ಹೈದರಾಬಾದ್:  ರಕ್ತದೊತ್ತಡದಲ್ಲಿ ತೀವ್ರ ಏರಿಳಿತದಿಂದಾಗಿ ಶುಕ್ರವಾರ ಹೈದರಾಬಾದ್‌ನ ಅಪೊಲೊ ಆಸ್ಪತ್ರೆಗೆ  ದಾಖಲಾಗಿರುವ ಸೂಪರ್‌ಸ್ಟಾರ್ ರಜನಿಕಾಂತ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಆರೋಗ್ಯ ಸುಧಾರಿಸುತ್ತಿದೆ ಎಂದು ಅಪೊಲೊ ಆಸ್ಪತ್ರೆ ಮೂಲಗಳು ತಿಳಿಸಿವೆ. ಖ್ಯಾತ ನಟ ಆಸ್ಪತ್ರೆಗೆ ದಾಖಲಾದ ಬಳಿಕ ವೈದ್ಯರ ತಂಡ ಸೂಕ್ಷ್ಮವಾಗಿ 'ಥಲೈವ' ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುತ್ತಿದೆ. ರಕ್ತದೊತ್ತಡವನ್ನು ನಿಯಂತ್ರಿಸಲು ಸೂಕ್ತ ಔಷದೋಪಚಾರ ನೀಡಲಾಗುತ್ತಿದೆ. ರಜನೀಕಾಂತ್ ರಾತ್ರಿಯಿಡೀ ಆಸ್ಪತ್ರೆಯಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿಯೇ ಇದ್ದರು ಎಂದು ಆಸ್ಪತ್ರೆ ಆಡಳಿತ ಮಾಹಿತಿ ನೀಡಿದೆ.


COMMERCIAL BREAK
SCROLL TO CONTINUE READING

ಹೈದರಾಬಾದ್‌ನ ಅಪೊಲೊ ಆಸ್ಪತ್ರೆಯಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಅವರೊಂದಿಗೆ ಅವರ ಪುತ್ರಿ ಇದ್ದಾರೆ. ಸದ್ಯ ರಜನೀಕಾಂತ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆದರೂ ಅವರಿಗೆ ವಿಶ್ರಾಂತಿ ಅವಶ್ಯಕತೆ ಇರುವುದರಿಂದ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ಅವರ ಕುಟುಂಬ ಸದಸ್ಯರನ್ನು ಹೊರತುಪಡಿಸಿ ಬೇರಾರಿಗೂ ಅವರನ್ನು ಭೇಟಿಯಾಗಲು ಅವಕಾಶವಿಲ್ಲದ ಕಾರಣ ಯಾರೂ ಕೂಡ ಆಸ್ಪತ್ರೆಯ ಬಳಿ ಬರದಂತೆ ಮನವಿ ಮಾಡಲಾಗಿದೆ.


ರಜನೀಕಾಂತ್ ಅವರಿಗೆ ರಕ್ತದೊತ್ತಡ ಸ್ಥಿರವಾಗುವವರೆಗೆ ಆಸ್ಪತ್ರೆಯಲ್ಲಿಯೇ ಅವರನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ರಕ್ತದೊತ್ತಡ, ದಣಿವಿನ ಹೊರತಾಗಿ ಅವರಿಗೆ ಬೇರೆ ಯಾವುದೇ ರೋಗಲಕ್ಷಣಗಳಿಲ್ಲ ಎಂದು ಮಾಹಿತಿ ಲಭ್ಯವಾಗಿದೆ. 


ಇದನ್ನೂ ಓದಿ: ಕಂಡಕ್ಟರ್‌ನಿಂದ ಸೂಪರ್‌ಸ್ಟಾರ್‌ವರೆಗೆ Rajinikanth ಬಗೆಗಿನ ಗೊತ್ತಿರದ ವಿಷಯಗಳಿವು


ಈ ಹಿಂದೆ ಬಿಡುಗಡೆಯಾದ ಹೇಳಿಕೆಯಲ್ಲಿ, ರಜನಿಕಾಂತ್ ಅವರು ಕಳೆದ 10 ದಿನಗಳಿಂದ ಹೈದರಾಬಾದ್‌ನಲ್ಲಿ ತಮ್ಮ 'ಅನ್ನತ್ತೆ' ಚಿತ್ರದ ಚಿತ್ರೀಕರಣದಲ್ಲಿದ್ದರು. ಚಿತ್ರದ ಸೆಟ್ನಲ್ಲಿ ಕೆಲವು ಜನರಿಗೆ ಕರೋನವೈರಸ್ ಪಾಸಿಟಿವ್ ಕಂಡು ಬಂದ ಹಿನ್ನಲೆಯಲ್ಲಿ ಶೂಟಿಂಗ್ ಸ್ಥಗಿತಗೊಳಿಸಲಾಯಿತು. ಬಳಿಕ ಚಿತ್ರ ತಂಡದ ಎಲ್ಲರಿಗೂ ಕರೋನಾ ಪರೀಕ್ಷೆ ಮಾಡಿಸಲಾಗಿತ್ತು. ಡಿಸೆಂಬರ್ 22 ರಂದು ರಜನೀಕಾಂತ್ ಅವರ ಕೋವಿಡ್ 19   (Covid 19) ವರದಿ ನೆಗೆಟಿವ್ ಬಂದಿತ್ತು. ಅದಾಗ್ಯೂ ಅವರು ಹೋಂ ಕ್ವಾರಂಟೈನ್ ನಲ್ಲಿದ್ದರು. 


ಇದನ್ನೂ ಓದಿ: ರಕ್ತದೊತ್ತಡದಲ್ಲಿ ಏರಿಳಿತ Superstar Rajinikanth ಆಸ್ಪತ್ರೆಗೆ ದಾಖಲು


ಇದಕ್ಕೂ ಮುನ್ನ ಈ ಚಿತ್ರ ಮುಗಿದ ನಂತರ ಸಕ್ರಿಯವಾಗಿ ರಾಜಕೀಯ ಪ್ರವೇಶಿಸುವುದಾಗಿ ರಜನಿಕಾಂತ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಅದರ ವಿವರಗಳನ್ನು ಡಿಸೆಂಬರ್ 31 ರಂದು ನೀಡುವುದಾಗಿ ಥಲೈವ ತಿಳಿಸಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 


ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.