Katerra : 'ಕಾಟೇರ' ಶೂಟಿಂಗ್ ವೇಳೆ ದರ್ಶನ್ ಕಾಲಿಗೆ ಪೆಟ್ಟು..ಏನಿದು ಘಟನೆ..?

Darshan :  'ಕ್ರಾಂತಿ' ಬಳಿಕ ಚಾಲೆಂಜಿಂಗ್‌ ಸ್ಟಾರ್ ದರ್ಶನ್ 'ಕಾಟೇರ' ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಚಾಲೆಂಜಿಂಗ್‌ ಸ್ಟಾರ್ ಕಾಲಿಗೆ ಪೆಟ್ಟು ಬಿದ್ದಿದ್ದು, ದರ್ಶನ್ ಆಸ್ಪತ್ರೆಯಿಂದ ನಿರ್ಗಮಿಸುತ್ತಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.   

Written by - Savita M B | Last Updated : Jul 22, 2023, 11:01 AM IST
  • ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ 'ಕಾಟೇರ' ಕೂಡ ಒಂದು
  • ಈ ಸಿನಿಮಾದ ಶೂಟಿಂಗ್‌ ಮೈಸೂರಿನ ಸುತ್ತಮುತ್ತವೇ ನಡೆಯುತ್ತಿದೆ.
  • ತರುಣ್‌ ಸುದೀರ್‌ ಹಾಗೂ ದರ್ಶನ್‌ ಕಾಂಬಿನೇಷನ್‌ನಲ್ಲಿ ರೆಡಿಯಾಗುತ್ತಿರುವ ಸಿನಿಮಾ
Katerra : 'ಕಾಟೇರ' ಶೂಟಿಂಗ್ ವೇಳೆ ದರ್ಶನ್ ಕಾಲಿಗೆ ಪೆಟ್ಟು..ಏನಿದು ಘಟನೆ..?  title=

Katerra Shooting : ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ 'ಕಾಟೇರ' ಕೂಡ ಒಂದು. ಈ ಸಿನಿಮಾದ ಶೂಟಿಂಗ್‌ ಮೈಸೂರಿನ ಸುತ್ತಮುತ್ತವೇ ನಡೆಯುತ್ತಿದೆ. ತರುಣ್ ಸುಧೀರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹೆಚ್ಚಿಸಿದೆ. ಅದರಲ್ಲೂ ತರುಣ್‌ ಸುದೀರ್‌ ಹಾಗೂ ದರ್ಶನ್‌ ಕಾಂಬಿನೇಷನ್‌ನಲ್ಲಿ ರೆಡಿಯಾಗುತ್ತಿರುವ ಈ ಸಿನಿಮಾ ಇನ್ನು ಹೆಚ್ಚು ಕುತೂಹಲ ಮೂಡಿಸಿದೆ. 

ಇನ್ನು ಕಾಟೇರ 70ರ ದಶಕದ ವೇಳೆ ನಡೆದ ಕಥೆಗೆ ಕಾಲ್ಪನಿಕ ಟಚ್ ಕೊಡುವ ಸಿನಿಮಾ. ಚಿತ್ರದಲ್ಲಿ ಡಿಬಾಸ್‌ ರೆಟ್ರೋ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಕಾರಣಕ್ಕಾಗಿ ಸಿನಿಮಾದ ಮೇಲೆ ನಿರೀಕ್ಷೆಗಳು ಹೆಚ್ಚಾಗುತ್ತಿವೆ. 

ಇದನ್ನೂ ಓದಿ-Rashmika Mandanna : ಬಾತ್‌ರೂಮ್‌ ಒಳಗೆ ಫೋಟೋ ಶೂಮ್‌ ಮಾಡಿಸಿದ ರಶ್ಮಿಕಾ..! ನೋಡಿ

ಈ ನಡುವೆ ಶೂಟಿಂಗ್‌ ಸಮಯದಲ್ಲಿ ದರ್ಶನ್‌ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಹೊರಬುತ್ತಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ಕೆಲವು ಮೂಲಗಳ ಪ್ರಕಾರ 'ಕಾಟೇರ' ಸಿನಿಮಾ ಶೂಟಿಂಗ್‌ನಲ್ಲಿ ದರ್ಶನ್‌ ಕಾಲಿಗೆ ಪೆಟ್ಟಾಗಿದೆ, ಈ ಸಂಬಂಧ ದರ್ಶನ್ ಆಸ್ಪತ್ರೆ ಬಂದು ಚಿಕಿತ್ಸೆ ಪಡೆದು ಹೋಗಿದ್ದಾರೆ ಎನ್ನಲಾಗಿದೆ.

ಅಷ್ಟಕ್ಕೂ ದರ್ಶನ್‌ ಕಾಲಿಗೆ ಪೆಟ್ಟು ಬಿದ್ದಿದ್ದು ಹೇಗೆ? ನಡದ ಘಟನೆ ಏನು..? ಎನ್ನುವುದರ ಕುರಿತು ಯಾವದೇ ಮಾಹಿತಿ ಲಭ್ಯವಾಗಿಲ್ಲ. ಮೈಸೂರಿನಲ್ಲಿ ಶೂಟಿಂಗ್ ಮಾಡುವಾಗ ಪೆಟ್ಟಾಗಿದೆ ಅನ್ನೋ ಬಗ್ಗೆ ಮಾಹಿತಿ ಅಷ್ಟೇ ಸಿಕ್ಕಿದೆ. 

ಇದನ್ನೂ ಓದಿ-Krithi shetty : ಕೃತಿ ಅಂದದ ಮೈ ನೆನೆಸಿದ ಮಳೆರಾಯ ಬಲು ಅದೃಷ್ಟವಂತ..! ಫೋಟೋಸ್‌ ನೋಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News