Rajanikanth ʻThalaivar 171ʼ Poster: ಕಾಲಿವುಡ್‌ ಸೂಪರ್‌ ಸ್ಟಾರ್‌ ರಜನಿಕಾಂತ್ ಹಾಗೂ ಡೈರೆಕ್ಟರ್‌ ಕನಕರಾಜ್ ಅಪ್‌ಡೇಟ್ ಕಾಂಬಿನೇಷನ್‌ನಲ್ಲಿ ಮೂಡಿಬರಲಿರುವ 'ತಲೈವರ್ 171' ಪೋಸ್ಟರ್‌ ರಿವೀಲ್‌ ಆಗಿದೆ. ನಿರ್ದೇಶಕ ಲೋಕೇಶ್‌ ಕನಕರಾಜ್‌ ಈ ಚಿತ್ರದ ಹೊಸ ಪೋಸ್ಟರ್‌ ಶೇರ್‌ ಮಾಡುವುದರ ಜೊತೆಗೆ ಈ ಸಿನಿಮಾದ ಟೀಸರ್‌ ರಿಲೀಸ್‌ ಡೇಟ್‌ ಕೂಡ ಅಧೀಕೃತವಾಗಿ ಘೋಷಣೆ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಲೋಕೇಶ್‌ ಕನಕರಾಜ್‌ ಇಂದು ಮಾರ್ಚ್‌ 28 ಗುರುವಾರದಂದು ಸೋಶಿಯಲ್‌ ಮಿಡಿಯಾದಲ್ಲಿ 'ತಲೈವರ್ 171' ಚಿತ್ರದ ಹೊಸ ಪೋಸ್ಟರ್ ಅನ್ನು ಹಂಚಿಕೊಳ್ಳುವುದರ ಜೊತೆಗೆ ಈ ಸಿನಿಮಾದ ಟೈಟಲ್‌ ಟೀಸರ್‌ ಏಪ್ರಿಲ್ 22, 2024 ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ನಟ ರಜಿನಿಕಾಂತ್‌ ಒರಟಾಗಿ ರಗಡ್‌ ಅವತಾರದಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಕೈಗೆ ಚಿನ್ನದ ಕೈಗಡಿಯಾರ ಬೇಡಿ ತರಹ ಹಾಕಿಕೊಂಡಿದ್ದರು.


Samantha Ruth Prabhu: 'ಲೈಂಗಿಕತೆಯ ವಿಚಾರದಲ್ಲಿ ನಾನು ಯಾವಾಗಲೂ...', ಬೆಚ್ಚಿಬೀಳಿಸುವ ಹೇಳಿಕೆ ನೀಡಿದ ಸಮಂತಾ!


ಸಂದರ್ಶನವೊಂದರಲ್ಲಿ ಮಾತನಾಡಿದ ಲೋಕೇಶ್‌ ಕನಕರಾಜ್‌ ಸದ್ಯಕ್ಕೆ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ ಎಂದು ಹೇಳಿದ್ದಾರೆ. ಈ ನಿರ್ದೇಶಕ "ಜೂನ್‌ನಲ್ಲಿ ಸಿನಿಮಾ ತೆರೆಗೆ ಬರಲಿದೆ. ಇಡೀ ಪ್ರಕ್ರಿಯೆಯು ಸುಮಾರು ಒಂದರಿಂದ ಒಂದೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತದೆ. 'ತಲೈವರ್ 171' ಮುಗಿದ ಒಂದು ತಿಂಗಳ ನಂತರ ನಾವು ಕಾರ್ತಿ ಅವರೊಂದಿಗೆ 'ಕೈತಿ 2' ಪ್ರಾರಂಭಿಸುತ್ತೇವೆ. ಆದ್ದರಿಂದ, ಕೆಲಸ ನಡೆಯುತ್ತಿದೆ." ಎಂದಿದ್ದಾರೆ.


ಸದ್ಯಕ್ಕೆ ಈ ಚಿತ್ರದಕ್ಕೆ 'ತಲೈವರ್ 171' ಎಂದು ಹೆಸರಿಡಲಾಗಿದ್ದು, ಈ ಸಿನಿಮಾವನ್ನು ಸನ್ ಪಿಕ್ಚರ್ಸ್‌ನಿಂದ  ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಸೆಪ್ಟಂಬರ್‌ 2023 ರಿಂದ ಶೂಟಿಂಗ್‌ ಪ್ರಾರಂಭಿಸಲಾಗಿತ್ತು. ಈ ಚಿತ್ರದಲ್ಲಿ ನಟ ಶಿವಕಾರ್ತಿಕೇಯನ್ ಕೂಡ ಬಣ್ಣ  ಹಚ್ಚಲಿದ್ದಾರೆ ಎನ್ನಲಾಗಿದ್ದು, ಆದರೆ ಅಧಿಕೃತವಾಗಿ ಯಾವ ಮಾಹಿತಿಯೂನ ಹೊರ ಬಂದಿಲ್ಲ. ಈ ಸಿನಿಮಾದ ಸಾಹಸ ದೃಶ್ಯಗಳಿಗೆ ಸ್ಟಂಟ್‌ ಡೈರೆಕ್ಟರ್‌ ಅನ್ಬರಿವ್ ನಿರ್ದೇಶನ ಮಾಡಲಿದ್ದು, ಹಾಗೆ ಈ ಚಿತ್ರದ ಹಾಡುಗಳನ್ನು ಮ್ಯೂಸಿಕ್‌ ಡೈರೆಕ್ಟರ್‌ ಅನಿರುದ್ಧ್ ರವಿಚಂದರ್ ಸಂಗೀತ ನೀಡಲಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ