ವಿರೋಧಿಸಿದ್ರೂ ತಗ್ಗಿಲ್ಲ ದೀಪಿಕಾ ವರ್ಚಸ್ಸು..! ಆಸ್ಕರ್‌ ಕಾರ್ಯಕ್ರಮಕ್ಕೆ ʼಕನ್ನಡತಿʼ ಆ್ಯಂಕರ್

ಮಾರ್ಚ್ 12 ರಂದು ನಡೆಯಲಿರುವ 95ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿಟೌನ್‌ ಬೆಡಗಿ, ಕನ್ನಡತಿ ದೀಪಿಕಾ ಪಡುಕೋಣೆ ಮಿಂಚಲಿದ್ದಾರೆ. ಇತ್ತೀಚೆಗೆ ದೀಪಿಕಾಗೆ ಆಸ್ಕರ್‌ ಟೀಂನಿಂದ ಆಹ್ವಾನ ಬಂದಿತ್ತು. ಆಸ್ಕರ್ ಪ್ರಶಸ್ತಿ ಪ್ರದಾನ ಮಾಡುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಆಕೆಯ ಹೆಸರನ್ನು ಸೇರಿಸಲಾಗಿದೆ. ದೀಪಿಕಾ ಪಡುಕೋಣೆ ಅವರನ್ನು ಆಸ್ಕರ್‌ ಕಾರ್ಯಕ್ರಮಕ್ಕೆ ನಿರೂಪಕಿಯಾಗಿ ಆಹ್ವಾನಿಸಿದ ನಂತರ, ದೀಪ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. 

Written by - Krishna N K | Last Updated : Mar 3, 2023, 02:12 PM IST
  • ಮಾರ್ಚ್ 12 ರಂದು 95ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
  • ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡತಿ ದೀಪಿಕಾ ಪಡುಕೋಣೆ ಮಿಂಚಲಿದ್ದಾರೆ.
  • ದೀಪಿಕಾ ಅವರನ್ನು ಆಸ್ಕರ್‌ ಕಾರ್ಯಕ್ರಮಕ್ಕೆ ನಿರೂಪಕಿಯಾಗಿ ಆಹ್ವಾನಿಸಲಾಗಿದೆ.
ವಿರೋಧಿಸಿದ್ರೂ ತಗ್ಗಿಲ್ಲ ದೀಪಿಕಾ ವರ್ಚಸ್ಸು..! ಆಸ್ಕರ್‌ ಕಾರ್ಯಕ್ರಮಕ್ಕೆ ʼಕನ್ನಡತಿʼ ಆ್ಯಂಕರ್ title=

Deepika Padukone Oscar : ಮಾರ್ಚ್ 12 ರಂದು ನಡೆಯಲಿರುವ 95ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿಟೌನ್‌ ಬೆಡಗಿ, ಕನ್ನಡತಿ ದೀಪಿಕಾ ಪಡುಕೋಣೆ ಮಿಂಚಲಿದ್ದಾರೆ. ಇತ್ತೀಚೆಗೆ ದೀಪಿಕಾಗೆ ಆಸ್ಕರ್‌ ಟೀಂನಿಂದ ಆಹ್ವಾನ ಬಂದಿತ್ತು. ಆಸ್ಕರ್ ಪ್ರಶಸ್ತಿ ಪ್ರದಾನ ಮಾಡುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಆಕೆಯ ಹೆಸರನ್ನು ಸೇರಿಸಲಾಗಿದೆ. ದೀಪಿಕಾ ಪಡುಕೋಣೆ ಅವರನ್ನು ಆಸ್ಕರ್‌ ಕಾರ್ಯಕ್ರಮಕ್ಕೆ ನಿರೂಪಕಿಯಾಗಿ ಆಹ್ವಾನಿಸಿದ ನಂತರ, ದೀಪ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. 

ಹೌದು.. ಕನ್ನಡಿಗರು ಸಾಗರದಾಚೆಗೂ ಗುರುತಿಸಿಕೊಳ್ಳುತ್ತಿದ್ದಾರೆ. ಅದರಂತೆ ಈ ಬಾರಿಯ ಆಸ್ಕರ್ ಪ್ರಶಸ್ತಿಯನ್ನು ಇಡೀ ದೇಶವೇ ಕುತೂಹಲದಿಂದ ನೋಡುತ್ತಿದೆ. ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡು ಮೂಲ ಹಾಡಿನ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ ಎಂಬ ಸುದ್ದಿ ಎಲ್ಲರಿಗೂ ತಿಳಿದಿದೆ. ಈ ಹಾಡಿಗೆ ಆಸ್ಕರ್ ಪ್ರಶಸ್ತಿ ಬರುವುದು ಬಹುತೇಕ ಫಿಕ್ಸ್ ಎಂದು ಅಂದುಕೊಂಡಿದ್ದಾರೆ. ಇದೀಗ ಎಲ್ಲರ ಆಶಯ ನಿಜವಾಗಬಹುದೇ? ಅಥವಾ.. ಇಲ್ಲವೇ..? ಎಂದು ತಿಳಿಯಲು ಇನ್ನೂ ಕೆಲ ದಿನ ಕಾದು ನೋಡಿದರೆ ಗೊತ್ತಾಗುತ್ತದೆ.

 
 
 
 

 
 
 
 
 
 
 
 
 
 
 

A post shared by Deepika Padukone (@deepikapadukone)

ಇದನ್ನೂ ಓದಿ: "ತತ್ಸಮ ತದ್ಭವ" ಚಿತ್ರದಲ್ಲಿ ಬಾಲಾಜಿ ಮನೋಹರ್ ಪಾತ್ರ ಏನು...?

ಇದೀಗ ಆಸ್ಕರ್‌ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಆ್ಯಂಕರ್‌ಗಳ ಆಯ್ಕೆಯೂ ಸಹ ಮುಗಿದಿದೆ. ಅದರಂತೆ ಕನ್ನಡತಿ ದೀಪಿಕಾ ಸೇರಿದಂತೆ ರಿಜ್ ಅಹ್ಮದ್, ಎಮಿಲಿ ಬ್ಲಂಟ್, ಗ್ಲೆನ್ ಕ್ಲೋಸ್, ಜೆನ್ನಿಫರ್ ಕೊನ್ನೆಲ್ಲಿ, ಅರಿಯಾನಾ ಡೀ ಬೋಸ್, ಸ್ಯಾಮ್ಯುಯೆಲ್ ಎಲ್ ಜಾಕ್ಸನ್, ಡ್ವೇನ್ ಜಾನ್ಸನ್, ಮೈಕೆಲ್ ಬಿ. ಜೋರ್ಡಾನ್, ಟ್ರಾಯ್ ಕೋಟ್ಸೂರ್, ಜೊನಾಥನ್ ಮೇಜರ್ಸ್, ಮೆಲಿಸ್ಸಾ ಮೆಕ್‌ಕಾರ್ಥಿ, ಕ್ವೆಡ್‌ಲೋವ್ ಮೊನಾ, ಜೋಯ್ ಡೋನಿ ಯೆನ್‌ ಆಸ್ಕರ್‌ ವೇದಿಕೆ ಮೇಲೆ ಸದ್ದು ಮಾಡಲಿದ್ದಾರೆ.

ಈ ವರ್ಷ ದೀಪಿಕಾ ಪಡುಕೋಣೆ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದಾರೆ. ಪಠಾಣ್ ಸಿನಿಮಾ ವಿಚಾರದಲ್ಲಿ ಎಲ್ಲರೂ ದೀಪಿಕಾ ಅವರನ್ನು ಟಾರ್ಗೆಟ್ ಮಾಡಿದ್ದರು. ಪಠಾಣ್ ಸಿನಿಮಾ ಬಿಡುಗಡೆಗೂ ಮುನ್ನವೇ ದೀಪಿಕಾ ಭೇಷರಂ ಹಾಡಿನಲ್ಲಿ ಕೇಸರಿ ಬಿಕಿನಿಯಲ್ಲಿ ಡ್ಯಾನ್ಸ್ ಮಾಡಿದ್ದಕ್ಕಾಗಿ ಸಾಕಷ್ಟು ಟ್ರೋಲ್ ಆಗಿದ್ದರು. ಆದರೆ ಪಠಾಣ್ ಸಿನಿಮಾ ಸಾವಿರ ಕೋಟಿ ಕಲೆಕ್ಷನ್ ಮಾಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News