸ್ಪೆಷಲ್ ಅಂತ ಫೀಲ್ ಮಾಡಿಸಲು ನೀನೆಂದೂ ಸೋತಿಲ್ಲ. ನನ್ನನ್ನು ನಿನ್ನ ತಾಯಿಯಾಗಿ ಆರಿಸಿಕೊಂಡಿದ್ದಕ್ಕೆ ಥ್ಯಾಂಕ್ಯೂ. ಹ್ಯಾಪಿ ಬರ್ತ್​ಡೇ ಯಥರ್ವ್, ಲವ್ ಯೂ ಆಲ್ವೇಸ್" ಎಂದು ತಮ್ಮ ಸೋಷಿಯಲ್‌ ಮಿಡಿಯಾದಲ್ಲಿ ಬರೆದಿದ್ದಾರೆ.


ರಾಧಿಕಾಳ ಇನ್‌ಸ್ಟಾಗ್ರಾಮ್‌ನ ಪೋಸ್ಟ್‌ಗೆ ಅಭಿಮಾನಿಗಳು ಕೂಡಾ ಕಮೆಂಟ್ ಮಾಡಿ ವಿಶ್ ಮಾಡಿದ್ದು, "ಹ್ಯಾಪಿ ಬರ್ತ್​ಡೇ ಯಥರ್ವ್" ಎಂದು ಎಲ್ಲರೂ ರಾಧಿಕಾ-ಯಶ್‌ ಪುತ್ರ ಯಥರ್ವ್‌ಗೆ ಬರ್ತ್​ಡೇ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ನಟಿ ಪೋಸ್ಟ್ ಮಾಡಿರುವ ವಿಡಿಯೋಗೆ  ಎರಡು ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, ಎಲ್ಲರೂ ವಿಡಿಯೋ ನೋಡಿ ಯಥರ್ವ್ ಎಷ್ಟು ಮುದ್ದಾಗಿದ್ದಾನೆ ಎಂದು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.