Jailer Movie : ಸೂಪರ್‌ ಸ್ಟಾರ್‌ ರಜನಿಕಾಂತ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ನೆಲ್ಸನ್ ನಿರ್ದೇಶನದ ಜೈಲರ್ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಾಗಿದೆ. ಚಿತ್ರವು ಆಗಸ್ಟ್ 10 ರಂದು ಥಿಯೇಟರ್‌ಗೆ ಬರಲಿದೆ ಎಂದು ತಿಳಿಸಲಾಗಿದೆ. ಈ ಕುರಿತು ಚಿತ್ರತಂಡ 48 ಸೆಕೆಂಡುಗಳ ಸುದೀರ್ಘ ಟೀಸರ್ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ರಜನಿಕಾಂತ್, ಶಿವರಾಜ್‌ಕುಮಾರ್‌, ಮೋಹನ್ ಲಾಲ್, ತಮನ್ನಾ ಮತ್ತು ಇತರ ಅನೇಕ ತಾರೆಯರು ಟೀಸರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ಈ ಚಿತ್ರದಲ್ಲಿ ಡಾ. ಶಿವರಾಜ್‌ಕುಮಾರ್‌ ನಟಿಸುತ್ತಿದ್ದಾರೆ ಎಂಬ ಸುದ್ದಿ ಕನ್ನಡಿಗರಿಗೆ ಬಹಳ ಖುಷಿ ನೀಡಿತ್ತು. ಅಲ್ಲದೆ, ಶಿವಣ್ಣ ಮೊದಲ ಬಾರಿಗೆ ಅನ್ಯ ಭಾಷೆಯಲ್ಲಿ ನಟಿಸುತ್ತಿರುವುದು ವಿಶೇಷವಾಗಿತ್ತು. ಅದರಲ್ಲಿ ಸೂಪರ್‌ ಸ್ಟಾರ್‌ ರಜಿನಿ ಜೊತೆ ಅಂದ್ರೆ ಹೇಳ್ಬೇಕಾ.. ಅಲ್ಲದೆ, ಬಹು ತಾರಾಗಣ ಹೊಂದಿರುವ ಈ ಸಿನಿಮಾ ಪೋಸ್ಟರ್‌ ಮೂಲಕವೇ ನಿರೀಕ್ಷೆ ಹುಟ್ಟಿಸಿತ್ತು. ಇದೀಗ ಚಿತ್ರದ ಬಿಡುಗಡೆ ದಿನಾಂಕ ಘೋಷಿಸುವ ಚಿತ್ರತದಂದ ಟೀಸರ್‌ ಇನ್ನಷ್ಟು ಕುತೂಹಲ ಹೆಚ್ಚಿಸಿದೆ.


DBoss : ನಮ್ಮನ್ನ ಕೆಆರ್‌ಎಸ್‌ಗೆ ತಳ್ಳಿ ನನ್ನ ತಾಯಿ ಸಾಯಲು ನಿರ್ಧರಿಸಿದ್ದರು..! ಆಗ.. 


ಶಿವಣ್ಣ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದಾಗ ಕನ್ನಡಿಗರಿಗೆ ಸಖತ್‌ ಖುಷಿ ಉಂಟಾಗಿತ್ತು. ಅದು ಅಲ್ಲದೆ, ಸೂಪರ್‌ಸ್ಟಾರ್ ಜೊತೆ ಮೊದಲ ಬಾರಿಗೆ ದೊಡ್ಡ ಪರದೆಯ ಮೇಲೆ ಒಟ್ಟಿಗೆ ನೋಡುವ ಅದೃಷ್ಟ ಶಿವರಾಜ್‌ಕುಮಾರ್‌ ಪ್ಯಾನ್ಸ್‌ಗೆ ಲಭಸಿದೆ. ಅಲ್ಲದೆ, ಈ ಚಿತ್ರದಲ್ಲಿ ಶಿವಣ್ಣ ಜೊತೆಗೆ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.


ಜೈಲರ್‌ ಚಿತ್ರಕ್ಕೆ ನೆಲ್ಸನ್ ಅವರೇ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ. ಈ ಸಿನಿಮಾದಲ್ಲಿ ರಮ್ಯಾ ಕೃಷ್ಣನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪಡಯಪ್ಪ ಚಿತ್ರದ ನಂತರ ʼಜೈಲರ್ʼ ಮೂಲಕ ರಜನಿಕಾಂತ್ ಮತ್ತು ರಮ್ಯಾ ಮತ್ತೆ ಒಂದಾಗಿರುವುದು ಮತ್ತೊಂದು ವಿಶೇಷ. ಜೈಲರ್ ರಜನಿಕಾಂತ್ ಅವರ 169ನೇ ಚಿತ್ರ. ಈ ಚಿತ್ರವನ್ನು ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಚಿತ್ರದ ಸಂಗೀತ ನಿರ್ದೇಶಕರು. ಚಿತ್ರಕ್ಕೆ ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಹಣ ಇದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.