ಬೆಂಗಳೂರು: ರೆಡಿಯೋ ಮಿರ್ಚಿ (Radio Mirchi)ಯಲ್ಲಿ ಹಲವಾರು ವರ್ಷ ರೆಡಿಯೋ ಜಾಕಿ (RJ)ಯಾಗಿ ಕೆಲಸ ಮಾಡಿದ್ದ ರಚನಾ ಹೃದಯಘಾತದಿಂದ ನಿಧನರಾಗಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಜೊತೆ ಮದುವೆ! ಈ ಬಗ್ಗೆ ನಟ ವಿಜಯ್ ದೇವರಕೊಂಡ ಮೊದಲ ಪ್ರತಿಕ್ರಿಯೆ..


ತಮ್ಮ ಮಾತಿನ ಮೂಲಕವೇ ಜನರ ಮನಸ್ಸು ಗೆದ್ದಿದ್ದ ರಚನಾಗೆ (Rachana) ಹೃದಯಾಘಾತ ಸಂಭವಿಸಿದೆ. ಎದೆ ನೋವು ಕಾಣಿಸಿಕೊಂಡಿದ್ದ ಬೆನ್ನಲ್ಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಮಾರ್ಗಮಧ್ಯೆ ರಚನಾ ಕೊನೆಯುಸಿರೆಳೆದಿದ್ದಾರೆ.



ಕಳೆದ ಕೆಲ ವರ್ಷಗಳಿಂದ ರೆಡಿಯೋ ಜಾಕಿ ಕೆಲಸವನ್ನು ಬಿಟ್ಟು ಮನೆಯಲ್ಲೇ ಇದ್ದರು. ರಚನಾ ಅವರ ತಂದೆ-ತಾಯಿ ಚಾಮರಾಜಪೇಟೆಯಲ್ಲಿ ವಾಸವಿದ್ದರು. 


ಜನಪ್ರಿಯ ರೆಡಿಯೋ ಜಾಕಿಯಾಗಿದ್ದ ರಚನಾ ಅವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ರಕ್ಷಿತ್​ ಶೆಟ್ಟಿ ಅವರ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' (Simple Agi Ondh Love Story) ಸಿನಿಮಾದಲ್ಲಿ ಅಭಿನಯಿಸಿದ್ದರು. ಸಿನಿಮಾದಲ್ಲೂ ರೆಡಿಯೋ ಜಾಕಿ ಪಾತ್ರದಲ್ಲೇ ನಟಿಸಿದ್ದರು.


ಇದನ್ನೂ ಓದಿ: Kruti Shetty: ನಟಿ ಕೃತಿ ಶೆಟ್ಟಿ ಬಗ್ಗೆ ಶುರುವಾಯ್ತು ಹೊಸ ಗಾಸಿಪ್! ಏನಿದು ಆರೋಪ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.