Gandhada Gudi : ಪುನೀತ್ ರಾಜ್‌ಕುಮಾರ್ ಅಭಿನಯದ ಗಂಧದ ಗುಡಿ, ಕರ್ನಾಟಕದ ವನ್ಯಜೀವಿಗಳ ಕುರಿತಾದ ಡಾಕ್ಯುಮೆಂಟ್-ಫೀಚರ್ ಇಂದು ಥಿಯೇಟರ್‌ಗಳನ್ನು ತಲುಪಿದೆ. ತಮ್ಮ ನೆಚ್ಚಿನ ಅಪ್ಪು ಅವರನ್ನು ಕೊನೆಯ ಬಾರಿಗೆ ತೆರೆ ಮೇಲೆ ನೋಡಲು ಅಭಿಮಾನಿಗಳು ಪುಳಕಿತರಾಗಿದ್ದಾರೆ. ಇದು ದಂತಕಥೆ ಡಾ ರಾಜ್‌ಕುಮಾರ್ ಅವರ 1973 ರ ಬ್ಲಾಕ್‌ಬಸ್ಟರ್‌ನ ಶೀರ್ಷಿಕೆಯಾಗಿದೆ. ನಾಳೆ ಅಪ್ಪು ಅವರ ಮೊದಲ ಪುಣ್ಯತಿಥಿ. ಇಂದು ಚಿತ್ರಮಂದಿರಗಳಲ್ಲಿ ಸುಮಾರು 250 ಸ್ಕ್ರೀನ್‌ಗಳಲ್ಲಿ ಗಂಧದ ಗುಡಿ ಬಿಡುಗಡೆಯಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಗಂಧದ ಗುಡಿ ಅಪ್ಪು ಕೊನೆಯ ಚಿತ್ರ ಅಲ್ಲ.. ಇದು ಆರಂಭ : ನಟ ಶಿವರಾಜ್‌ಕುಮಾರ್‌


ಅಪ್ಪು ಈ ಹೆಸರು ಕನ್ನಡಿಗರಿಗೆ ಅಚ್ಚುಮೆಚ್ಚು. ಮಕ್ಕಳಿಂದ ಮುದುಕರವರೆಗೆ ಎಲ್ಲರಿಗೂ ಪುನೀತ್‌ ಅಂದ್ರೆ ಇಷ್ಟ. ಆದರೆ ಒಂದು ವರ್ಷದ ಹಿಂದೆ ಈ ಯುವರತ್ನ ಎಲ್ಲರನ್ನೂ ಅಗಲಿದರು. ಆ ನೋವು ಇಂದಿಗೂ ಕಾಡುತ್ತಿದೆ. ಇದೀಗ ಪುನೀತ್ ಅವರ ಡ್ರೀಮ್‌ ಪ್ರಾಜೆಕ್ಟ್‌ ಗಂಧದ ಗುಡಿ ಡಾಕ್ಯುಮೆಂಟರಿ ಬಿಡುಗಡೆಯಾಗಿದೆ. ಇದು ಕರ್ನಾಟಕದ ಕಾಡಿನ ಪವಿತ್ರತೆ ಮತ್ತು ಸಂಪತ್ತನ್ನು ರಕ್ಷಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಿತ್ತಿದೆ.


ಕರ್ನಾಟಕದ ಯುವರತ್ನ ಪುನೀತ್ ರಾಜ್‌ ಕುಮಾರ್ ಅಭಿಮಾನಿಗಳು ಅಪ್ಪು ಹಬ್ಬವನ್ನು ಆಚರಿಸುತ್ತಿದ್ದಾರೆ. ತಮ್ಮ ನೆಚ್ಚಿನ ನಟನ ಕೊನೆಯ ಸಿನಿಮಾವನ್ನು ಕಂಡು ಭಾವುಕರಾಗುತ್ತಿದ್ದಾರೆ. ಇಂದು ಭಾರತ ಮಾತ್ರವಲ್ಲ ವಿದೇಶದ ಬೇರೆ ಬೇರೆ ಕಡೆಗಳಲ್ಲಿಯೂ ರಿಲೀಸ್ ಆಗಿದೆ ಈ ಸಿನಿಮಾ. ರಾಜ್ಯದ ಥಿಯೇಟರ್‌ಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಅಪ್ಪು ಅಭಿಮಾನಿಗಳ ಸಂಭ್ರಮಕ್ಕೆ ರಾಘಣ್ಣ ಸಾಥ್‌ ನೀಡಿದ್ದಾರೆ. ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಅಪ್ಪು ಅಭಿಮಾನಿಗಳ ಜೊತೆ ತಮಟೆ ಸದ್ದಿಗೆ ಹೆಜ್ಜೆ ಹಾಕಿದ್ದಾರೆ. 


ಇದನ್ನೂ ಓದಿ : Gandada Gudi : ನಿಮಿಷಾಂಭ ದೇಗುಲಕ್ಕೆ ಅಪ್ಪು ಪತ್ನಿ ಅಶ್ವಿನಿ ಭೇಟಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.