ಶಾರುಖ್ ಖಾನ್ ಗೆ ಬಂತು ಕೊಲೆ ಬೆದರಿಕೆ, ತಕ್ಷಣ ಅಲರ್ಟ್‌ ಆದ ಮಹಾರಾಷ್ಟ್ರ ಸರ್ಕಾರ!

Shah Rukh Khan : ವರದಿಗಳ ಪ್ರಕಾರ, ಶಾರುಖ್ ಖಾನ್ ಅವರಿಗೆ ಕೊಲೆ ಬೆದರಿಕೆಗಳು ಬಂದಿವೆ. ಈ ಕುರಿತು ಲಿಖಿತ ದೂರನ್ನು ನೀಡಲಾಗಿದ್ದು, ಅದರಲ್ಲಿ ತನಗೆ ಕೊಲೆ ಬೆದರಿಕೆ ಹಾಕಲಾಗುತ್ತಿದೆ ಎಂದು ಹೇಳಲಾಗಿದೆ.   

Written by - Chetana Devarmani | Last Updated : Oct 9, 2023, 01:10 PM IST
  • ಶಾರುಖ್ ಖಾನ್ ಅವರಿಗೆ ಕೊಲೆ ಬೆದರಿಕೆ
  • ಲಿಖಿತ ದೂರು ದಾಖಲಿಸಿದ ಕಿಂಗ್‌ ಖಾನ್‌
  • ಮಹಾರಾಷ್ಟ್ರ ಸರ್ಕಾರದಿಂದ Y+ ಭದ್ರತೆ
ಶಾರುಖ್ ಖಾನ್ ಗೆ ಬಂತು ಕೊಲೆ ಬೆದರಿಕೆ, ತಕ್ಷಣ ಅಲರ್ಟ್‌ ಆದ ಮಹಾರಾಷ್ಟ್ರ ಸರ್ಕಾರ!  title=

Shah Rukh Khan Y+ Security: ಪಠಾಣ್ ಮತ್ತು ಜವಾನ್ ಚಿತ್ರಗಳ ಅದ್ಭುತ ಯಶಸ್ಸಿನ ನಂತರ, ಶಾರುಖ್ ಖಾನ್ ನಿರಂತರವಾಗಿ ಸುದ್ದಿಯಲ್ಲಿದ್ದಾರೆ. ಈ ಎರಡೂ ಚಿತ್ರಗಳು ಬಹಳ ದಿನಗಳಿಂದ ಸೋತಿದ್ದ ಗಲ್ಲಾಪೆಟ್ಟಿಗೆಗೆ ಜೀವರಕ್ಷಕವಾಗಿ ಬಂದವು. ಇತ್ತೀಚೆಗಷ್ಟೇ ಬಿಡುಗಡೆಯಾದ ಶಾರುಖ್ ಖಾನ್ ಅವರ ಚಿತ್ರ ಜವಾನ್ ಬಗ್ಗೆ ಮಾತನಾಡುವುದಾದರೆ, ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 700 ಕೋಟಿಗೂ ಹೆಚ್ಚು ಗಳಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ. ಆದರೆ, ಇದೆಲ್ಲದರ ನಡುವೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ವರದಿಗಳ ಪ್ರಕಾರ, ಈ ಚಿತ್ರಗಳ ಯಶಸ್ಸಿನ ನಂತರ ಶಾರುಖ್ ಖಾನ್ ಅವರಿಗೆ ಕೊಲೆ ಬೆದರಿಕೆಗಳು ಬಂದಿವೆ ಅಂತೆ.

ಇದನ್ನೂ ಓದಿ : ಸೌತ್‌ ಸಿನಿರಂಗದಲ್ಲಿ ಅತಿ ಹೆಚ್ಚು ವಿದ್ಯಾಭ್ಯಾಸ ಮಾಡಿರುವ ನಟಿ ಯಾರು..! ರಶ್ಮಿಕಾ.. ನಯನತಾರ.. ಸಾಯಿ ಪಲ್ಲವಿ..? 

ಈ ಕುರಿತು ನಟ ಶಾರುಖ್‌ ಖಾನ್‌ ಲಿಖಿತ ದೂರನ್ನು ನೀಡಿದ್ದಾರೆ ಎಂದು ಹೇಳಲಾಗಿದೆ. ಅದರಲ್ಲಿ ತನಗೆ ಕೊಲೆ ಬೆದರಿಕೆ ಹಾಕಲಾಗುತ್ತಿದೆ ಎಂದು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಇದರ ನಂತರ, ಮಹಾರಾಷ್ಟ್ರ ಸರ್ಕಾರವು ತಕ್ಷಣವೇ ಅಲರ್ಟ್ ಆಗಿದ್ದು, ಶಾರುಖ್ ಖಾನ್‌ಗೆ Y+ ಭದ್ರತೆಯನ್ನು ನೀಡಲು ನಿರ್ಧರಿಸಿದೆ ಎನ್ನಲಾಗಿದೆ. 

ಶಾರುಖ್ ಭದ್ರತೆಯನ್ನು ಹೆಚ್ಚಿಸುವಂತೆ ರಾಜ್ಯ ಸರ್ಕಾರ ಐಜಿ ಶ್ರೇಣಿಯ ಅಧಿಕಾರಿಗೆ ಸೂಚಿಸಿದೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ, ಕಿಂಗ್ ಖಾನ್‌ಗೆ ನೀಡಲಾದ Y+ ವರ್ಗದ ಭದ್ರತೆಯ ಅಡಿಯಲ್ಲಿ, 5 ಶಸ್ತ್ರಸಜ್ಜಿತ ಸೈನಿಕರನ್ನು ಎಲ್ಲಾ ಸಮಯದಲ್ಲೂ ಅವರ ಮನೆಯ ಮುಂದೆ ನಿಯೋಜಿಸಲಾಗುವುದು. ಅದೇ ಸಮಯದಲ್ಲಿ, ಆರು ಶಸ್ತ್ರಸಜ್ಜಿತ ಕಮಾಂಡೋಗಳು ಶಾರುಖ್ ಅವರೊಂದಿಗೆ ವೈಯಕ್ತಿಕ ಕವರ್ ಆಗಿ ಯಾವಾಗಲೂ ಇರುತ್ತಾರೆ. Y+ ವರ್ಗದ ಭದ್ರತೆಯ ಸಂಪೂರ್ಣ ವೆಚ್ಚವನ್ನು ಕಿಂಗ್ ಖಾನ್ ಅವರೇ ಭರಿಸಲಿದ್ದಾರೆ. ಶಾರುಖ್ ಖಾನ್ ಮಾತ್ರವಲ್ಲದೆ ಬಾಲಿವುಡ್‌ ನಟ ಸಲ್ಮಾನ್ ಖಾನ್‌ಗೆ ಸಹ Y+ ವರ್ಗದ ಭದ್ರತೆ ಸಿಕ್ಕಿದೆ.  

ಇದನ್ನೂ ಓದಿ : ನಯನತಾರಾ ಮನೆಯಲ್ಲಿದೆ ಕೋಟಿಗಟ್ಟಲೆ ಬೆಲೆ ಬಾಳುವ ನಾಯಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News