BBK9 : ಬಿಗ್‌ಬಾಸ್‌ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಈಗಾಗಲೇ ನಾಮಿನೆಟ್‌ ಆಗಿ 6 ಜನ ಸ್ಪರ್ಧಿಗಳು ಮನೆ ಸೇರಿದ್ದಾರೆ. ಉಳಿದ 12 ಜನ ಸ್ಪರ್ಧಿಗಳ ಮಧ್ಯ ದೊಡ್ಡಮನೆಯಲ್ಲಿ ಗೆಲುವಿಗಾಗಿ ಕಾದಾಟ ನಡೆಯುತ್ತಿದೆ. ಈ ಪೈಕಿ ರಾಕೇಶ್‌ ಅಡಿಗ ಬಿಗ್‌ಬಾಸ್‌ ವಿನ್ನರ್‌ ಆಗ್ತಾರೆ ಎಂಬ ಸುದ್ದಿಯೊಂದು ನೆಟ್ಟಿಗರ ಬಾಯಿಂದ ಕೇಳಿಬರುತ್ತಿದೆ.


COMMERCIAL BREAK
SCROLL TO CONTINUE READING

ಹೌದು.. ಬಿಗ್ ಬಾಸ್​​ ಸೀಸನ್ 9​ ಇದೀಗ 50 ದಿನಗಳನ್ನು ಪೂರ್ಣಗೊಳಿಸಿದ ಖುಷಿಯಲ್ಲಿದೆ. 6 ಜನ ಸ್ಪರ್ಧಿಗಳು ಬಿಗ್‌ಹೌಸ್‌ನಿಂದ ಹೊರಗೆ ಹೋಗಿದ್ದು, ಉಳಿದ 12 ಸ್ಪರ್ಧಿಗಳು ಗೆಲುವಿಗಾಗಿ ಕಸರತ್ತು ನಡೆಸಿದ್ದಾರೆ. ದಿನಗಳು ಹತ್ತಿರ ಬಂದಂತೆ ಸ್ಪರ್ಧಿಗಳಲ್ಲಿ ಪೈಪೋಟಿ ತೀವ್ರವಾಗುತ್ತಿದೆ. ಈ ವಾರ ಎಲಿಮಿನೇಷನ್‌ ಪ್ರಕ್ರಿಯೆ ಕ್ಯಾನ್ಸಲ್‌ ಆಗಿದ್ದು, ಸ್ಪರ್ಧಿಗಳಿಗೆ ಒಂದು ಕಡೆ ಸಮಾಧಾನ ತಂದಿದ್ದರೆ, ಕಿಚ್ಚನ ನಡೆ ಸ್ಪರ್ಧಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ.


ಇದನ್ನೂ ಓದಿ: MS Dhoni: ನಿರ್ಮಾಣದ ಜೊತೆಗೆ ನಟನೆಗೂ ಧೋನಿ ಎಂಟ್ರಿ! ದಳಪತಿ ವಿಜಯ್ ಚಿತ್ರದಲ್ಲಿ ಕೂಲ್ ಕ್ಯಾಪ್ಟನ್!


ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಪ್ರತಿವಾರ ಉತ್ತಮ ಸ್ಪರ್ಧಿಗೆ ಸ್ವತಃ ಕಿಚ್ಚ ಸುದೀಪ್‌ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಾರೆ. ಈ ಬಾರಿಯೂ ಕಿಚ್ಚನ ಚಪ್ಪಾಳೆಗೆ ಕಾರಣ ಮಾತ್ರ ಬೇರೆಯಾಗಿತ್ತು. ಅದೇ ಸದ್ಯ ಮನೆ ಮಂದಿಯ ಆತಂಕಕ್ಕೆ ಅದೇ ಕಾರಣವಾಗಿದೆ. ಪ್ರತಿ ಬಾರಿ ಸುದೀಪ್‌ ಅವರು ಸ್ಪರ್ಧಿಗಳ ಆಟದ ವೈಖರಿ ನೋಡಿ ಚಪ್ಪಾಳೆ ಹೊಡೆಯುತ್ತಿದ್ದರು. ಅದ್ರೆ ಈ ಬಾರಿ ಅವರು, ದೊಡ್ಮನೆಯಲ್ಲಿ ಕಳೆದ 50 ದಿನಗಳಿಂದ ಇರುವ ರಾಕೇಶ್‌ ನಡೆಯನ್ನು ನೋಡಿ ಚಪ್ಪಾಳೆ ಹೊಡೆದಿದ್ದಾರೆ. ಇದರಿಂದ ರಾಕೇಶ್‌ಗೆ ಗೆಲುವಿನ ಸರಮಾಲೆ ಬಿಳುತ್ತಾ ಎನ್ನುವ ಅನುಮಾನ ಮೂಡುವಂತೆ ಮಾಡಿದೆ.


ಆದ್ರೆ, ಬಿಗ್‌ಬಾಸ್‌ ನಡೆ ಕ್ಷಣ ಕ್ಷಣಕ್ಕೂ ರೊಚಕವಾಗಿರುತ್ತದೆ. ಯಾವಾಗ ಏನಾಗುತ್ತದೆ ಎನ್ನುವುದು ಗೊತ್ತೇ ಆಗಲ್ಲ. ಇಂದು ಹೊಗಳಿದ ಕಿಚ್ಚನೆ ನಾಳೆ ಬೈಯಬಹುದು. ಬಿಗ್‌ಬಾಸ್‌ ಗೆಲುವು ಯಾರ ಮುಡಿಗೆ ಸೇರುತ್ತದೆ ಎನ್ನುವ ವಿಚಾರ ಕೊನೆಯ ದಿನ ಕಿಚ್ಚನೇ ಹೇಳಬೇಕಾಗುತ್ತದೆ. ಅಲ್ಲಿಯವೆರೂ ಬಿಗ್‌ಬಾಸ್‌ ಸ್ಪರ್ಧಿಗಳು ಜಯಕ್ಕಾಗಿ ಜಗಳವಾಡಲೆಬೇಕಾಗುತ್ತದೆ. ಇನ್ನು ಈ ವಾರ ನಾಮಿನೇಷನ್‌ನಿಂದ ಪಾರಾಗಿರುವ ದೊಡ್ಮನೆ ಮಂದಿ ಮುಂದಿನ ವಾರ ಅದಕ್ಕೆ ಬಲಿಯಾಗಲೆಬೇಕು. ಒಟ್ಟಾರೆಯಾಗಿ ಕತೂಹಲ ಮೂಡಿಸುತ್ತಿರುವ ಬಿಗ್‌ಹೌಸ್‌ ಕಥೆ ಮುಂದೆನಾಗುತ್ತೆ ಅಂತ ಕಾಯ್ದು ನೋಡೋಣ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.