ನಂಬಿಕೆ ಸುಳ್ಳಾಗಿಸಿದ್ದಕ್ಕೆ ಧನ್ಯವಾದ...`ಹಾಸ್ಟೆಲ್ ಹುಡುಗರಿಗೆ` ರಾಜ್ ಬಿ ಶೆಟ್ಟಿ ಸಂದೇಶ..!
Raj B Shetty : ನಿರೀಕ್ಷೆಯಂತೆಯೇ ಮೊದಲ ದಿನ ಪ್ರೇಕ್ಷಕರ ಮನಗೆದ್ದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ‘ ಸಿನಿಮಾ ಸ್ಟಾರ್ ನಟರ ಸಿನಿಮಾಗಳ ಮಾದರಿಯಲ್ಲಿಯೇ ಉತ್ತಮ ಓಪನಿಂಗ್ ಪಡೆದುಕೊಂಡಿದ್ದು, ಇದೇ ಖುಷಿಯಲ್ಲಿ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ‘ಹಾಸ್ಟೆಲ್ ಹುಡುಗರು’ ತಂಡಕ್ಕೆ ಪ್ರೀತಿಯ ಪತ್ರವೊಂದನ್ನು ಬರೆದಿದ್ದಾರೆ.
Hostel Hudugaru Bekagiddare : ಹೊಸ ಪ್ರತಿಭೆಗಳು ಸೇರಿಕೊಂಡು ಮಾಡಿರುವ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ನಿನ್ನೆ (ಜುಲೈ 21) ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಿರೀಕ್ಷೆಯಂತೆಯೇ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ.
ಬಿಡುಗಡೆಗೂ ಮುನ್ನವೇ ದೊಡ್ಡ ಸಮಸ್ಯೆಯನ್ನು ಎದುರಿಸಿದ ಸಿನಿಮಾ ಇದೀಗ ತೆರೆ ಮೇಲೆ ಅಪ್ಪಳಿಸಿ ಎಲ್ಲರ ಮನಗೆದ್ದಿದೆ. ಇನ್ನು ಇದೇ ಸಂಭ್ರಮದಲ್ಲಿ ನಟ ಮತ್ತು ನಿರ್ದೇಶಕ ರಾಜ್ ಬಿ ಶೆಟ್ಟಿ ಅವರು ಪತ್ರವನ್ನು ಬರೆಯುವ ಮೂಲಕ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ-Krithi shetty : ಕೃತಿ ಅಂದದ ಮೈ ನೆನೆಸಿದ ಮಳೆರಾಯ ಬಲು ಅದೃಷ್ಟವಂತ..! ಫೋಟೋಸ್ ನೋಡಿ
ರಾಜ್ ಬಿ ಶೆಟ್ಟಿ ಬರೆದ ಪತ್ರದಲ್ಲಿ ಏನಿದೆ?
”ಪ್ರೀತಿಯ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ತಂಡಕ್ಕೆ, ಕನ್ನಡ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಕನ್ನಡ ಪ್ರೇಕ್ಷಕರ ಕೊರತೆಯಿದೆ ಎಂಬ ಹತಾಶೆಯನ್ನು ಸತ್ಯವೆಂದು ನಂಬಿ ಕುಳಿತಿದ್ದೆವು ನಾವು. ಮೊದಲ ಬಾರಿಗೆ ನಮ್ಮ ನಂಬಿಕೆ ಸುಳ್ಳಾಗಿದ್ದಕ್ಕೆ ಅಪಾರ ಸಂತೋಷವಿದೆ. ಅದನ್ನು ಕೆಡವಿದ ನಿಮ್ಮ ತಂಡಕ್ಕೆ ನಮ್ಮ ಪ್ರಣಾಮಗಳು. ಚಿತ್ರಮಂದಿರದಲ್ಲಿ ಪ್ರೇಕ್ಷಕರು ನುಗ್ಗಬೇಕಾದಲ್ಲಿ ನೂರಾರು ಕೋಟಿ ಬಜೆಟ್‌ನ ಅಗತ್ಯವಿದೆ, ಸ್ಟಾರ್ ನಟರ, ನಿರ್ದೇಶಕರ ಅನಿವಾರ್ಯತೆಯಿದೆ ಎಂಬೆಲ್ಲ ಸುಳ್ಳುಗಳನ್ನು ಸಮರ್ಥವಾಗಿ ನಿವಾಳಿಸಿ ಎಸೆದದ್ದಕ್ಕೆ ಧನ್ಯವಾದಗಳು” ಎಂದು ಬರೆದಿದ್ದಾರೆ.
ಮುಂದುವರೆದು, ”ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’, ಇದು ಹುಚ್ಚು ಮನಸ್ಸಿನ ಅಭಿವ್ಯಕ್ತಿ. ಹತ್ತಾರು ಹುಡುಗರು ಗಂಭೀರವಾಗಿ ಮಾಡಿದ ತಮಾಷೆಯ ಸಿನಿಮಾ. ಜೊತೆಗೆ ಈ ಸಿನೆಮಾ ಮುಂದೆ ಬರುವ ಇನ್ನಷ್ಟು ಹುಚ್ಚು ಹುಡುಗರಿಗೆ ಧೈರ್ಯ. ಇಂಥ ಸಿನಿಮಾಗಳು ಗೆದ್ದಾಗ ಮಾತ್ರ ಚಿತ್ರೋದ್ಯಮಕ್ಕೆ ನಿಜವಾದ ಲಾಭ. ಕನಸುಗಳಿಗೆ ಬಂಡವಾಳದ ಭಯವಿರಬಾರದು, ಕನಸುಗಳಿಗೆ ಸಿದ್ದ ಸೂತ್ರಗಳ ಹೊರೆಯಿರಬಾರದು, ಕನಸುಗಳಿಗೆ ವ್ಯಾಪಾರದ ಹಂಗಿರಬಾರದು.
ಇದನ್ನೂ ಓದಿ-Katerra : 'ಕಾಟೇರ' ಶೂಟಿಂಗ್ ವೇಳೆ ದರ್ಶನ್ ಕಾಲಿಗೆ ಪೆಟ್ಟು..ಏನಿದು ಘಟನೆ..?
ಕನಸುಗಳಿಗೆ ಪ್ರಾಮಾಣಿಕತೆ, ಹಸಿವು, ಧೈರ್ಯ, ಅಪಾರ ಹುಚ್ಚು, ಒಂದಷ್ಟು Practicality ಇಷ್ಟು ಜೊತೆಗಿದ್ದರೆ “ನೀವೂ” ಒಂದು ಸಿನಿಮಾ ಮಾಡಬಹುದು. ಇದನ್ನು ನಿರೂಪಿಸಿ ಗೆದ್ದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ತಂಡಕ್ಕೆ ಜಯವಾಗಲಿ” ಎಂದು ಅಕ್ಕರೆಯಿಂದ ರಾಜ್ ಬಿ ಶೆಟ್ಟಿ ಶುಭ ಹಾರೈಸಿದ್ದಾರೆ.
ಬಹುತೇಕ ಹೊಸಪ್ರತಿಭೆಗಳೇ ಸೇರಿ ಮಾಡಿದ ಈ ಸಿನಿಮಾ ಒಂದು ಹಾಸ್ಟೆಲ್ಲ್ಲಿ ಒಂದು ರಾತ್ರಿಯಲ್ಲಿ ನಡೆಯುವ ಘಟನೆಗಳನ್ನೇ ಆಧರಿಸಿದ ಹಾಸ್ಯಮಿಶ್ರಿತ ಥ್ರಿಲ್ಲರ್ ಸಿನಿಮಾ ಇದು. ಬರೀ ನಾಯಕ ನಾಯಕಿಯ ಪಾತ್ರಕ್ಕೆ ಜೋತು ಬೀಳದೇ, ಕತೆಯಲ್ಲಿನ ಘಟನಾವಳಿಗಷ್ಟೆ ಒತ್ತು ಕೊಟ್ಟು ವಿಭಿನ್ನವಾಗಿ ಸಿನಿಮಾ ಮಾಡಲಾಗಿದ್ದು, ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.