ಬಿಗ್‌ ಬಾಸ್‌ ಡಬಲ್‌ ಗೇಮ್‌ : ಡ್ರೋನ್ ಪ್ರತಾಪ್‌ ಪರ ಧ್ವನಿ ಎತ್ತಿದ ಕರುನಾಡ ಜನ

Bigg Boss Kannada 10 : ಬಿಗ್ ಬಾಸ್‌ 10 ರ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ʼಟಿಕೆಟ್‌ ಟು ಫಿನಾಲೆʼ ಟಾಸ್ಕ್‌ನಲ್ಲಿ ಡ್ರೋನ್ ಪ್ರತಾಪ್‌ಗೆ ಅನ್ಯಾಯವಾಗಿದೆ ಅಂತ ನೆಟ್ಟಿಗರು ಆರೋಪಿಸುತ್ತಿದ್ದಾರೆ. ಅಲ್ಲದೆ, ಬಿಗ್ ಬಾಸ್‌ ಮೋಸ ಮಾಡಿದೆ ಅಂತ ಪ್ರತಾಪ್‌ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಅಸಲಿಗೆ ಏನಾಯ್ತು ಅಂತ ಇಲ್ಲಿದೆ ನೋಡಿ ವರದಿ..

1 /8

ಬಿಗ್‌ ಬಾಸ್‌ ʼಟಿಕೆಟ್‌ ಟು ಫಿನಾಲೆʼ ಟಾಸ್ಕ್‌ ಕೋಲಾಹಲ ಸೃಷ್ಟಿಸಿದೆ. ಡ್ರೋನ್‌ ಪ್ರತಾಪ್‌ಗೆ ಅನ್ಯಾಯವಾಗಿದೆ ಅಂತ ನೆಟ್ಟಿಗರು ವಾದಿಸುತ್ತಿದ್ದಾರೆ.

2 /8

ಟಿಕೆಟ್‌ ಟು ಫಿನಾಲೆ ಟಾಸ್ಕ್‌ನಲ್ಲಿ ಅತ್ಯುತ್ತಮ ಪ್ರದರ್ಶನವನ್ನ ನೀಡಿ ಅತೀ ಹೆಚ್ಚು ಪಾಯಿಂಟ್‌ಗಳನ್ನ ಗಳಿಸಿದರೂ ಡ್ರೋನ್ ಪ್ರತಾಪ್‌ಗೆ ಟಿಕೆಟ್‌ ನೀಡಿಲ್ಲ.

3 /8

8 ಟಾಸ್ಕ್‌ಗಳಲ್ಲಿ ಡ್ರೋನ್ ಪ್ರತಾಪ್‌ 420 ಅಂಕ ಗೆದ್ದು, ಪಾಯಿಂಟ್ ಪಟ್ಟಿಯಲ್ಲಿ ನಂ1 ಸ್ಥಾನದಲ್ಲಿದ್ದರು. 300 ಪಾಯಿಂಟ್‌ಗಳಿಸಿದ್ದ ಸಂಗೀತಾ ಎರಡನೇ ಸ್ಥಾನದಲ್ಲಿ ಇದ್ದರು.

4 /8

ಅತೀ ಹೆಚ್ಚು ಪಾಯಿಂಟ್ಸ್ ಗಳಿಸಿದ್ದ ಡ್ರೋನ್ ಪ್ರತಾಪ್‌ಗೆ ಟಿಕೆಟ್‌ ಸಿಗುತ್ತೆ ಅಂತ ಎಲ್ಲರೂ ಭಾವಿಸಿದ್ದರು, ಅದ್ರೆ ಎಲ್ಲವೂ ಉಲ್ಟಾ ಆಗಿತ್ತು. ಎರಡನೇ ಸ್ಥಾನದಲ್ಲಿದ್ದ ಸಂಗೀತಾಗೆ ಫಿನಾಲೆ ಟಿಕೆಟ್‌ ನೀಡಲಾಯಿತು.

5 /8

ಕಾರಣ ಏನಪ್ಪಾ ಅಂದ್ರೆ, ಟಾಸ್ಕ ಮುಗಿದ ಬಳಿಕ ಪಾಯಿಂಟ್‌ ಪಟ್ಟಿಯಲ್ಲಿದ್ದ ಟಾಪ್‌ 3 ಸ್ಪರ್ಧಿಗಳಲ್ಲಿ ಯಾರಿಗೆ ‘ಟಿಕೆಟ್‌ ಟು ಫಿನಾಲೆ’ ಸಿಗಬೇಕು ಅಂತ ಉಳಿದ ಸ್ಪರ್ಧಿಗಳು ವೋಟ್‌ ಹಾಕಬೇಕಿತ್ತು. ಇದರಲ್ಲಿ ಸಂಗೀತಾಗೆ ಬಹುಮತ ಬಂತು, ಆಗಾಗಿ ಅವರಿಗೆ ಟಿಕೆಟ್‌ ನೀಡಲಾಯಿತು.

6 /8

ಟಾಸ್ಕ್‌ನಲ್ಲಿ ಹೆಚ್ಚು ಪಾಯಿಂಟ್ ಪಡೆಯವವರು ಫಿನಾಲೆಗೆ ಕಾಲಿಡಲಿದ್ದಾರೆ ಅಂತಲೇ ವೀಕ್ಷಕರು ಭಾವಿಸಿದ್ದರು. ಆದರೆ, ಬಿಗ್‌ಬಾಸ್‌ ಟ್ವೀಸ್ಟ್‌ ನೀಡಿ, ಎಲ್ಲರ ವಿಚಾರವನ್ನು ಉಲ್ಟಾಪಲ್ಟ ಮಾಡಿದೆ.

7 /8

ಬಿಗ್‌ ಬಾಸ್‌ ಈ ನಡೆಗೆ ಕಿಡಿಕಾರುತ್ತಿರುವ ನೆಟ್ಟಿಗರು, ವೋಟ್ಸ್ ಮೂಲಕ ‘ಟಿಕೆಟ್‌ ಟು ಫಿನಾಲೆ’ ಕೊಡುವ ಹಾಗಿದ್ದರೆ ಟಾಸ್ಕ್‌ ಯಾಕೆ ನಡೆಸಬೇಕಿತ್ತು ಅಂತ ಪ್ರಶ್ನೆ ಮಾಡುತ್ತಿದ್ದಾರೆ.

8 /8

ಇನ್ನು ಡ್ರೋನ್ ಪ್ರತಾಪ್‌ಗೆ ಅನ್ಯಾಯವಾಗಿದೆ ಅಂತ ಅವರ ಅಭಿಮಾನಿಗಳು ಬಿಗ್‌ಬಾಸ್‌ ವಿರುದ್ಧ ಗುಡುಗಿದ್ದಾರೆ. ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲಿ #JusticeForPrathap ಎಂಬ ಹ್ಯಾಷ್‌ ಟ್ಯಾಗ್‌ ಮೂಲಕ ಆಕ್ರೋಶ ಹೊರಹಾಕಿದ್ದಾರೆ.