Pooja Hegde: ನಟಿ ಪೂಜಾ ಹೆಗ್ಡೆ ಆತ್ಮಹತ್ಯೆಗೆ ಯತ್ನ.!? ಆತಂಕದಲ್ಲಿ ಫ್ಯಾನ್ಸ್‌

Pooja Hegde Suicide News: ಸ್ಟಾರ್‌ ನಟಿ ಪೂಜಾ ಹೆಗ್ಡೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ಕೇಳಿ ಪೂಜಾ ಹೆಗ್ಡೆ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ.   

Written by - Chetana Devarmani | Last Updated : Jul 19, 2023, 03:48 PM IST
  • ಸ್ಟಾರ್‌ ನಟಿ ಪೂಜಾ ಹೆಗ್ಡೆ ಆತ್ಮಹತ್ಯೆಗೆ ಯತ್ನ!?
  • ಪೂಜಾ ಹೆಗ್ಡೆ ಅಭಿಮಾನಿಗಳಲ್ಲಿ ಆತಂಕ!
  • ಖಿನ್ನತೆಯಿಂದ ಆತ್ಮಹತ್ಯೆಗೆ ಯತ್ನ?
Pooja Hegde: ನಟಿ ಪೂಜಾ ಹೆಗ್ಡೆ ಆತ್ಮಹತ್ಯೆಗೆ ಯತ್ನ.!? ಆತಂಕದಲ್ಲಿ ಫ್ಯಾನ್ಸ್‌ title=
Pooja Hegde

Pooja Hegde Tried To Commit Suicide : ಇತ್ತೀಚೆಗೆ ನಟಿ ಪೂಜಾ ಹೆಗ್ಡೆ ಖಿನ್ನತೆಯಿಂದ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇತ್ತೀಚೆಗಿನ ದಿನಗಳಲ್ಲಿ ಪೂಜಾ ಹೆಗ್ಡೆ ನಟಿಸಿದ ಸಿನಿಮಾಗಳೆಲ್ಲವೂ ಫ್ಲಾಪ್‌ ಆಗುತ್ತಿವೆ. ಇದರಿಂದಾಗಿ ಆಕೆ ತೀವ್ರ ಖಿನ್ನತೆಗೆ ಒಳಗಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮಹೇಶ್ ಬಾಬು ಅಭಿನಯದ ಗುಂಟೂರು ಖಾರಂ ಚಿತ್ರದಿಂದ ಹೊರಬಂದ ಬಳಿಕ ನಟಿ ಪೂಜಾ ಹೆಗ್ಡೆ ಕುಗ್ಗಿ ಹೋಗಿದ್ದಾರೆ ಎನ್ನಲಾಗಿದೆ. ಟಾಲಿವುಡ್ ನಲ್ಲಿ ನಟಿ ಪೂಜಾ ಹೆಗ್ಡೆಗೆ ನಾಯಕಿಯಾಗುವ ಅವಕಾಶವನ್ನು ನಿರ್ದೇಶಕರು, ನಿರ್ಮಾಪಕರು ನೀಡುತ್ತಿಲ್ಲ ಎಂಬ ಸುದ್ದಿಯೂ ಹರಿದಾಡುತ್ತಿದೆ. 

ಇದನ್ನೂ ಓದಿ: ಸುದೀಪ್‌ vs ಕುಮಾರ್:‌ "ರಾಜ್​ ಕುಟುಂಬವೇ ಹೆಡ್​ ಆಫೀಸ್" ಎಂದ ರವಿಚಂದ್ರನ್​

ಈ ಹಿನ್ನೆಲೆಯಲ್ಲಿ ಪೂಜಾ ಹೆಗಡೆ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಇದರಿಂದ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಸಿನಿ ವಿಮರ್ಶಕ ಎಂದು ಹೇಳಿಕೊಳ್ಳುವ ಉಮೈರ್ ಸಂಧು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದಾರೆ. 

ನಿನ್ನೆ ಮಧ್ಯಾಹ್ನ ಪೂಜಾ ಹೆಗ್ಡೆ ಆತ್ಮಹತ್ಯೆಗೆ ಯತ್ನಿಸಿದ್ದು, ಮನೆಯಲ್ಲಿದ್ದವರು ನೋಡಿದ್ದರಿಂದ ಆಕೆ ಬದುಕುಳಿದಿದ್ದಾರೆ ಎಂದು ಉಮೈರ್ ಸಂದು ಟ್ವೀಟ್ ಮಾಡಿದ್ದಾರೆ. ಸದ್ಯ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದು, ಆಕೆಯ ಆಪ್ತರು ನೀಡಿರುವ ಮಾಹಿತಿಯಂತೆ ಆಕೆಯ ಕುಟುಂಬ ಸದಸ್ಯರು ಈ ಬಗ್ಗೆ ಯಾವುದೇ ಘೋಷಣೆ ಮಾಡುತ್ತಾರಾ ಕಾದು ನೋಡಬೇಕಿದೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ. 

 

 

ಈ ಟ್ವೀಟ್ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಕೆಲವರು ಇದನ್ನು ನಿಜವೆಂದು ಭಾವಿಸಿದ್ದಾರೆ. ಆದರೆ ಇನ್ನು ಕೆಲವರು ಸಂಧು ಯಾವಾಗಲೂ ಸಿನಿ ಸೆಲೆಬ್ರಿಟಿಗಳ ಬಗ್ಗೆ ವದಂತಿಗಳನ್ನು ಸೃಷ್ಟಿಸುತ್ತಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೊಂದೆಡೆ, ಪೂಜಾ ಹೆಗ್ಡೆ ಅಭಿಮಾನಿಗಳು ಉಮೈರ್‌ ಸಂಧು ವಿರುದ್ಧತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: Stardom: ಆರ್ಯನ್ ಖಾನ್ ವೆಬ್ ಸಿರೀಸ್‌ನಲ್ಲಿರುವ ಈ ನಟಿ ಯಾರು ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News