Toofan Lyrical Video: 'ಕೆಜಿಎಫ್​​ 2' ಚಿತ್ರದ ಮೊದಲ ಲಿರಿಕಲ್​ ವಿಡಿಯೋ ರಿಲೀಸ್​

KGF 2 Song: 'ಕೆಜಿಎಫ್​: ಚಾಪ್ಟರ್​ 2' ಸಿನಿಮಾದ ತೂಫಾನ್​.. ಹಾಡು ಬಿಡುಗಡೆ ಆಗಿದೆ. ಲಿರಿಕಲ್​ ಸಾಂಗ್​ ನೋಡಿ ಯಶ್​ ಫ್ಯಾನ್ಸ್​ ಖುಷಿಯಾಗಿದ್ದಾರೆ.

Written by - Chetana Devarmani | Last Updated : Mar 21, 2022, 12:24 PM IST
  • ಬಹುನಿರೀಕ್ಷಿತ ಸಿನಿಮಾ ಯಶ್‌ ಅಭಿನಯದ 'ಕೆಜಿಎಫ್ 2'
  • ಮೊದಲ ಸಾಂಗ್​ ಬಿಡುಗಡೆ ಮಾಡಿದ ಚಿತ್ರ ತಂಡ
  • 'ಕೆಜಿಎಫ್​​ 2' ಚಿತ್ರದ ಮೊದಲ ಲಿರಿಕಲ್​ ವಿಡಿಯೋ ರಿಲೀಸ್​
Toofan Lyrical Video: 'ಕೆಜಿಎಫ್​​ 2' ಚಿತ್ರದ ಮೊದಲ ಲಿರಿಕಲ್​ ವಿಡಿಯೋ ರಿಲೀಸ್​   title=
ಕೆಜಿಎಫ್​​ 2

ಬಹುನಿರೀಕ್ಷಿತ ಸಿನಿಮಾ ಯಶ್‌ ಅಭಿನಯದ 'ಕೆಜಿಎಫ್ 2' (KGF 2) ಚಿತ್ರ ತಂಡ ಅಭಿಮಾನಿಗಳಿಗೆ ಸಂತಸವಾಗುವ ಸುದ್ದಿ ನೀಡಿದ್ದಾರೆ. ಈವರೆಗೂ ಒಂದಷ್ಟು ಪೋಸ್ಟರ್, ಟೀಸರ್​ ಮೂಲಕ ಗಮನ ಸೆಳೆದಿದ್ದ ಟೀಂ, ಇದೀಗ ಮೊದಲ ಸಾಂಗ್​ ಬಿಡುಗಡೆ ಮಾಡಿದೆ.

ಇದನ್ನೂ ಓದಿ: RRR: ಬಿಡುಗಡೆಗೂ ಮುನ್ನವೇ ದಾಖಲೆ ಬರೆದ 'RRR'

'ತೂಫಾನ್​..'  ಲಿರಿಕಲ್​ ವಿಡಿಯೋ (Toofan Lyrical Video) ಬಿಡುಗಡೆ ಮಾಡಲಾಗಿದೆ. ಈ ಹಾಡನ್ನು ಬಿಡುಗಡೆ ಮಾಡುವ ಬಗ್ಗೆ ಎರಡು ದಿನ ಮುನ್ನವೇ ಹೊಂಬಾಳೆ ಫಿಲ್ಮ್ಸ್ ತನ್ನ ಸೋಶಿಯಲ್​ ಮೀಡಿಯಾ ಖಾತೆಗಳ ಮೂಲಕ ತಿಳಿಸಿತ್ತು. ಇಂದು ಸಾಂಗ್‌ ರಿಲೀಸ್‌ ಆಗಿದ್ದು, ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ.

ರವಿ ಬಸ್ರೂರು ಸಂಗೀತ ನೀಡಿರುವ ಈ ಹಾಡಿನಲ್ಲಿ ಯಶ್​ (Yash) ಅವರನ್ನು ಕಂಡು ಫ್ಯಾನ್ಸ್​ ದಿಲ್‌ ಖುಷ್‌ ಆಗಿದೆ. ಪ್ರಶಾಂತ್​ ನೀಲ್​ ನಿರ್ದೇಶನದ ಈ ಸಿನಿಮಾ ಬಗ್ಗೆ ಕ್ರೇಜ್‌ ಕ್ರಿಯೇಟ್‌ ಆಗಲು ಹಲವು ಕಾರಣಗಳಿವೆ.​ ಕೆಜಿಎಫ್​ 2 ಕನ್ನಡ ಮಾತ್ರವಲ್ಲ, ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲಿ ರಿಲೀಸ್ ಆಗುತ್ತಿದೆ. ಈ ಎಲ್ಲಾ ಭಾಷೆಗಳಲ್ಲಿಯೂ ತೂಫಾನ್‌ ಸಾಂಗ್ (Toofan Song)​ ರಿಲೀಸ್ ಆಗಿದೆ. 

ಇದನ್ನೂ ಓದಿ: Stalker: ಮಾ.31ಕ್ಕೆ RGV ಶಿಷ್ಯನ ಸಸ್ಪೆನ್ಸ್ ಥ್ರಿಲ್ಲರ್ ‘ಸ್ಟಾಕರ್’ ರಿಲೀಸ್

ಏಪ್ರಿಲ್​ 14ರಂದು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ವಿಶ್ವಾದ್ಯಂತ ರಿಲೀಸ್​ ಆಗಲಿದೆ. ಭಾರತ ಮಾತ್ರವಲ್ಲ ಬೇರೆ ದೇಶಗಳ ಚಿತ್ರಮಂದಿರಗಳಲ್ಲಿ ಸ್ಟ್ಯಾಂಡಿ ಮತ್ತು ಪೋಸ್ಟರ್​ಗಳನ್ನು ಪ್ರದರ್ಶಿಸಲು ತಯಾರಿ ನಡೆದಿದೆ. ಈ ಸಿನಿಮಾದಲ್ಲಿ ಬಾಲಿವುಡ್​ ಸ್ಟಾರ್​ ಕಲಾವಿದರಾದ ಸಂಜಯ್​ ದತ್​, ರವೀನಾ ಟಂಡನ್​ ಕೂಡ ನಟಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News