Rakhi Sawant arreste : ಬಿಟೌನ್‌ ನಟಿ ರಾಖಿ ಸಾವಂತ್‌ ಯಾವುದೇ ಕ್ಷಣದಲ್ಲಿ ಬಂಧನಕ್ಕೊಳಗಾಗುವ ಸಾಧ್ಯತೆ ಇದೆ. ಆಕೆಯ ಬಂಧನಕ್ಕೆ ಆಕೆಯ ಪತಿ ಆದಿಲ್ ಖಾನ್ ದುರಾನಿಯೇ ಕಾರಣ. ಸಾವಂತ್ ವಿರುದ್ಧ ಆದಿಲ್ ಖಾನ್ ದುರಾನಿ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಬಂಧನ ಸಾಧ್ಯತೆ ಇದೆ. 


COMMERCIAL BREAK
SCROLL TO CONTINUE READING

ಹೌದು.. ಸದಾ ಒಂದಲ್ಲ ಒಂದು ವಿವಾದ ಸೃಷ್ಟಿಸಿಕೊಳ್ಳುತ್ತಿರುವ ರಾಖಿ ಸಾವಂತ್ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಖಾಸಗಿ ಮತ್ತು ಆಕ್ಷೇಪಾರ್ಹ ವಿಡಿಯೋ ಹಂಚಿಕೊಳ್ಳುವ ಮೂಲಕ ಸಂಕಷ್ಟ ತಂದುಕೊಂಡಿದ್ದಾರೆ. ಇದಲ್ಲದೇ ರಾಖಿ ಸಾವಂತ್ ಕೆಲವು ಮಾಧ್ಯಮಗಳಿಗೆ ತಮ್ಮ ವಿಡಿಯೋಗಳನ್ನು ಸಹ ನೀಡಿದ್ದರು. 


ಇದನ್ನೂ ಓದಿ:’ಗಜರಾಮ’ ಟೀಸರ್ ಔಟ್‌..! ಆಕ್ಷನ್ ಮೂಡ್‌ನಲ್ಲಿ ಮ್ಯಾಸೀವ್ ಸ್ಟಾರ್ ರಾಜವರ್ಧನ್


ಈ ಕುರಿತು ಆದಿಲ್ ಖಾನ್ ದುರಾನಿ ದೂರು ದಾಖಲಿಸಿದ್ದರು. ತದನಂತರ ಬಂಧನದಿಂದ ಪಾರಾಗಲು ರಕ್ಷಣೆ ಕೋರಿ ರಾಖಿ ಸಾವಂತ್ ದಿಂಡೋಶಿ ನ್ಯಾಯಾಲಯಕ್ಕೆ ದೌಡಾಯಿಸಿ, ಜಾಮೀನು ಪಡೆಯಲು ಅರ್ಜಿ ಸಲ್ಲಿಸಿದ್ದರು. ಅದ್ರೆ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ. 


ದಿಂಡೋಶಿ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶ್ರೀಕಾಂತ್ ಭೋಸಲೆ ಅವರು ರಾಖಿ ಅವರ ಬಂಧನ ಪೂರ್ವ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು. ರಾಖಿ ಪ್ರಸಾರ ಮಾಡಿದ ಅಥವಾ ಪ್ರಕಟಿಸಿದ ವಿಡಿಯೋ ಟೇಪ್‌ಗಳು ಅಶ್ಲೀಲ ಮಾತ್ರವಲ್ಲ, ಆಕ್ಷೇಪಾರ್ಹವೂ ಆಗಿದೆ. ಹಾಗಾಗಿ ಪ್ರಕರಣದ ಸತ್ಯಾಸತ್ಯತೆ, ಆರೋಪ ಮತ್ತು ಸಂದರ್ಭಗಳನ್ನು ಪರಿಗಣಿಸಿ ರಾಖಿ ಸಾವಂತ್‌ಗೆ ನಿರೀಕ್ಷಣಾ ಜಾಮೀನು ನೀಡುವುದು ಸೂಕ್ತವಲ್ಲ ಎಂದು ಪರಿಗಣಿಸಿ ನ್ಯಾಯಾಲಯ ಈ ನಿರ್ಧಾರ ಕೈಗೊಂಡಿದೆ.


ಇದನ್ನೂ ಓದಿ:ಬಿಡುಗಡೆಗೆ ಸಜ್ಜಾಗಿ ನಿಂತಿದೆ ವಿಶಿಷ್ಟ ಕಥಾ `ಸಾರಾಂಶ’!    


ಮಾನಹಾನಿ ಮಾಡುವ ಉದ್ದೇಶದಿಂದ ರಾಖಿ ನಮ್ಮ ಖಾಸಗಿ ಸಮಯದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂದು ರಾಖಿಯ ಪತಿ ಆದಿಲ್ ದುರಾನಿ ಅಂಬೋಲಿ ಪೊಲೀಸರಿಗೆ ದೂರು ನೀಡಿದ್ದರು. ಸಾವಂತ್‌ ವಿರುದ್ಧ ಸೆಕ್ಷನ್ 500 (ಮಾನನಷ್ಟ, 34 (ಸಾಮಾನ್ಯ ಉದ್ದೇಶ)) ಮತ್ತು ಸೆಕ್ಷನ್ 67A (ವಿದ್ಯುನ್ಮಾನ ರೂಪದಲ್ಲಿ ಲೈಂಗಿಕ ವಿಷಯಗಳ ಪ್ರಕಟಣೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣ ದಾಖಲಾದ ನಂತರವೇ ರಾಖಿ ಸಾವಂತ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.