Salman Khan ಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ರಾಜಸ್ಥಾನ್ ಹೈಕೋರ್ಟ್
Blackbuck Poaching Case - ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ (Salman Khan) ರಾಜಸ್ಥಾನ್ ಹೈಕೋರ್ಟ್ (Rajasthan High Court) ಭಾರಿ ನೆಮ್ಮದಿಯ ಸುದ್ದಿಯೊಂದು ನೀಡಿದೆ. ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಒಟ್ಟಿಗೆ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.
ನವೆಹಲಿ: Blackbuck Poaching Case - ಬಾಲಿವುಡ್ (Bollywood News)ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗೆ ರಾಜಸ್ಥಾನ ಹೈಕೋರ್ಟ್ ಭಾರಿ ನೆಮ್ಮದಿಯ ಸುದ್ದಿಯೊಂದನ್ನು ನೀಡಿದೆ. ಸಲ್ಮಾನ್ ಖಾನ್ ಸಲ್ಲಿಸಿದ್ದ ವರ್ಗಾವಣೆ ಅರ್ಜಿಯನ್ನು ಹೈಕೋರ್ಟ್ ಅಂಗೀಕರಿಸಿದೆ. ನ್ಯಾಯಾಲಯದ ಈ ತೀರ್ಪಿನ ಬಳಿಕ ಇದೀಗ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ (Salman Khan) ವಿರುದ್ಧ ದಾಖಲಾದ ಎಲ್ಲಾ ಪ್ರಕರಣಗಳ ವಿಚಾರಣೆ ಒಟ್ಟಿಗೆ ನಡೆಯಲಿದೆ. ಹೈಕೋರ್ಟ್‌ನ ಈ ತೀರ್ಪಿನ ನಂತರ, ಸಲ್ಮಾನ್ ಖಾನ್ ಪದೇ ಪದೇ ವಿಚಾರಣೆಗೆ ಹಾಜರಾಗಬೇಕಿಲ್ಲ ಎನ್ನಲಾಗಿದೆ.
ಇದನ್ನೂ ಓದಿ-Stalker: ಮಾ.31ಕ್ಕೆ RGV ಶಿಷ್ಯನ ಸಸ್ಪೆನ್ಸ್ ಥ್ರಿಲ್ಲರ್ ‘ಸ್ಟಾಕರ್’ ರಿಲೀಸ್
ವಿಚಾರಣೆಗೆ ಹಾಜರಾದ ಸಲ್ಮಾನ್ ಸಹೋದರಿ ಅಲವೀರಾ
ಸಲ್ಮಾನ್ ಖಾನ್ ಪರ ವಕೀಲರು ಸೋಮವಾರ ಹೈಕೋರ್ಟ್‌ನಲ್ಲಿ ಸಲ್ಮಾನ್ ಖಾನ್ ಪರ ತಮ್ಮ ಸಂಪೂರ್ಣ ವಾದವನ್ನು (Rajasthan High Court On Salman Khan Petition) ಮಂಡಿಸಿದ್ದಾರೆ. ಇದಾದ ನಂತರ ನ್ಯಾಯಾಲಯ ತನ್ನ ತೀರ್ಪನ್ನು ಪ್ರಕಟಿಸಿದೆ. ಈ ವಿಚಾರಣೆ ವೇಳೆ ಸಲ್ಮಾನ್ ಖಾನ್ ಅವರ ಸಹೋದರಿ ಅಲ್ವಿರಾ ಕೋರ್ಟ್‌ನಲ್ಲಿ ಹಾಜರಿದ್ದರು. ವಾಸ್ತವದಲ್ಲಿ, ಈ ಸಂಪೂರ್ಣ ಪ್ರಕರಣ ಕೃಷ್ಣಮೃಗಗಳ ಅಕ್ರಮ ಬೇಟೆಗೆ ಸಂಬಂಧಿಸಿದೆ.
Toofan Lyrical Video: 'ಕೆಜಿಎಫ್ 2' ಚಿತ್ರದ ಮೊದಲ ಲಿರಿಕಲ್ ವಿಡಿಯೋ ರಿಲೀಸ್
ಏನಿದು ಕೃಷ್ಣಮೃಗ ಬೇಟೆ ಪ್ರಕರಣ?
ಸಲ್ಮಾನ್ ಖಾನ್ ಅವರು ಸೆಪ್ಟೆಂಬರ್ 1998 ರಲ್ಲಿ ರಾಜಸ್ಥಾನದ ಜೋಧ್‌ಪುರದಲ್ಲಿ 'ಹಮ್ ಸಾಥ್ ಸಾಥ್ ಹೇ' ಚಿತ್ರದ ಚಿತ್ರೀಕರಣಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ, ಅವರು ಚಿತ್ರದಲ್ಲಿ ಪೋಷಕ ನಟರಾದ ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ಟಬು ಮತ್ತು ನೀಲಂ ಅವರೊಂದಿಗೆ ಬೇಟೆಗೆ ತೆರಳಿದ್ದರು ಎನ್ನಲಾಗಿದೆ. ಬೇಟೆಯ ವೇಳೆ ಅವರು ಸಂರಕ್ಷಿತ ಕೃಷ್ಣಮೃಗವನ್ನು ಬೇಟೆಯಾಡಿದ್ದಾರೆ ಎಂದು ಆರೋಪಿಸಲಾಗಿದೆ. 27, 28 ಸೆಪ್ಟೆಂಬರ್, ಅಕ್ಟೋಬರ್ 01 ಮತ್ತು 02 ರಂದು ಬೇಟೆ ನಡೆಸಲಾಗಿದೆ ಎನ್ನಲಾಗಿದೆ. ಸಹ ನಟರು ಸಲ್ಮಾನ್ ಅವರನ್ನು ಬೇಟೆಯಾಡಲು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ಸಲ್ಮಾನ್ ಖಾನ್ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ಹೊರತುಪಡಿಸಿ ಉಳಿದೆಲ್ಲ ಆರೋಪಿಗಳನ್ನು ನ್ಯಾಯಾಲಯ ಈಗಾಗಲೇ ಖುಲಾಸೆಗೊಳಿಸಿದೆ.
ಇದನ್ನೂ ಓದಿ-RRR: ಬಿಡುಗಡೆಗೂ ಮುನ್ನವೇ ದಾಖಲೆ ಬರೆದ 'RRR'
ಬೇಟೆ ಪ್ರಕರಣದಲ್ಲಿ ಸಲ್ಮಾನ್ ವಿರುದ್ಧ 4 ಪ್ರಕರಣಗಳು ದಾಖಲಾಗಿವೆ
ರಾಜಸ್ಥಾನದ ಮಥಾನಿಯಾ ಮತ್ತು ಭವದ್‌ನಲ್ಲಿ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ್ದಕ್ಕಾಗಿ ಸಲ್ಮಾನ್ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದೇ ವೇಳೆ, ಜೋಧ್‌ಪುರದ ಕೆಳ ನ್ಯಾಯಾಲಯವು ಈಗಾಗಲೇ ಕಂಕಣಿಯಲ್ಲಿ ಕೃಷ್ಣಮೃಗ ಬೇಟೆಯಾಡಿದ್ದಕ್ಕಾಗಿ (Salman Khan Kakani Deer Hunting Case) ಸಲ್ಮಾನ್‌ನನ್ನು ದೋಷಿ ಎಂದು ಘೋಷಿಸಿದೆ. ಇನ್ನೊಂದೆಡೆ ಲೈಸನ್ಸ್ ಅವಧಿ ಮುಗಿದ ಬಳಿಕವೂ ಕೂಡ 32 ಮತ್ತು 22 ಬೋರ್ ರೈಫಲ್ ಗಳನ್ನು ಇಟ್ಟುಕೊಂಡಿದ್ದಕ್ಕಾಗಿ ನಾಲ್ಕನೇ ಪ್ರಕರಣವನ್ನು ಶಸ್ತ್ರಾಸ್ತ್ರ ಕಾಯ್ದೆಯಡಿ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿಯೂ ಕೂಡ ಸಲ್ಮಾನ್ ಖಾನ್‌ಗೆ ಶಿಕ್ಷೆಯಾಗಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.