Rajamouli Net Worth : ಎಸ್ ಎಸ್ ರಾಜಮೌಳಿ ಇಂದು ಯಶಸ್ಸಿಗೆ ಮತ್ತೊಂದು ಹೆಸರಾಗಿದ್ದಾರೆ. ಅಕ್ಟೋಬರ್ 10ಕ್ಕೆ 50ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಎಸ್.ಎಸ್.ರಾಜಮೌಳಿ ಇಂದು ಯಾವುದಾದರೂ ಚಿತ್ರ ಮುಟ್ಟಿದರೆ ಅದು ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆಯೋದು ಫಿಕ್ಸ್‌. ರಾಜಮೌಳಿ ತಮ್ಮ 23 ವರ್ಷಗಳ ವೃತ್ತಿಜೀವನದಲ್ಲಿ ಕೇವಲ 12 ಚಿತ್ರಗಳನ್ನು ಮಾಡಿದ್ದಾರೆ. ಆದರೆ ಅವೆಲ್ಲವೂ ಹಿಟ್ ಆಗಿವೆ. 


COMMERCIAL BREAK
SCROLL TO CONTINUE READING

'ಬಾಹುಬಲಿ', ಆರ್‌ಆರ್‌ಆರ್‌, 'ಮಗಧೀರ' ಚಿತ್ರಗಳನ್ನು ಮಾಡಿರುವ ಎಸ್‌ಎಸ್‌ ರಾಜಮೌಳಿ ಇಂದು ದೇಶದ ಅತ್ಯಂತ ದುಬಾರಿ ನಿರ್ದೇಶಕರಾಗಿದ್ದಾರೆ. ಇಂದು ಅವರು ಕೋಟ್ಯಂತರ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ. 


ಇದನ್ನೂ ಓದಿ: ನಿರ್ಮಾಪಕರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ರಾಧಿಕಾ ಕುಮಾರಸ್ವಾಮಿ ಸಹೋದರ 


ಎಸ್ ಎಸ್ ರಾಜಮೌಳಿ ಅವರು ತಮ್ಮ ಸಿನಿಮಾದಲ್ಲಿ ಯಾವ ನಟನಿಗೆ ಅವಕಾಶ ಕೊಟ್ಟರೂ ಸ್ಟಾರ್ ಆಗುವುದು ಗ್ಯಾರೆಂಟಿ. SS ರಾಜಮೌಳಿ ಅವರು 10 ಅಕ್ಟೋಬರ್ 1973 ರಂದು ಕರ್ನಾಟಕದ ಮೈಸೂರು ಜಿಲ್ಲೆಯ ತೆಲುಗು ಕುಟುಂಬದಲ್ಲಿ ಜನಿಸಿದರು. ಅವರ ತಂದೆ ವಿ.ವಿಜೇಂದ್ರ ಪ್ರಸಾದ್ ಅವರು ಪ್ರಸಿದ್ಧ ಚಿತ್ರಕಥೆಗಾರರಾಗಿದ್ದಾರೆ. ಎಸ್ ಎಸ್ ರಾಜಮೌಳಿ ಅವರ ಪೂರ್ಣ ಹೆಸರು ಕೊಡೂರಿ ಶ್ರೀಶೆಲ ಶ್ರೀ ರಾಜಮೌಳಿ.  


ವರದಿಗಳ ಪ್ರಕಾರ, 2023 ರಲ್ಲಿ ಎಸ್‌ಎಸ್ ರಾಜಮೌಳಿ ಅವರ ನಿವ್ವಳ ಮೌಲ್ಯವು 1000 ಕೋಟಿ ರೂ. ಅಂದರೆ ಸುಮಾರು 10 ಬಿಲಿಯನ್ ರೂ. ಆಗಿದೆ. ಅವರು ಒಂದು ಚಿತ್ರಕ್ಕೆ 100-200 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. 


ಇದನ್ನೂ ಓದಿ: ಶಾರುಖ್ ಖಾನ್ ಗೆ ಬಂತು ಕೊಲೆ ಬೆದರಿಕೆ, ತಕ್ಷಣ ಅಲರ್ಟ್‌ ಆದ ಮಹಾರಾಷ್ಟ್ರ ಸರ್ಕಾರ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.