ನವದೆಹಲಿ: ಅಶ್ಲೀಲ ಚಿತ್ರ ನಿರ್ಮಾಣ ಮತ್ತು ವಿತರಣೆ ಆರೋಪದಲ್ಲಿ ಜೈಲುಪಾಲಾಗಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಶಾಕಿಂಗ್ ಹೇಳಿಕೆ ನಿಡಿದ್ದಾರೆ. ಪತ್ನಿ ವಿರುದ್ಧವೇ ನೇರ ಆರೋಪ ಮಾಡಿರುವ ರಾಜ್ ಕುಂದ್ರಾ ಶಿಲ್ಪಾ ಶೆಟ್ಟಿಯಿಂದಲೇ ನನಗೆ ಕುಖ್ಯಾತಿ ಸಿಕ್ತು ಅಂತಾ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

2021ರ ಜುಲೈನಲ್ಲಿ ಜೈಲು ಸೇರಿ ಸದ್ಯಕ್ಕೆ ಜಾಮೀನಿನ ಮೇಲೆ ಹೊರಗಿರುವ ರಾಜ್​ ಕುಂದ್ರಾ ಈಗಲೂ ಮುಖ ಮುಚ್ಚಿಕೊಂಡು ತಿರುಗಾಡುತ್ತಿದ್ದಾರೆ. ಶಿಲ್ಪಾ ಶೆಟ್ಟಿ ಪತಿ ಅನ್ನೋ ಕಾರಣಕ್ಕೆ ರಾಜ್ ಕುಂದ್ರಾ ಹೆಚ್ಚು ಫೇಮಸ್​ ಆಗಿದ್ದಾರೆ ಅಂತಾ ಅವರನ್ನು ಇಂದಿಗೂ ಟ್ರೋಲ್​ ಮಾಡಲಾಗುತ್ತಿದೆ. ಆದರೆ ಇದೀಗ ಪತ್ನಿಯಿಂದಲೇ ನನಗೆ ಕುಖ್ಯಾತಿ ಸಿಕ್ಕಿದೆ ಅಂತಾ ಅವರು ನೇರ ಆರೋಪ ಮಾಡಿದ್ದಾರೆ.


ಇದನ್ನೂ ಓದಿ: 'ಪುನೀತ್ ಪರ್ವ'ಕ್ಕೆ ಯಾರೆಲ್ಲಾ ಸಾಕ್ಷಿಯಾಗಲಿದ್ದಾರೆ? ರಾಘಣ್ಣ ಹಂಚಿಕೊಂಡ್ರು ಕಂಪ್ಲೀಟ್‌ ಡಿಟೇಲ್ಸ್‌


ರಾಜ್ ಕುಂದ್ರಾ ಹೇಳಿದ್ದೇನು..?   


ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ ಎಂಬ ಹೇಳಿಕೆಗೆ ನಟ ಚೇತನ್‌ ಸ್ಪಷ್ಟನೆ


ಜೈಲಿನಿಂದ ಹೊರಬಂದ ಬಳಿಕ ರಾಜ್‍ ಕುಂದ್ರಾ ತಮ್ಮ ಕೆಲವು ಸೋಷಿಯಲ್ ಮೀಡಿಯಾ ಖಾತೆಗಳನ್ನು ಡಿಲೀಟ್ ಮಾಡಿದ್ದರು. ಕೆಲಕಾಲ ಮೌನರಾಗಿದ್ದ ಅವರು ಇದೀಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಪತಿ ರಾಜ್ ಕುಂದ್ರಾರ ಈ ಆರೋಪಕ್ಕೆ ನಟಿ ಶಿಲ್ಪಾ ಶೆಟ್ಟಿ ಏನು ಉತ್ತರ ನೀಡುತ್ತಾರೋ ಕಾದು ನೋಡಬೇಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ