ನವದೆಹಲಿ: ಸೂಪರ್‌ಸ್ಟಾರ್ ರಜನಿಕಾಂತ್ (Rajinikanth)  ಇಂದು ಟ್ವಿಟರ್‌ನಲ್ಲಿ ನಂಬರ್ -1 (#IStandWithRajinikanth) ಟ್ರೆಂಡಿಂಗ್ ಆಗಿದ್ದಾರೆ. ವಾಸ್ತವವಾಗಿ, ಅವರು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಗಳಿಗೆ ಪ್ರತಿಕ್ರಿಯಿಸಿದ್ದಾರೆ. ದೇಶದ ಹಲವು ಭಾಗಗಳಲ್ಲಿ ಹಿಂಸಾಚಾರ ನಡೆಯುತ್ತಿದೆ, ಗಲಭೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ ಎಂದು ರಜನಿಕಾಂತ್ ಹೇಳಿದ್ದಾರೆ. ಆದರೆ ರಜನಿಕಾಂತ್ ಅವರ ಟ್ವೀಟ್‌ನಿಂದ ಅವರು ಪೌರತ್ವ ತಿದ್ದುಪಡಿ ಕಾಯ್ದೆ(CAA)ಗೆ ಪರವಾಗಲಿ ಅಥವಾ ವಿರುದ್ಧವಾಗಿದ್ದಾರೋ ಎಂಬುದರ ಬಗ್ಗೆ ಸ್ಪಷ್ಟವಾಗಿಲ್ಲ. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆ ವೇಳೆ ಉಂಟಾಗಿರುವ ಹಿಂಸಾಚಾರ ನನಗೆ ತುಂಬಾ ನೋವುಂಟು ಮಾಡಿದೆ ಎಂದು ರಜನಿಕಾಂತ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಯಾವುದೇ ಸಮಸ್ಯೆಗೆ ಪರಿಹಾರವಾಗಿ ಹಿಂಸೆ ಮತ್ತು ಗಲಭೆಗಳನ್ನು ಮಾಡಬಾರದು ಎಂದು ರಜನಿಕಾಂತ್ ಟ್ವೀಟ್ ಮಾಡಿದ್ದಾರೆ.  ಭಾರತದ ಜನರಿಗೆ ಒಗ್ಗಟ್ಟಿನಿಂದ ಇರಲು ಮತ್ತು ಭಾರತದ ಭದ್ರತೆ ಮತ್ತು ಹಿತಾಸಕ್ತಿಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸುವಂತೆ ನಾನು ಮನವಿ ಮಾಡುತ್ತೇನೆ. ಈ ರೀತಿಯಾಗಿ ಯಾವುದೇ ಹಿಂಸಾಚಾರ ನಡೆಸದಂತೆ ಹಾಗೂ ಹಿಂಸಾಚಾರದಿಂದ ದೂರವಿರುವಂತೆ ಅವರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.



ಅವರ ಈ ಹೇಳಿಕೆಗೆ ಬಹಳ ಟ್ವೀಟ್‌ಗಳು ಬರುತ್ತಿದ್ದು, ರಜನಿಕಾಂತ್ ಸಿಎಎ ಜೊತೆ ಇದ್ದಾರೋ ಅಥವಾ ಪ್ರತಿಭಟಿಸುತ್ತಾರೋ ಎಂಬುದರ ಬಗ್ಗೆ ಹಲವರು ಗೊಂದಲಕ್ಕೊಳಗಾಗಿದ್ದಾರೆ.  ಸಾರಿಕಾ ರಾಜ್ ಎಂಬುವವರು ಈ ಬಗ್ಗೆ ಬರೆದಿದ್ದು, ಅವರು ಯಾವುದೇ ಪಕ್ಷವನ್ನು ಬೆಂಬಲಿಸಿಲ್ಲ. ಅವರು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆಯೂ ಏನೂ ಹೇಳಿಲ್ಲ. ಈ ಕುರಿತು ಯಾರ ವಿರುದ್ಧವೂ ಮಾತನಾಡಿಲ್ಲ. ಅವರು ನಮ್ಮ ಹಿಂಸಾಚಾರ ಮತ್ತು ರಕ್ತಪಾತವನ್ನು ಮಾತ್ರ ವಿರೋಧಿಸಿದ್ದಾರೆ ಎಂದು ತಿಳಿಸಿದ್ದಾರೆ.


ನಾವು ಭಾರತೀಯರು ರಜನಿ ಸರ್ ಅವರೊಂದಿಗೆ ನಿಂತಿದ್ದೇವೆ ಎಂದು ರಾಮ್ ಕುಲಕರ್ಣಿ ಬರೆದಿದ್ದಾರೆ. ನಿರ್ದಿಷ್ಟ ಸಮುದಾಯದಿಂದ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸುತ್ತಿರುವುದರಿಂದ, ಹಿಂಸಾಚಾರವು ಯಾವುದೇ ಸಮಸ್ಯೆಗೆ ಪರಿಹಾರವಲ್ಲ ಎಂಬ ಅಭಿಪ್ರಾಯವನ್ನು ಅವರು ಮುಂದಿಡುತ್ತಾರೆ #IStandWithRajinikanth ಎಂದವರು ಬರೆದಿದ್ದಾರೆ.



ಏತನ್ಮಧ್ಯೆ, ರಜನಿಕಾಂತ್ ಸಿಎಬಿಯನ್ನು ಎಲ್ಲಿಯೂ ಬೆಂಬಲಿಸುವುದಿಲ್ಲ ಎಂದು ರಜನಿಕಾಂತ್ ಅಭಿಮಾನಿಗಳ ಟ್ವೀಟರ್ ಹ್ಯಾಂಡಲ್ ಟ್ವೀಟ್ ಮಾಡಿದೆ. ಎಲ್ಲರಿಗಿಂತ ಮೊದಲು ಶ್ರೀಲಂಕಾದ ತಮಿಳರ ಬಗ್ಗೆ ಪ್ರಶ್ನಿಸಿದವರು ಅವರು, ಹಿಂಸಾಚಾರವು ಯಾವುದೇ ಸಮಸ್ಯೆಗೆ ಪರಿಹಾರವಲ್ಲ ಎಂದು ಹೇಳಿದ್ದಾರೆ ಎಂದು ರಜನಿ ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.


ರಜನಿಕಾಂತ್ ಅವರ ಹೇಳಿಕೆಯನ್ನು ವಿರೋಧಿಸುವವರು ಅವರು ಸಿಎಬಿಯನ್ನು ಬೆಂಬಲಿಸುವುದಿಲ್ಲ ಅಥವಾ ವಿರೋಧಿಸಿಲ್ಲ ಎಂದು ತಿಳಿದಿರಬೇಕು. ನಾಗರಿಕನಂತೆ ಅವರು ಹಿಂಸಾಚಾರದ ವಿರುದ್ಧ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ಸೌಮ್ಯ ಎಂಬುವವರು ಬರೆದಿದ್ದಾರೆ.


ವಿದ್ಯಾರ್ಥಿಗಳ ಜೀವನದೊಂದಿಗೆ ಆಟವಾಡಬೇಡಿ. ಹಿಂಸಾಚಾರದಿಂದ ದೂರವಿರಿ. ನಾನು ರಜನಿಕಾಂತ್ ಅವರೊಂದಿಗೆ ನಿಲ್ಲುತ್ತೇನೆ ಎಂದು ನಾಥನ್ ಎಂಬುವವರು ಬರೆದಿದ್ದಾರೆ. 


ಜನರ ಸುರಕ್ಷತೆಗಾಗಿ ಈ ವ್ಯಕ್ತಿ ಅವರೊಂದಿಗೆ ನಿಂತಿದ್ದಾರೆ. ನಾನು ರಜನಿಕಾಂತ್ ಅವರೊಂದಿಗೆ ನಿಲ್ಲುತ್ತೇನೆ ಎಂದು ಇನ್ನೊಬ್ಬ ಬಳಕೆದಾರ ಅನಿರುದ್ಧ್ ಬರೆದಿದ್ದಾರೆ.