Lucky Man: `ಅಪ್ಪು ಕುಳಿತಿದ್ದ ಆ ಚೇರ್ ಕೊಡಿ ಸಾಕು` - ಗಳಗಳನೇ ಅತ್ತ ರಾಘಣ್ಣ!
ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಚಿತ್ರ ಲಕ್ಕಿಮ್ಯಾನ್ ನಿನ್ನೆ ರಿಲೀಸ್ ಆಗಿದೆ. ಬಿಡುಗಡೆಯಾದ ದಿನವೇ ಥಿಯೇಟರ್‌ನಲ್ಲಿ ಚಿತ್ರ ನೋಡಿದ ರಾಘವೇಂದ್ರ ರಾಜ್‌ಕುಮಾರ್, ಈ ಸಿನಿಮಾವನ್ನ ಅಪ್ಪಿಕೊಂಡು ನೋಡಿ ಎಂದು ಹೇಳಿದ್ದಾರೆ.
ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಚಿತ್ರ ಲಕ್ಕಿಮ್ಯಾನ್ ನಿನ್ನೆ ರಿಲೀಸ್ ಆಗಿದೆ. ಬಿಡುಗಡೆಯಾದ ದಿನವೇ ಥಿಯೇಟರ್‌ನಲ್ಲಿ ಚಿತ್ರ ನೋಡಿದ ರಾಘವೇಂದ್ರ ರಾಜ್‌ಕುಮಾರ್, ಈ ಸಿನಿಮಾವನ್ನ ಅಪ್ಪಿಕೊಂಡು ನೋಡಿ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಇಂದು ಶಕ್ತಿಧಾಮದ ಮಕ್ಕಳ ಕಣ್ಣಲ್ಲಿ ದೇವರ ಕಂಡೆ : ಅಪ್ಪು ಸ್ಮರಿಸಿದ ತಮಿಳು ನಟ ವಿಶಾಲ್
ಪುನೀತ್ ರಾಜ್‌ಕುಮಾರ್ ಚಿತ್ರಗಳನ್ನು ನೋಡಲು ಮೊದಲ ದಿನ ಅಪ್ಪು ಜೊತೆ ಥಿಯೇರ್‌ಗೆ ಬರ್ತಿದ್ದೆ. ಇದೀಗ ಈ ಚಿತ್ರವನ್ನು ಮೊದಲ ದಿನವೇ ನೋಡಿ ಕಣ್ತುಂಬಿಕೊಂಡಿದ್ದೇನೆ ಎಂದು ರಾಘವೇಂದ್ರ ರಾಜ್‌ಕುಮಾರ್ ಹೇಳಿದ್ದಾರೆ. ಸದಾ ತಮ್ಮನನ್ನು ನೆನೆದು ಕಣ್ಣಿರಿಡುವ ರಾಘಣ್ಣ ಈ ಬಾರಿಯೂ ಭಾವುಕರಾದರು.
ಅಲ್ಲದೇ, ಪುನೀತ್ ಕುಳಿತಿದ್ದ ಆ ಕುರ್ಚಿಯನ್ನು ನಮಗೆ ಕೊಡಿ ಎಂದು ಮನವಿ ಮಾಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅಗಲಿ 11 ತಿಂಗಳುಗಳೇ ಕಳೆದಿದೆ. ಆದರೆ ಅಪ್ಪು ಅಭಿಮಾನಿಗಳ ಮನದಲ್ಲಿ ಮಾತ್ರ ಅಜರಾಮಗಿದ್ದಾರೆ. ಕಾಕತಾಳೀಯ ಎಂಬಂತೆ ಕೊನೆಯ ಚಿತ್ರದಲ್ಲಿ ದೇವರಾಗಿ ಪುನೀತ್ ಅಭಿನಯಿಸಿದ್ದಾರೆ.
ಇದನ್ನೂ ಓದಿ : Kiccha Sudeep : ಬೆಂಗಳೂರು ನೆರೆ ಸಂತ್ರಸ್ತರಿಗೆ ಕಿಚ್ಚ ಸುದೀಪ್ ಸಹಾಯ ಹಸ್ತ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.