Rakhi Sawant ಮೇಲೆ ಅಶ್ಲೀಲ ವಿಡಿಯೋ ಸೋರಿಕೆ ಮಾಡಿದ ಆರೋಪ! ಸುಪ್ರೀಂ ಕೋರ್ಟ್ ತಲುಪಿದ ಪ್ರಕರಣ
Rakhi Sawant Video Leak Case: ರಾಖಿ ಸಾವಂತ್ ತನ್ನ ಮಾಜಿ ಪತಿ ಆದಿಲ್ ದುರಾನಿ ಮಾಡಿರುವ ಅಶ್ಲೀಲ ವೀಡಿಯೊಗಳನ್ನು ಸೋರಿಕೆ ಮಾಡಿದ ಆರೋಪದಿಂದ ಮತ್ತೊಮ್ಮೆ ವಿವಾದಕ್ಕೆ ಒಳಗಾಗಿದ್ದರು. ರಾಖಿ ಪತಿ ಕೂಡ ಆಕೆಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಆದರೆ, ಅದನ್ನು ತಪ್ಪಿಸಲು ರಾಖಿ ಕೂಡ ಫೈಟ್ ಮಾಡಲು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ.
Defamation Case Against Rakhi Sawant: ಇತ್ತೀಚೆಗಷ್ಟೇ ರಾಖಿ ಸಾವಂತ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು, ಆದರೆ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಅವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಹೀಗಿರುವಾಗ ರಾಖಿ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ರಾಖಿ ಮತ್ತು ಆದಿಲ್ ನಡುವಿನ ವಿವಾದ ನಿಲ್ಲುವ ಮಾತೆ ಎತ್ತುತ್ತಿಲ್ಲ. ವಿಚ್ಛೇದನದ ಬಳಿಕ ಇಬ್ಬರೂ ಪರಸ್ಪರ ಗಂಭೀರ ಆರೋಪಗಳನ್ನು ಮಾಡುತ್ತಲೇ ಇದ್ದಾರೆ. ಆದಿಲ್ ದುರಾನಿ ಅವರು ರಾಖಿ ಸಾವಂತ್ ಕೆಲ ಖಾಸಗಿ ವಿಡಿಯೋಗಳನ್ನು ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ರಾಖಿ ವಿರುದ್ಧ ಎಫ್‌ಐಆರ್ ಕೂಡ ದಾಖಲಿಸಿದಾರೆ. ಆದರೆ ರಾಖಿ ತನ್ನ ರಕ್ಷಣೆಯಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾಳೆ.
ಇದಾದ ಬಳಿಕ ಬಾಂಬೆ ಹೈಕೋರ್ಟ್ ರಾಖಿ ಅರ್ಜಿಯನ್ನು ತಿರಸ್ಕರಿಸಿತ್ತು. ಇದೀಗ ಬಂಧನದಿಂದ ಪಾರಾಗಲು ರಾಖಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಹೀಗಾಗಿ ಈ ಪ್ರಕರಣದ ವಿಚಾರಣೆ ಏಪ್ರಿಲ್ 22 ರಂದು ನಡೆಯಲಿದೆ.
ಆದಿಲ್ ರಾಖಿ ಸಾವಂತ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500 ರ ಅಡಿಯಲ್ಲಿ ರಾಖಿ ವಿರುದ್ಧ ಅವರು ಮಾನನಷ್ಟ ಆರೋಪ ಹೂಡಿದ್ದಾರೆ ಮತ್ತು ಸೆಕ್ಷನ್ 34 ರ ಅಡಿಯಲ್ಲಿ ಅಪರಾಧ ಮಾಡುವ ಉದ್ದೇಶದಿಂದ ಸಂಗಾತಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ-Bollywood Actress: ಹನಿಮೂನ್ ವೇಳೆ ನಡೆದ ಆ ಘಟನೆಯ ಬಳಿಕ ನನಗೆ ವಿವಾಹದ ಮನವರಿಕೆಯಾಯಿತು ಎಂದ ಖ್ಯಾತ ನಟಿ
ರಾಖಿ ಸಾವಂತ್ ವಿರುದ್ಧದ ಈ ಆರೋಪಗಳ ವಿಚಾರಣೆ ಏಪ್ರಿಲ್ 22 ರಂದು ನಡೆಯಲಿದೆ. ಇದೀಗ ಈ ನಿರ್ಧಾರ ಯಾರ ಪರವಾಗಿ ಹೊರಬರಲಿದೆ ಎಂಬುದು ಕಾಲವೇ ನಿರ್ಧರಿಸಲಿದೆ. ಸದ್ಯ, ಸದಾ ಖುಷಿಯಾಗಿ, ಬಬ್ಲಿಯಾಗಿರುವ ರಾಖಿ ಸಾವಂತ್ ಪ್ರಕರಣದಿಂದ ಸಾಕಷ್ಟು ನೊಂದು ಹೋಗಿದ್ದಾರೆ ಎಂದರೆ ತಪ್ಪಾಗಲಾರದು.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.