Kruti Shetty: ನಟಿ ಕೃತಿ ಶೆಟ್ಟಿ ಬಗ್ಗೆ ಶುರುವಾಯ್ತು ಹೊಸ ಗಾಸಿಪ್! ಏನಿದು ಆರೋಪ?

Kruti Shetty: ಕೃತಿ ಶೆಟ್ಟಿ ಅವರ ವಿರುದ್ಧ ಗಾಸಿಪ್‌ ಒಂದು ಓಡಾಡುತ್ತಿದ್ದು, ಇದನ್ನ ನಟಿ ಕೃತಿ ಶೆಟ್ಟಿ ತೀರಾ ಗಂಭೀರವಾಗಿ ಪರಿಗಣಿಸಿದ್ಧಾರೆ. ಹಾಗಾದ್ರೆ ಏನದು ಗಾಸಿಪ್..?‌ ತಮ್ಮ ವಿರುದ್ಧದ ವದಂತಿ ಬಗ್ಗೆ ಕೃತಿ ಶೆಟ್ಟಿ ಕೊಟ್ಟ ಉತ್ತರವಾದರೂ ಏನು..? ಬನ್ನಿ ನೋಡೋಣ.

Written by - Malathesha M | Edited by - Chetana Devarmani | Last Updated : Feb 21, 2022, 05:54 PM IST
  • ಕೃತಿ ಶೆಟ್ಟಿ ಅವರ ವಿರುದ್ಧ ಗಾಸಿಪ್‌ ಒಂದು ಓಡಾಡುತ್ತಿದೆ
  • ಇದನ್ನ ನಟಿ ಕೃತಿ ಶೆಟ್ಟಿ ತೀರಾ ಗಂಭೀರವಾಗಿ ಪರಿಗಣಿಸಿದ್ಧಾರೆ
  • ಹಾಗಾದ್ರೆ ಏನದು ಗಾಸಿಪ್..?‌
Kruti Shetty: ನಟಿ ಕೃತಿ ಶೆಟ್ಟಿ ಬಗ್ಗೆ ಶುರುವಾಯ್ತು ಹೊಸ ಗಾಸಿಪ್! ಏನಿದು ಆರೋಪ?  title=
ನಟಿ ಕೃತಿ ಶೆಟ್ಟಿ

ಬೆಂಗಳೂರು: ಟಾಲಿವುಡ್‌ನಲ್ಲಿ (Tollywood) ಮೊದಲ ಸಿನಿಮಾದಲ್ಲೇ ಮಿಂಚು ಹರಿಸಿದ್ದ ಕೃತಿ ಶೆಟ್ಟಿ ಸಾಲು ಸಾಲು ಸಿನಿಮಾ ಆಫರ್‌ಗಳನ್ನ ಕೊಳ್ಳೆ ಹೊಡೆಯುತ್ತಿದ್ದಾರೆ. ಆದರೆ ಈ ಹೊತ್ತಲ್ಲೇ ಕೃತಿ ಶೆಟ್ಟಿ ಅವರ ವಿರುದ್ಧ ಗಾಸಿಪ್‌ ಒಂದು ಓಡಾಡುತ್ತಿದ್ದು, ಇದನ್ನ ನಟಿ ಕೃತಿ ಶೆಟ್ಟಿ (Kruti Shetty) ತೀರಾ ಗಂಭೀರವಾಗಿ ಪರಿಗಣಿಸಿದ್ಧಾರೆ. ಹಾಗಾದ್ರೆ ಏನದು ಗಾಸಿಪ್..?‌ ತಮ್ಮ ವಿರುದ್ಧದ ವದಂತಿ ಬಗ್ಗೆ ಕೃತಿ ಶೆಟ್ಟಿ ಕೊಟ್ಟ ಉತ್ತರವಾದರೂ ಏನು..? ಬನ್ನಿ ನೋಡೋಣ.

ಟಾಲಿವುಡ್‌ನಲ್ಲಿ ಮಿಂಚು ಹರಿಸಿದ್ದ ನಟಿ ಕೃತಿ ಶೆಟ್ಟಿ. ಈಗಲೂ ಪಡ್ಡೆ ಹೈಕ್ಳ ನಿದ್ದೆ ಕದ್ದಿರುವ ಬೆಡಗಿ ಕೃತಿ ಶೆಟ್ಟಿ. ಹೀಗೆ ಕೃತಿ ಶೆಟ್ಟಿಗೆ ಒಂದೇ ಸಿನಿಮಾ ದೊಡ್ಡ ಯಶಸ್ಸು ತಂದು ಕೊಟ್ಟಿತು. ರಾತ್ರೋ ರಾತ್ರಿ ಮತ್ತೊಬ್ಬ ಸೂಪರ್‌ ಸ್ಟಾರ್‌ ಸಿನಿಮಾ ರಂಗಕ್ಕೆ ಸಿಕ್ಕಿಬಿಟ್ಟರು. ಹೀಗೆ ತಮ್ಮ ನಟನೆ ಹಾಗೂ ಪರಿಶ್ರಮದಿಂದ ಮೇಲೆ ಬಂದ ನಟಿ ಕೃತಿ ಶೆಟ್ಟಿ ವಿರುದ್ಧ ಗಾಸಿಪ್‌ (Gossip) ಒಂದು‌ ಸದ್ಯ ಜೋರಾಗಿ ಓಡಾಡುತ್ತಿದೆ.

ಇದನ್ನೂ ಓದಿ: Anchor Anushree: ಸ್ಯಾಂಡಲ್​ವುಡ್​ಗೆ ರೀ ಎಂಟ್ರಿ ಕೊಟ್ಟ ಆ್ಯಂಕರ್ ಅನುಶ್ರೀ..!

ಗಾಸಿಪ್‌ಗಳ ಲೋಕ..!

ಸಿನಿಮಾ ರಂಗ ಅಂದ್ರೆನೆ ಗಾಸಿಪ್‌ಗಳ ಲೋಕ. ಸಿನಿಮಾ ಲೋಕದಲ್ಲಿ (Sandalwood) ಪ್ರತಿ ವಿಚಾರಕ್ಕೂ ಗಾಸಿಪ್‌ಗಳು ಓಡಾಡುತ್ತಲೇ ಇರುತ್ತವೆ. ಒಂದಷ್ಟು ಗಾಸಿಪ್‌ ಒಳ್ಳೆಯ ರೀತಿಯದ್ದಾಗಿದ್ರೆ, ಮತ್ತಷ್ಟು ಗಾಸಿಪ್‌ಗಳು ನಟ ಅಥವಾ ನಟಿಯರ ಸಿನಿ ಕರಿಯರ್‌ ಗೆ ಕಪ್ಪುಚುಕ್ಕೆ ತರುವ ಆತಂಕ ಇರುತ್ತದೆ. ಇಂತಹದ್ದೇ ಒಂದು ವದಂತಿ ನಟಿ ಕೃತಿ ಶೆಟ್ಟಿ ವಿರುದ್ಧ ಓಡಾಡುತ್ತಿದ್ದು, ಇದನ್ನ ಕೃತಿ ಶೆಟ್ಟಿ ತೀರಾ ಗಂಭೀರವಾಗಿಯೇ ಪರಿಗಣಿಸಿದ್ದಾರಂತೆ.

ಮೊದಲ ಚಿತ್ರವೇ ಹಿಟ್..!

ಅಂದಹಾಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ವೇಗವಾಗಿ ಯಶಸ್ಸು ಪಡೆದು ಸ್ಟಾರ್ ಎನಿಸಿಕೊಂಡ ನಟಿ ಕೃತಿ ಶೆಟ್ಟಿ ಸಾಲು ಸಾಲು ಸಿನಿಮಾಗಳನ್ನು ಕೊಳ್ಳೆ ಹೊಡೆದಿದ್ದಾರೆ. ಚೊಚ್ಚಲ ಚಿತ್ರ 'ಉಪ್ಪೆನ' ಕೃತಿ ಶೆಟ್ಟಿಗೆ ದೊಡ್ಡ ಯಶಸ್ಸು ತಂದುಕೊಟ್ಟಿದೆ. ಬಳಿಕ ಕೃತಿಗೆ ಸಾಲು ಸಾಲು ದೊಡ್ಡ ಚಿತ್ರಗಳಿಂದ ಆಫರ್‌ ಸಿಕ್ಕಿದೆ. ಇಲ್ಲಿ ತನಕ ಕೃತಿ ಮಾಡಿರುವ ಚಿತ್ರಗಳು ಕೂಡ ಯಶಸ್ಸು ಕಂಡಿವೆ. ಆದರೆ ಈ ಹೊತ್ತಲ್ಲೇ ಗಾಸಿಪ್‌ ಒಂದು ನಟಿಯ ನೆಮ್ಮದಿಗೆ ಭಂಗ ತಂದಿದೆ.

ನಟಿ ಮಣಿಯರು ತಮ್ಮ ಬಗ್ಗೆ ಹರಿದಾಡುವ ಗಾಸಿಪ್ ಬಗ್ಗೆ ಕೇರ್‌ ಮಾಡೋದಿಲ್ಲ. ಹಾಗಂತಾ ಇದು ಎಲ್ಲಾ ಸಂದರ್ಭದಲ್ಲೂ ಹೀಗೆ ಇರಬೇಕು ಅಂತೇನಿಲ್ಲ. ಕೆಲವೊಮ್ಮೆ ತಮ್ಮ ವೃತ್ತಿ ಜೀವನಕ್ಕೆ ಕೆಲವು ಗಾಸಿಪ್‌ಗಳು ಅಡ್ಡ ಬರುತ್ತಿವೆ ಎಂದಾಗ ನಟಿಯರು ಅದರ ವಿರುದ್ಧ ಖಡಕ್‌ ಕ್ರಮ ಕೈಗೊಳ್ಳಲು ಹಿಂದೆ ಮುಂದೆ ನೋಡೋದಿಲ್ಲ. ಇದೇ ರೀತಿ  ಕೃತಿ ಶೆಟ್ಟಿ ಕೂಡ ತಮ್ಮ ವಿರುದ್ಧ ಎದ್ದಿರುವ ವದಂತಿಗೆ ಎಳ್ಳುನೀರು ಬಿಡಲು ನಿರ್ಧರಿಸಿದ್ದಾರೆ.

ಏನಿದು ಗಾಸಿಪ್..?

ಅರೆರೆ ಏನಪ್ಪಾ ಅದು ಗಾಸಿಪ್‌ ಅಂದ್ರಾ..? ನಟಿ ಕೃತಿ ಶೆಟ್ಟಿ ವಿರುದ್ಧ ಸದ್ಯ ಓಡಾಡುತ್ತಿರುವ ಗಾಸಿಪ್‌ ಏನಂದ್ರೆ, ಕೃತಿ ಅವರು ಶೂಟಿಂಗ್ ವಿಚಾರದಲ್ಲಿ ಶಿಸ್ತು ಕಾಪಾಡಲ್ಲ ಎಂಬ ವದಂತಿ ಬಲು ಜೋರಾಗಿ ಹರಿದಾಡುತ್ತಿದೆ. ಇದರ ಜೊತೆಗೆ ಕೃತಿ ಸಮಯಕ್ಕೆ ಸರಿಯಾಗಿ ಶೂಟಿಂಗ್‌ ಸೆಟ್‌ಗೆ ಬರಲ್ಲ. ಸೆಟ್‌ನಲ್ಲಿ ನಟಿ ಕೃತಿ ಶೆಟ್ಟಿ ಸಹ ಕಲಾವಿದರಿಗೆ ಗೌರವ ಕೊಡಲ್ಲ ಎಂಬ ಆರೋಪಗಳು ಕೂಡ ಓಡಾಡುತ್ತಿವೆ. ಹೀಗಾಗಿಯೇ ಈ ಗಾಸಿಪ್‌ಗಳು ನಟಿಯ ನಿದ್ದೆ ಕೆಡಿಸಿವೆ.

ಅಂದಹಾಗೆ ನಟಿಯರ ವಿರುದ್ಧ ಹೀಗೆ ಗಾಸಿಪ್‌ ಹರಿದಾಡೋದು ಇದೇ ಮೊದಲೇನಲ್ಲ. ಇದಕ್ಕೆ ದೊಡ್ಡ ಇತಿಹಾಸವೇ ಇದೆ ಬಿಡಿ. ಆದರೆ ಇದೀಗ ನಟಿ ಕೃತಿ ಶೆಟ್ಟಿ ವಿರುದ್ಧ ಓಡಾಡುತ್ತಿರುವ ಗಾಸಿಪ್‌ಗಳು ಸುಖಾಸುಮ್ಮನೆ ಹುಟ್ಟಿದ್ದು ನಟಿಗೆ ಬೇಸರ ತರಿಸಿದೆ. ಈ ಕುರಿತು ಕೃತಿ ಶೆಟ್ಟಿ ಕೂಡ ತೀವ್ರ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.

ನಟಿಗೆ ಸಲಹೆ..!

ಈ ವಿಚಾರವಾಗಿ ನಟಿ ಕೃತಿ, ಪಿಆರ್ ಟೀಂ ಜೊತೆಗೂ ಚರ್ಚಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಕೆಲವೊಂದಿಷ್ಟು ಸಲಹೆಗಳು ಬಂದಿದ್ದು, ಸುಮ್ಮನೆ ಇರೋದೆ ಒಳ್ಳೆಯದು, ಈ ಸಮಯದಲ್ಲಿ ಇಂತಹ ವದಂತಿಗಳಿಗೆ ಉತ್ತರ ನೀಡೋದು ಬೇಡ ಎಂಬ ಸಲಹೆಯನ್ನ ನಟಿಗೆ ನೀಡಿದ್ದಾರೆ. ಆದರೆ ಹೇಗಾದ್ರು ಈ ಗಾಸಿಪ್‌ಗಳಿಗೆ ಬ್ರೇಕ್‌ ಹಾಕಲು ನಟಿ ಸೂಚಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: 'ಹಂಟರ್'​ ಮೋಷನ್‌ ಪೋಸ್ಟರ್‌ ರಿಲೀಸ್: ಅಣ್ಣನ ಮಗನಿಗೆ ಉಪೇಂದ್ರ‌ ಸಾಥ್!

ಒಟ್ನಲ್ಲಿ ತಮ್ಮ ವಿರುದ್ಧದ ವದಂತಿಗೆ ನಟಿ ಕೃತಿ ಕೆರಳಿದ್ದಾರೆ. ಇಲ್ಲಸಲ್ಲದ ಗಾಸಿಪ್‌ ಎಂಡ್‌ ಆಗಲಿ ಅಂತಾ ಪ್ರಯತ್ನಿಸಿದ್ದಾರೆ. ಮತ್ತೊಂದು ಕಡೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಕೈಯಲ್ಲಿರುವ ಪ್ರಾಜೆಕ್ಟ್‌ಗಳನ್ನ ನೀಟ್‌ ಆಗಿ ಮುಗಿಸಲು ಕೃತಿ ಶೆಟ್ಟಿ ಸಜ್ಜಾಗಿದ್ದು, ಅವರ ಸಿನಿ ಕರಿಯರ್‌ಗೆ ಆಲ್‌ ದಿ ಬೆಸ್ಟ್‌ ಹೇಳೋಣ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News