Rakhi Sawant : ಸಾಕಷ್ಟು ಕಾಂಟ್ರೋವರ್ಸಿ ನಂತರ ತನ್ನ ಪತಿ ಆದಿಲ್ ದುರಾನಿಯೊಂದಿಗೆ ಕಾನೂನು ಹೋರಾಟ ನಡೆಸುತ್ತಿರುವ ಬಿಟೌನ್‌ ಮಾದಕ ಚೆಲುವೆ ನಟಿ ರಾಖಿ ಸಾವಂತ್ ದುಬೈನಲ್ಲಿ ತನ್ನ ನಟನಾ ಸಂಸ್ಥೆಯನ್ನು ಪ್ರಾರಂಭಿಸಲಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುವ ರಾಖಿ ಯಾವಾಗಲೂ ಪಾಪರಾಜಿಗಳನ್ನು ತನ್ನ ಕಡೆಗೆ ಆಕರ್ಷಿಸುವ ಕೆಲಸ ಮಾಡುತ್ತಿರುತ್ತಾಳೆ. ಇದೀಗ ರಾಖಿ ದುಬೈನಲ್ಲಿ ತನ್ನ ಹೊಸ ಉದ್ಯಮ ಪ್ರಾರಂಭಿಸಿದ್ದಾಳೆ.


COMMERCIAL BREAK
SCROLL TO CONTINUE READING

ಇನ್‌ಸ್ಟಂಟ್ ಬಾಲಿವುಡ್ ಶೇರ್ ಮಾಡಿರುವ ವಿಡಿಯೋದಲ್ಲಿ, ರಾಖಿ ಸಾವಂತ್, ʼನಾವು ದುಬೈ ಮತ್ತು ಮುಂಬೈನಲ್ಲಿ ರಾಖಿ ಸಾವಂತ್ ಅಕಾಡೆಮಿಯನ್ನು ತೆರೆಯುತ್ತಿದ್ದೇವೆ. ನಟನೆ, ನೃತ್ಯ, ಯೋಗ, ಜುಂಬಾ, ಹಾಡುಗಾರಿಕೆ, ಆಕ್ಷನ್, ಸಿನಿಮಾಟೋಗ್ರಫಿ ಮತ್ತು ಮಾರ್ಷಲ್ ಆರ್ಟ್‌ಗಳಲ್ಲಿ ಡಿಪ್ಲೊಮಾ ಕಲಿಯಬಹುದು. ಅಲ್ಲದೆ ನಾವು ವೆಬ್ ಸರಣಿಯೊಂದನ್ನು ಪ್ರಾರಂಭಿಸುತ್ತಿದ್ದು, ಅದರಲ್ಲಿ ವಿದ್ಯಾರ್ಥಿಗಳಿಗೆ ಕೆಲಸದ ಅವಕಾಶಗಳು ಸಿಗುತ್ತವೆ ಎಂದು ನಾನು ಖಾತರಿಪಡಿಸುತ್ತೇನೆ..ʼ ಎಂದು ಹೇಳಿದ್ದಾರೆ..



ಇದನ್ನೂ ಓದಿ: ವಿರೋಧಿಸಿದ್ರೂ ತಗ್ಗಿಲ್ಲ ದೀಪಿಕಾ ವರ್ಚಸ್ಸು..! ಆಸ್ಕರ್‌ ಕಾರ್ಯಕ್ರಮಕ್ಕೆ ʼಕನ್ನಡತಿʼ ಆ್ಯಂಕರ್


ವೀಡಿಯೊ ನೋಡಿದ ನಂತರ, ನೆಟಿಜನ್ಸ್‌ ಟ್ರೋಲ್‌ ಮಾಡೋಕೆ ಸ್ಟಾರ್ಟ್‌ ಮಾಡಿದ್ದಾರೆ. ವಿವಾದಗಳನ್ನು ಹುಟ್ಟುಹಾಕುವ ಮೂಲಕ ಮಾಧ್ಯಮಗಳನ್ನು ಆಕರ್ಷಿಸುವುದು ಹೇಗೆ ಎಂದು ರಾಖಿ ಕಲಿಸುತ್ತಾರೆ ನೋಡಿ.. ಅಂತ ಅನೇಕ ನೆಟಿಜನ್‌ಗಳು ವ್ಯಂಗ್ಯವಾಡಿದ್ದಾರೆ. ಇನ್ನು ಕೆಲವರು ರಾಖಿಯ ವೃತ್ತಿಜೀವನವನ್ನು ಅಪಹಾಸ್ಯ ಮಾಡಿದ್ದಾರೆ. ʼನಟನಾ ಅಕಾಡೆಮಿ ಅಥವಾ ಅತಿ-ನಟನಾ ಅಕಾಡೆಮಿ?" ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. ತನಗೆ ಗೊತ್ತಿಲ್ಲ ಇನ್ನೂ ಬೇರೆಯವರಿಗೆ ಏನ್‌ ಕಳಿಸ್ತಾಳೆ ಗುರು.. ಎನ್ನೂ ಏನೇನ್‌ ನೋಡ್ಬೇಕೋ ಈ ಕಣ್ಣಿಂದ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.