Rajasekhar Jeevitha on Chiranjeevi : ಮೆಗಾಸ್ಟಾರ್ ಚಿರಂಜೀವಿ ಅವರ ಬ್ಲಡ್ ಬ್ಯಾಂಕ್ ವಿರುದ್ಧ ಆಧಾರರಹಿತ ಆರೋಪ ಮಾಡಿದ್ದಕ್ಕಾಗಿ ನಟ ರಾಜಶೇಖರ್ ಮತ್ತು ಅವರ ಪತ್ನಿ ಜೀವಿತಾ ಅವರಿಗೆ ಹೈದರಾಬಾದ್‌ನ ನಾಂಪಲ್ಲಿ ನ್ಯಾಯಾಲಯ ಜೂನ್ 19 ರಂದು  ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. 


COMMERCIAL BREAK
SCROLL TO CONTINUE READING

ಹೌದು... ತೆಲುಗು ಚಿತ್ರರಂಗದಲ್ಲಿ ನಟ ರಾಜಶೇಖರ್-ಜೀವಿತಾ ಮತ್ತು ಚಿರಂಜೀವಿ ನಡುವಿನ ಪೈಪೋಟಿ ಗುಟ್ಟಾಗಿ ಉಳಿದಿಲ್ಲ. 2020 ರಲ್ಲಿ ಚಲನಚಿತ್ರ ಕಲಾವಿದರ ಸಂಘದ (MAA) ಈವೆಂಟ್‌ನಲ್ಲಿ ಶುರುವಾದ ಜಗಳ ಇದೀಗ ಉಲ್ಬಣಗೊಂಡಿದೆ. 2011 ರಲ್ಲಿ, ಚಿರಂಜೀವಿಯೊಂದಿಗೆ ಜಗಳವಾಡಿದ ದಂಪತಿಗಳು, ಚಿರಂಜೀವಿ ಅವರ ಚಾರಿಟಬಲ್ ಟ್ರಸ್ಟ್ ಲಾಭಕ್ಕಾಗಿ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದ್ದರು.


ಇದನ್ನೂ ಓದಿ : Pooja Hegde: ನಟಿ ಪೂಜಾ ಹೆಗ್ಡೆ ಆತ್ಮಹತ್ಯೆಗೆ ಯತ್ನ.!? ಆತಂಕದಲ್ಲಿ ಫ್ಯಾನ್ಸ್‌


ಚಿರಂಜೀವಿ ನಡೆಸುತ್ತಿರುವ ಟ್ರಸ್ಟ್‌ನಲ್ಲಿ ಹಲವಾರು ಹಣಕಾಸಿನ ಅಕ್ರಮಗಳು ನಡೆದಿವೆ ಎಂದು ಸಂದರ್ಶನವೊಂದರಲ್ಲಿ ರಾಜಶೇಖರ್‌ ದಂಪತಿ ದೂರಿದ್ದರು. ಅಲ್ಲದೆ ಒಂದು ಯೂನಿಟ್ ರಕ್ತವನ್ನು 850 ರೂ.ಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದರ ಬೆನ್ನಲ್ಲೇ ಚಿರಂಜೀವಿ ಅವರ ಸೋದರ ಮಾವ ಹಾಗೂ ಜನಪ್ರಿಯ ನಿರ್ಮಾಪಕ ಅಲ್ಲು ಅರವಿಂದ್ ಇಬ್ಬರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.


ಚಿರಂಜೀವಿ ಅವರ ಚಾರಿಟಬಲ್ ಟ್ರಸ್ಟ್ ವಿರುದ್ಧ ರಾಜಶೇಖರ್-ಜೀವಿತಾ ಮತ್ತು ಅವರ ಅನುಯಾಯಿ ಹರಿಕೃಷ್ಣ ಗೌಡ್ ಮಾಡಿರುವ ಆರೋಪಗಳು "ರಾಜಕೀಯ ಪ್ರೇರಿತ" ಎಂದು ಅರವಿಂದ್ ಹೇಳಿದ್ದಾರೆ. ಮಂಗಳವಾರ, ಜುಲೈ 18 ರಂದು ನಾಂಪಲ್ಲಿ ಮುಖ್ಯ ಮ್ಯಾಜಿಸ್ಟ್ರೇಟ್ ಅವರು ಜೀವಿತಾ ಮತ್ತು ರಾಜಶೇಖರ್ ಅವರಿಗೆ ಮಾನಹಾನಿಕರ ಹೇಳಿಕೆಗಳಿಗಾಗಿ ಒಂದು ವರ್ಷ ಜೈಲು ಶಿಕ್ಷೆ ಮತ್ತು 5 ಲಕ್ಷ ರೂಪಾಯಿ ದಂಡ ವಿಧಿಸಿದರು. ದಂಪತಿಗಳು ಜಾಮೀನು ಪಡೆದಿದ್ದು, ಶಿಕ್ಷೆಯ ವಿರುದ್ಧ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.