Rajkumar Family At Voting Booth: ಡಾ. ರಾಜ್‌ಕುಮಾರ್‌ ಕುಟುಂಬದ ಸದಸ್ಯರು ಇಂದು ಬೆಳ್ಳಗೆ ಒಟ್ಟಾಗೆ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ. ಲೋಕಸಭೆ ಚುನಾವಣೆಯಂದು ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಹಾಗೂ ರಾಘಣ್ಣ ಹೆಂಡತಿ ಮಕ್ಕಳು ಎಲ್ಲಾರೂ ಒಟ್ಟಾಗಿ ವೋಟಿಂಗ್‌ ಬೂತ್‌ಗೆ ಆಗಮಿಸಿ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. 


COMMERCIAL BREAK
SCROLL TO CONTINUE READING

ಬೆಂಗಳೂರಿನ ಸದಾಶಿವನಗರದ ಪೂರ್ಣ ಪ್ರಜ್ಞ ಎಜುಕೇಶನ್ ಸೆಂಟರ್‌ನಲ್ಲಿಯ ಮತಗಟ್ಟೆ ಸಂಖ್ಯೆ 152ರಲ್ಲಿಗೆ ಬೆಳಗ್ಗೆ ಸುಮಾರು 9.15ಕ್ಕೆ ಆಗಮಿಸಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ಅಣ್ಣಾವ್ರ ಪುತ್ರ ರಾಘವೇಂದ್ರ ರಾಜ್ ಕುಮಾರ್, ರಾಘಣ್ಣನ ಪತ್ನಿ ಮಂಗಳ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಅವರ ಮಕ್ಕಳು ವಿನಯ್‌ ರಾಜ್‌ಕುಮಾರ್‌ ಹಾಗೂ ಯುವ ರಾಜ್‌ಕುಮಾರ್‌ ಮತದಾರರ ಸಾಲಿನಲ್ಲಿ ನಿಂತು ವೋಟ್‌ ಹಾಕಿದ್ದಾರೆ. 


ಇದನ್ನೂ ಓದಿ: Lok Sabha Election 2024: ಮತಗಟ್ಟೆಯಲ್ಲಿ ಪತಿಯ ಜೊತೆಗೆ ಅರ್ಧ ಗಂಟೆ ಕಾದು ಮತದಾನ ಮಾಡಿದ ಗೋಲ್ಡನ್‌ ಕ್ವೀನ್!


ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಮಾಡಿದ ಬಳಿಕ ಮಾತನಾಡಿದ್ದು "ಇದು ಮತದಾನ ಅಲ್ಲ, ಮತವನ್ನು ದಾನ ಮಾಡಬೇಡಿ. ಅದು ನಮ್ಮ ಹಕ್ಕು, ಹಕ್ಕನ್ನು ಎಲ್ಲರೂ ಚಲಾಯಿಸಿ. ಇದು ಮತದಾನ ಅಲ್ಲ, ಮತವನ್ನು ದಾನ ಮಾಡಬೇಡಿ. ಅದು ನಮ್ಮ ಹಕ್ಕು, ಹಕ್ಕನ್ನು ಎಲ್ಲರೂ ಚಲಾಯಿಸಿ" ಎಂದಿದ್ದಾರೆ.  


ವರನಟ ರಾಜ್‌ಕುಮಾರ್ ಮನೆಯ ಮಂದಿ ಇಂದು ಬೆಳಗ್ಗೆ ಒಟ್ಟಾಗಿ ಮತಗಟ್ಟೆಯಲ್ಲಿ ಆಗಮಿಸಿ ತಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಿದ್ದಾರೆ. ದೊಡ್ಮನೆ ಮಂದಿ ಮತದಾನ ಮಾಡುವ ಸಮಯದಲ್ಲಿಯೂ ಎಲ್ಲಾರೂ ಒಟ್ಟಾಗಿ ಕಣ್ಣಿಗೆ ಬೀಳುವುದರ ಜೊತೆಗೆ ತಮ್ಮ ಒಗ್ಗಟ್ಟನ್ನು ಮೆರೆದಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.