ಮಠ ಗುರು ಪ್ರಸಾದ್ಗೆ ಇದು ಬೇಕಿತ್ತಾ..?
Raju James Bond : ರಾಜು ಜೇಮ್ಸ್ ಬಾಂಡ್ ಚಿತ್ರದ ಬೇಕಿತ್ತಾ..ಬೇಕಿತ್ತಾ.. ಹಾಡಿನ ಬಗ್ಗೆ ಹೇಳ್ತಾ, ತಮ್ಮ ಮೊದಲ ಮದುವೆ ಡಿವೋರ್ಸ್, ಎರಡನೇ ಮದುವೆ ಮತ್ತು ಮಗು ಬಗ್ಗೆ ಬಾಯಿ ಬಿಟ್ಟಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗ್ತಿದೆ.
Sandalwood : ರಾಜು ಜೇಮ್ಸ್ ಬಾಂಡ್ ಚಿತ್ರದ ಮೊದಲ ಹಾಡು ಬೇಕಿತ್ತಾ ಬೇಕಿತ್ತಾ. ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ಆಗ್ಲೇ ಅರ್ಧ ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಅನೂಪ್ ಸೀಳಿನ್ ಸಂಗೀತ, ನಿರ್ದೆಶಕ ದೀಪಕ್ ಮಧುವನಹಳ್ಳಿ ಸಾಹಿತ್ಯ ಬರೆದಿದ್ದಾರೆ.
ಟಗರು ಖ್ಯಾತಿಯ ಅಥೋನಿ ದಾಸನ್ ಹಾಡಿದ್ದಾರೆ.. ಲವ್ವು ನೋವಿನ ಎಣ್ಣೆ ಹಾಡು ಇದಾಗಿದ್ದು. ಕೇಳೋದಕ್ಕೆ ಕ್ಯಾಚಿಯಾಗಿದೆ. ಅನೂಪ್ ಸೀಳಿನ್ ಕಂಪೋಸಿಷನ್ ದೀಪಕ್ ಲಿರಿಕ್ಸ್ ಹಾಗೂ ಅಥೋನಿದಾಸನ್ ವಾಯ್ಸು ಎಲ್ಲವೂ ಪರ್ಫೆಕ್ಟ್ ಆಗಿ ಮ್ಯಾಚಿಂಗ್ ಆಗಿದೆ. ಫಸ್ಟ್ ಟೈಂ ನಟ ಗುರುನಂದನ್ ವಿರಾಗಿ ವೇಷದಲ್ಲಿ ಕಾಣಿಸಿಕೊಂಡಿದ್ದು ಈ ಹಾಡು ಅವರಿಗೆ ಪಕ್ಕಾ ಹೇಳಿ ಮಾಡಿಸಿದಂತಿದೆ.
ಇದನ್ನೂ ಓದಿ-Actress Sitara: ಪಾರು ಧಾರವಾಹಿ ದಾಮಿನಿ ಬೋಲ್ಡ್ ಲುಕ್ ಗೆ ಧಂಗಾದ ಫ್ಯಾನ್ಸ್..!
ಈ ಹಾಡು ನೋಡಿ ನಿರ್ದೇಶಕ ಮಠ ಗುರುಪ್ರಸಾದ್ ಖುದ್ದು ಈ ಹಾಡಿನ ಬಗ್ಗೆ ವಿಶೇಷವಾಗಿ ಮಾತನಾಡಿದ್ದಾರೆ. ಈ ಹಾಡು ನನ್ನ ಬದುಕಿಗೆ ಹತ್ತಿರವಾಗಿದೆ ಎನ್ನುತ್ತಾ. ತಮ್ಮ ಬದುಕಿನ ಮೊದಲ ಮದುವೆ ಡಿವೋರ್ಸು, ಎರಡನೇ ಮದುವೆ ಮತ್ತು ಮಗು ಎಲ್ಲವನ್ನೂ ಹೇಳಿದ್ದಾರೆ.
ಮಂಜುನಾಥ್ ವಿಶ್ಚಕರ್ಮ ನಿರ್ಮಾಣದ ಈ ಚಿತ್ರದಲ್ಲಿ ಗುರುನಂದನ್,ಮೃದುಲಾ,ರವಿಶಂಕರ್, ಅಚ್ಚುತ್,ಚಿಕ್ಕಣ್ಣ,ಸಾಧುಕೋಕಿಲಾ ಮುಂತಾದವರು ನಟಿಸಿದ್ದಾರೆ. ಸದ್ಯ ಬೇಕಿತ್ತಾ ಬೇಕಿತ್ತಾ ಹಾಡಿನಿಂದ ಸದ್ದು ಮಾಡ್ತಿರೋ ರಾಜು ಜೇಮ್ಸ್ ಬಾಂಡ್ ಚಿತ್ರ ಸದ್ಯದಲ್ಲೇ ಪ್ರೇಕ್ಷಕರೆದುರಿಗೆ ಬರಲಿದೆಯಂತೆ.
ಇದನ್ನೂ ಓದಿ-ಸ್ವಂತ ರೆಸ್ಟೋರೆಂಟ್ ಹೊಂದಿರುವ ಕನ್ನಡ ನಟ ನಟಿಯರಿವರು..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.