Samantha Ruth Prabhu: 'ಲೈಂಗಿಕತೆಯ ವಿಚಾರದಲ್ಲಿ ನಾನು ಯಾವಾಗಲೂ...', ಬೆಚ್ಚಿಬೀಳಿಸುವ ಹೇಳಿಕೆ ನೀಡಿದ ಸಮಂತಾ!

Samantha Ruth Prabhu On Sexuality: ಇತ್ತೀಚೆಗಷ್ಟೇ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಸಮಂತಾ ಬೆಚ್ಚಿಬೀಳಿಸುವ ಹೇಳಿಕೆಯೊಂದನ್ನು ನೀಡಿದ್ದಾರೆ. ಅಷ್ಟೇ ಅಲ್ಲ ಐಟಮ್ ' ಊ ಅಂಟಾವಾ' ಕುರಿತು ಕೂಡ ಹೇಳಿಕೆಯನ್ನು ನೀಡಿದ್ದಾಳೆ.  (Entertaiment News In Kannada)  

Written by - Nitin Tabib | Last Updated : Mar 28, 2024, 07:50 PM IST
  • ಈ ಸಮ್ಮೇಳನದಲ್ಲಿ ನಟಿ ಸಮಂತಾ ರುತ್ ಪ್ರಭು ಅವರಿಗೆ ‘ಪುಷ್ಪಾ’ ಚಿತ್ರದಲ್ಲಿ ನಿಮ್ಮ ಮೇಲೆ ಚಿತ್ರೀಕರಿಸಲಾದ
  • ‘ಊ ಅಂಟಾವಾ’ ಬ್ಲಾಕ್‌ಬಸ್ಟರ್ ಹಾಡನ್ನು ನೀವು ಆಯ್ಕೆ ಮಾಡಲು ಕಾರಣವೇನೆ ಎಂದು ಪ್ರಶ್ನಿಸಲಾಗಿದೆ,
  • ಇದಕ್ಕೆ ಉತ್ತರಿಸಿದ ಸಮಂತಾ, ಇದು ತನಗೆ ದೊಡ್ಡ ಸವಾಲಾಗಿತ್ತು ಎಂದು ಹೇಳಿದ್ದಾರೆ.
  • ಏಕೆಂದರೆ ತಾನು ಯಾವಾಗಲೂ ತನ್ನ ಲೈಂಗಿಕತೆಯ ಬಗ್ಗೆ ಅಹಿತಕರವಾಗಿರುತ್ತಿದ್ದೆ (Samantha Ruth Prabhu On Sexuality) ಎಂದು ಹೇಳಿದ್ದಾರೆ.
Samantha Ruth Prabhu: 'ಲೈಂಗಿಕತೆಯ ವಿಚಾರದಲ್ಲಿ ನಾನು ಯಾವಾಗಲೂ...', ಬೆಚ್ಚಿಬೀಳಿಸುವ ಹೇಳಿಕೆ ನೀಡಿದ ಸಮಂತಾ! title=

Samantha On Sexuality: ದಕ್ಷಿಣ ಚಿತ್ರರಂಗದ ಪ್ರಮುಖ ನಟಿಮಣಿಯರಲ್ಲಿ ಸಮಂತಾ ರುತ್ ಪ್ರಭು (Samantha Ruth Prabhu) ಕೂಡ ಒಬ್ಬಳು. ಗತಿಸಿದ ಕೆಲ ಸಮಯ ಸಮಂತಾ ಪಾಲಿಗೆ ಸಾಕಷ್ಟು ಕಷ್ಟಕರವಾಗಿತ್ತು. ಸಮಂತಾ  ಆಟೋಇಮ್ಯೂನ್ ಮಯೋಸಿಟಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು. ಈಗ ಈ ಕಾಯಿಲೆಯಿಂದ ಚೇತರಿಸಿಕೊಂಡ ಬಳಿಕ, ಸಮಂತಾ ಮತ್ತೆ ವರ್ಕ್ ಮೋಡ್ ಗೆ ಮರಳಿದ್ದಾರೆ. ಇದಾದ ಬಳಿಕ ಸಮಂತಾ ಮಾಧ್ಯಮ್ ಸಂವಾದ (Media Conclave) ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಇಂಡಿಯಾ ಟುಡೇ ಮೀಡಿಯಾ ಕಾಂಕ್ಲೆವ್ ನಲ್ಲಿ ಸಮಂತಾ ರುತ್ ಪ್ರಭು ತಮ್ಮ ಅನಾರೋಗ್ಯದ (Samantha Ruth Prabhu On Her Health) ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ ತಮ್ಮ ಲೈಂಗಿಕತೆಯ ಬಗ್ಗೆ ತುಂಬಾ ಆಘಾತಕಾರಿ ಹೇಳಿಕೆಯೊಂದನ್ನು ನೀಡಿದ್ದು, ಈ ಹೇಳಿಕೆ ಹೆಡ್ಲೈನ್ ಗಳನ್ನು ಸೃಷ್ಟಿಸುತ್ತಿದೆ. 

ಈ ಸಮ್ಮೇಳನದಲ್ಲಿ ನಟಿ ಸಮಂತಾ ರುತ್ ಪ್ರಭು ಅವರಿಗೆ ‘ಪುಷ್ಪಾ’ ಚಿತ್ರದಲ್ಲಿ ನಿಮ್ಮ ಮೇಲೆ ಚಿತ್ರೀಕರಿಸಲಾದ ‘ಊ ಅಂಟಾವಾ’ ಬ್ಲಾಕ್‌ಬಸ್ಟರ್ ಹಾಡನ್ನು ನೀವು ಆಯ್ಕೆ ಮಾಡಲು ಕಾರಣವೇನೆ ಎಂದು ಪ್ರಶ್ನಿಸಲಾಗಿದೆ, ಇದಕ್ಕೆ ಉತ್ತರಿಸಿದ ಸಮಂತಾ, ಇದು ತನಗೆ ದೊಡ್ಡ ಸವಾಲಾಗಿತ್ತು ಎಂದು ಹೇಳಿದ್ದಾರೆ. ಏಕೆಂದರೆ ತಾನು ಯಾವಾಗಲೂ ತನ್ನ ಲೈಂಗಿಕತೆಯ ಬಗ್ಗೆ ಅಹಿತಕರವಾಗಿರುತ್ತಿದ್ದೆ (Samantha Ruth Prabhu On Sexuality) ಎಂದು ಹೇಳಿದ್ದಾರೆ. ಎಂಟರ್‌ಟೈನ್‌ಮೆಂಟ್ ನ್ಯೂಸ್ ವರ್ಲ್ಡ್‌ನಲ್ಲಿ ವೈರಲ್ ಆಗಿರುವ ಈ ವೀಡಿಯೊದಲ್ಲಿ ನಟಿ, 'ನಾನು ಯಾವಾಗಲೂ ಸಾಕಷ್ಟು ಒಳ್ಳೆಯವಳಲ್ಲ ಎಂದು ಭಾವಿಸುವ ಸ್ಥಳದಿಂದ ಬರುತ್ತೇನೆ. ನಾನು ನನ್ನನ್ನು ಒಳ್ಳೆಯವಳು ಎಂದು ಪರಿಗಣಿಸಲಿಲ್ಲ. ನಾನು ಇತರ ಹುಡುಗಿಯರಂತೆ ಕಾಣುವುದಿಲ್ಲ. ಹೀಗಾಗಿ ಅದು ನನ್ನ ಪಾಲಿಗೆ  ದೊಡ್ಡ ಸವಾಲಾಗಿತ್ತು (samantha feels discomfort looking sexy on screen). ನಿಜ ಹೇಳಬೇಕೆಂದರೆ, ಊ ಅಂಟಾವಾ ಚಿತ್ರದ ಮೊದಲ ಶಾಟ್ ಸಮಯದಲ್ಲಿ, ನಾನು ಆಂತರಿಕವಾಗಿ ಭಯದಿಂದ ನಡುಗುತ್ತಿದ್ದೆ. ಏಕೆಂದರೆ ಮಾದಕವಾಗಿ ಕಾಣುವುದು ನನ್ನ ವಿಷಯವಲ್ಲ. ಆದರೆ ಇದಾದ ನಂತರ ನಾನು ನಟಿಯಾಗಿ ಹಾಗೂ ವ್ಯಕ್ತಿಯಾಗಿಯೂ ಬೆಳೆದೆ. ನಾನು ಯಾವಾಗಲೂ ಕಷ್ಟಕರ ಸಂದರ್ಭಗಳಲ್ಲಿ ನನ್ನನ್ನು ಇರಿಸಿಕೊಳ್ಳಲು ಪ್ರಯತ್ನಿಸಿದೆ" ಎಂದಿದ್ದಾರೆ.

ಇನ್ನು ಮುಂದೆ ಅಂತಹ ಸವಾಲು ಮತ್ತೊಮ್ಮೆ ಸ್ವೀಕರಿಸುತ್ತೀರಾ?
ಈ ಸಂದರ್ಭದಲ್ಲಿ ಸಮಂತಾಗೆ ನೀವು ಮತ್ತೊಮ್ಮೆ ಅಂತಹ ಸವಾಲನ್ನು ಸ್ವೀಕರಿಸುತ್ತೀರಾ ಎಂದು ಪ್ರಶ್ನಿಸಲಾಗುತ್ತದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ, ಈಗ ನನಗೆ ಅದರಲ್ಲಿ ಯಾವುದೇ ಸವಾಲು ಕಾಣಿಸುತ್ತಿಲ್ಲ ಎಂದು ಹೇಳುತ್ತಾರೆ. ಅಲ್ಲು ಅರ್ಜುನ್ ಅಭಿನಯದ 'ಪುಷ್ಪಾ' ಚಿತ್ರದಲ್ಲಿ ನಟಿಯ ಬ್ಲಾಕ್ಬಸ್ಟರ್ ಹಾಡು 'ಊ ಅಂಟಾವಾ' ಸಾಕಷ್ಟು ಬಜ್ ಅನ್ನು ಸೃಷ್ಟಿಸಿರುವುದು ನಮ್ಮೆಲ್ಲರಿಗೂ ತಿಳಿದೇ ಇದೆ. ಸಮಂತಾ ರುತ್ ಪ್ರಭು ಇತ್ತೀಚಿನ ದಿನಗಳಲ್ಲಿ ಹಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರು ಶೀಘ್ರದಲ್ಲೇ ನಟ ವರುಣ್ ಧವನ್ ಅವರ ಮುಂದಿನ ವೆಬ್ ಸರಣಿ ಸಿಟಾಡೆಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಇದರ ಹೊರತಾಗಿ ನಟಿ ಕೈಯಲ್ಲಿ ಒಂದು ಹಾಲಿವುಡ್ ಪ್ರಾಜೆಕ್ಟ್ ಕೂಡ ಇದೆ. 

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News